November 23, 2026
ವರದಿ

ನೆರಿಯ ಗ್ರಾಮದ ನಾಗರಿಕರ ಸಮಸ್ಯೆಗಳ ಪರಿಹಾರಕ್ಕೆ ನಾಗರಿಕರ ಹಿತರಕ್ಷಣಾ ಸಮಿತಿ ರಚನೆ

ಬೆಳ್ತಂಗಡಿ: ನೆರಿಯ ಗ್ರಾಮದ ನಾಗರಿಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಸಮಗ್ರವಾಗಿ ಚರ್ಚಿಸಿ, ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ ದಿನಾಂಕ 17.11.2026ರಂದು ಸಿಯೋನ್ ಆಶ್ರಮ ಟ್ರಸ್ಟ್ (ರಿ.), ಗಂಡಿಬಾಗಿಲು ಇಲ್ಲಿ ನೆರಿಯ ಗ್ರಾಮದ ನಾಗರಿಕರ ಹಿತರಕ್ಷಣಾ ವೇದಿಕೆಯ ಸಭೆಯನ್ನು ಆಯೋಜಿಸಲಾಗಿತ್ತು.

ಸಭೆಯ ಅಧ್ಯಕ್ಷತೆಯನ್ನು ಸಿಯೋನ್ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟಿ ಡಾ. ಯು.ಸಿ. ಪೌಲೋಸ್ ರವರು ವಹಿಸಿದ್ದರು.ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶ್ರೀ ರಕ್ಷಿತ್ ಶಿವರಾಂ, ಕರ್ನಾಟಕ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಶ್ರೀ ಪಿ.ಟಿ. ಸೆಬಾಸ್ಟಿಯನ್, ನೆರಿಯ ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷರುಗಳಾದ ಶ್ರೀ ಮಹಮ್ಮದ್ ಮತ್ತು ಶ್ರೀ ಅಶ್ರಫ್, ಸಮಾಜಸೇವಕರಾದ ಶ್ರೀ ಪ್ರವೀಣ್ ಹಳ್ಳಿಮನೆ ಉಜಿರೆ, ನೆರಿಯ ಪಂಚಾಯತ್ನ ಮಾಜಿ ಸದಸ್ಯರಾದ ಶ್ರೀ ಎಂ.ಜೆ. ಸೆಬಾಸ್ಟಿಯನ್ ಹಾಗೂ ಗ್ರಾಮಸ್ಥರಾದ ಶ್ರೀ ಮಂಜಪ್ಪ ಕೊಲೋಡಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶ್ರೀ ರಕ್ಷಿತ್ ಶಿವರಾಂ ಹಾಗೂ ಕರ್ನಾಟಕ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಶ್ರೀ ಪಿ.ಟಿ. ಸೆಬಾಸ್ಟಿಯನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಸಭೆಯಲ್ಲಿ ಗ್ರಾಮದ ನಾಗರಿಕರು ತಮ್ಮ ವಿವಿಧ ಸಮಸ್ಯೆಗಳು, ಸಂಕಷ್ಟಗಳು ಹಾಗೂ ಬೇಡಿಕೆಗಳನ್ನು ವಿವರವಾಗಿ ಮಂಡಿಸಿದರು. ಈ ಕುರಿತು ಸಭಾಧ್ಯಕ್ಷರು ಮತ್ತು ಮುಖ್ಯ ಅತಿಥಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಲಾಯಿತು.

ನಾಗರಿಕರ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನಮಾಡುವುದಾಗಿ ಅತಿಥಿಗಳು ಭರವಸೆ ನೀಡಿದರು. ನಾಗರಿಕರ ನ್ಯಾಯಯುತ ಹಕ್ಕುಗಳು ಮತ್ತು ಬೇಡಿಕೆಗಳಿಗಾಗಿ ನಡೆಯುವ ಹೋರಾಟದಲ್ಲಿ ಸದಾ ನಾಗರಿಕರರೊಂದಿಗೆ ನಿಂತು, ಪ್ರತಿಯೊಂದು ಹಂತದಲ್ಲಿಯೂ ಬೆಂಬಲ ನೀಡುವುದಾಗಿ ತಿಳಿಸಿದರು. ಅಲ್ಲದೆ, ನಾಗರಿಕರ ಸಂಕಷ್ಟಗಳಿಗೆ ಸ್ಪಂದಿಸಿ ಸೂಕ್ತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ನಿರಂತರ ಸಹಕಾರ ನೀಡುವ ಭರವಸೆ ವ್ಯಕ್ತಪಡಿಸಿದರು.ಸಭೆಯ ನಿರ್ಣಯದಂತೆ ನೆರಿಯ ಗ್ರಾಮದ ನಾಗರಿಕರ ಹಿತರಕ್ಷಣೆಯ ದೃಷ್ಟಿಯಿಂದ ನೆರಿಯ ನಾಗರಿಕರ ಹಿತರಕ್ಷಣಾ ಸಮಿತಿಯನ್ನು ರಚಿಸಲಾಯಿತು.

ಸಮಿತಿಯ ಗೌರವಾಧ್ಯಕ್ಷರಾಗಿ ಶ್ರೀ ರಕ್ಷಿತ್ ಶಿವರಾಂ ಮತ್ತು ಶ್ರೀ ಡಾ.ಯು.ಸಿ.ಪೌಲೋಸ್, ಅಧ್ಯಕ್ಷರಾಗಿ ಶ್ರೀ ಸೆಬಾಸ್ಟಿಯನ್ ಎಂ.ಜೆ., ಉಪಾಧ್ಯಕ್ಷರಾಗಿ ಶ್ರೀ ಮಹಮ್ಮದ್ ಮತ್ತು ಶ್ರೀ ಅಶ್ರಫ್, ಕಾರ್ಯದರ್ಶಿಗಳಾಗಿ ಶ್ರೀ ಕೊರಗಪ್ಪ ಕೊಲೋಡಿ ಮತ್ತು ಶ್ರೀ ಮಿಥುನ್, ಸದಸ್ಯರಾಗಿ ಶ್ರೀ ಬಿಜು ನಡುವತ್ತೇಟ್, ಶ್ರೀಮತಿ ತ್ರೇಸಿಯಮ್ಮ, ಶ್ರೀ ರಾಜಪ್ಪ ಗೌಡ ಅಂಬ್ಲೆ ಹಾಗೂ ಶ್ರೀಮತಿ ಮಮತ ಕೊಲೋಡಿ ಅವರನ್ನು ಆಯ್ಕೆ ಮಾಡಲಾಯಿತು.ನೆರಿಯ ಗ್ರಾಮದ ನಾಗರಿಕರ ಸಮಸ್ಯೆಗಳಿಗೆ ಸಂಘಟಿತವಾಗಿ ಧ್ವನಿಯಾಗಿ, ಗ್ರಾಮಸ್ಥರ ನ್ಯಾಯಯುತ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಸಮಿತಿ ಕಾರ್ಯನಿರ್ವಹಿಸಲಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

Related posts

ಲಾಯಿಲ–ಕೇಳ್ತಾಜೆ (ಕಿಲ್ಲೂರು) ರಸ್ತೆ ದುಸ್ಥಿತಿಗೆ ಎಸ್‌ಡಿಪಿಐ ಆಕ್ರೋಶ

Suddi Udaya

20 ವರ್ಷಗಳ ಯಶಸ್ವಿ ಪಯಣ: ಜು.10- ಮಡಂತ್ಯಾರಿನಲ್ಲಿ ಲುಕ್ ಆಪ್ಟಿಕ್ಸ್ ಮರು ಉದ್ಘಾಟನೆ:

Suddi Udaya

ನಡ ಸ.ಹಿ. ಪ್ರಾ. ಶಾಲೆಯ ಶತಮಾನೋತ್ಸವ ಸಮಿತಿ ವತಿಯಿಂದ ಉದ್ಯಮಿ ಮೋಹನ್ ಕುಮಾರ್ ರವರಿಗೆ ಗೌರವಾರ್ಪಣೆ

Suddi Udaya

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 2024-25 ಸಾಲಿನ ಅಂತಿಮ ವರ್ಷದ ಪರೀಕ್ಷೆ: ಉಜಿರೆ ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿಗೆ ಸತತ ಮೂರನೇ ಬಾರಿಗೆ ಶೇಕಡಾ 100 ಫಲಿತಾಂಶ

Suddi Udaya

ಪಡಂಗಡಿ ಗ್ರಾ.ಪಂ. ಸದಸ್ಯ ಹಾಮದ್ ಬಾವ ಹೃದಯಾಘಾತದಿಂದ ನಿಧನ

Suddi Udaya

ಧರ್ಮಸ್ಥಳ ಬುರುಡೆ ಪ್ರಕರಣ: ಚಿನ್ನಯ್ಯನಿಗೆ ಜೀವ ಬೆದರಿಕೆ ಹಿನ್ನೆಲೆ ರಕ್ಷಣೆ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ

Suddi Udaya
error: Content is protected !!