November 23, 2026
Uncategorized

ಗೌಡ ಸಮುದಾಯ ನೆಲೆಗಟ್ಟು, ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವಸಂಕಲ್ಪ: ಬೆಳ್ತಂಗಡಿಯಲ್ಲಿ ಸಂಭ್ರಮದ “ಗೌಡರೆ ಗೌಜಿ ಗಮ್ಮತ್ತು”ತುಳು ಸಾಂಸ್ಕೃತಿಕ ಸ್ಪರ್ಧೆ ವಿನೂತನ ಕಾರ್ಯಕ್ರಮಕ್ಕೆ ಚಾಲನೆ

ಬೆಳ್ತಂಗಡಿ: ಗೌಡ ಸಮುದಾಯ ನೆಲೆಗಟ್ಟು, ಸಂಸ್ಕೃತಿಯ ಪರಿಚಯವ ಮುಂದಿನ ತಲೆಮಾರಿಗೆ ಕೊಂಡೊಯ ಹಾಗೂ ಗೌಡ. ಸಮುದಾಯದ ಅಸ್ತಿತ್ವ ಕಾಪಾಡಿಕೊಳ್ಳುವ ಉದ್ದೇಶದೊಂದಿಗೆ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಹಳೆ ಕೋಟೆ ಬೆಳ್ತಂಗಡಿ ಇದರ ಆಶ್ರಯದಲ್ಲಿ ವಾಣಿ ಸೌಹಾರ್ದ ಕೋ-ಅಪರೇಟಿವ್ ಸೊಸೈಟಿ ಬೆಳ್ತಂಗಡಿ, ‌ಸ್ಪಂದನಾ ಸೇವಾ ಸಂಘ ಬೆಳ್ತಂಗಡಿ ಇವುಗಳ ಆಶ್ರಯದಲ್ಲಿ ಯುವವೇದಿಕೆ ಮತ್ತು ಮಹಿಳಾ ವೇ ನೇತೃತ್ವದಲ್ಲಿ “ಗೌಡರೆ ಗೌಜಿ ಗಮ್ಮತ್ತು”ತುಳು ಸಾಂಸ್ಕೃತಿಕ ಸ್ಪರ್ಧೆ-2026 ಎಂಬ ವಿನೂತನ ಕಾರ್ಯಕ್ರಮವ ನ.22ರಂದು ವಾಣಿ ಶಿಕ್ಷಣ ಸಂಸ್ಥೆನ ಆವರಣ ಮತ್ತು ಎಪಿಎಂ ಆವರಣದಲ್ಲಿ ಚಾಲನೆ ನೀಡಲಾಯಿತು.

ಬೆಳಿಗ್ಗೆ ಭಾರತೀಯ ಸಂಸ್ಕೃತಿಯನ್ನು ಬಿಂಬಿಸು ವೈವಿಧ್ಯಮಯ ಪಥ ಸಂಚಲನ ಬೆಳ್ತಂಗ ಸಂತೆಕಟ್ಟೆ ಅಯ್ಯಪ್ಪ ಮಂದಿರದಿಂದ ಹೊರಟು ರಾಜ ಮಾರ್ಗದಲ್ಲಿ ವಾ ಶಿಕ್ಷಣ ಸಂಸ್ಥೆಗಳಯವರೆಗೆ ಅದ್ದೂರಿಯಾಗಿ ನಡೆಯಿತು.

ಗೌಡರೆ ಗೌಜಿ ಗಮ್ಮತ್ತು ತುಳು ಸಾಂಸ್ಕೃತಿಕ ಸ್ಪರ್ಧೆಗೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ದೀಪ ಬೆಳಗಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕುಶಾಲಪ್ಪ ಗೌಡ ಹಾಗೂ
ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ನಾಗೇಶ್ ಕುಮಾರ್ ಗೌಡ ಕೊಕ್ಕಡ,
ಮೋಹನ ಗೌಡ ಕಲ್ಮಂಜ, ಮಂಗಳೂರು ಸಂಘದ ಆನಂದ ಪಿ.ಹೆಚ್, ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಕಾರ್ಯದರ್ಶಿ ಗಣೇಶ್ ಗೌಡ, ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ ಗೌಡ, ಕೋಶಾಧಿಕಾರಿ ಯುವರಾಜ್, ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ಸುರೇಶ್ ಗೌಡ ಕೌಡಂಗೆ , ಮಹಿಳಾ ವೇದಿಕೆಯ ಅಧ್ಯಕ್ಷೆ ಗೀತಾ ರಾಮಣ್ಣ ಗೌಡ, ಕಾಯ೯ದಶಿ೯ ಶ್ರೀಮತಿ ಲೀಲಾ ಆನಂದ ಗೌಡ ಮುಂಡೂರು, ದಿನೇಶ್ ಗೌಡ ನಿಡ್ಡಾಜೆ, ರಾಘವ ಗೌಡ ಕುಡುಮಡ್ಕ, ದೇವಿ ಪ್ರಸಾದ್‌ ಕಡಮಾಜೆ, ಶ್ರೀಮತಿ ಲೋಕೇಶ್ವರಿ ವಿನಯ ಚಂದ್ರ, ಕುಮಾರಿ ಪ್ರಾಪ್ತಿ ಯಂ ಗೌಡ. ಶ್ರೀನಿವಾಸ್ ಗೌಡ ಬೆಳಾಲು, ಮನೋಹರ ಗೌಡ ಮತ್ತು ರಾಮಣ್ಣ ಗೌಡ ಮುಗೇರಡ್ಕ,‌ಸೋಮೇ ಗೌಡ ಮೊದಲಾದವರು ಉಪಸ್ಥಿತರಿದ್ದರು.

ಬೆಳ್ಳಿಯಪ್ಪ ಕೆ, ಮೀನಾಕ್ಷಿ, ಸೀತಾರಾಮ್, ವಿಜೇತಾ ಸನ್ಮಾನ ಪತ್ರ ವಾಚಿಸಿದರು.ಯುವ ವೇದಿಕೆ ಅಧ್ಯಕ್ಷ ಚಂದ್ರಕಾಂತ್‌ ನಿಡ್ಡಾಜೆ ಸ್ವಾಗತಿಸಿದರು. ಮಹೇಶ್ ಬೆಳಾಲು‌ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Related posts

ಕೆ.ಎಮ್.ಜೆ ಗುರುವಾಯನಕೆರೆ ಸರ್ಕಲ್ ಮಾಸಿಕ ಸಭೆ: ರಾಜ್ಯ ಕೌನ್ಸಿಲರ್ ಗಳಾಗಿ ಆಯ್ಕೆಯಾದ ಅಬ್ಬೋನು ಮದ್ದಡ್ಕ, ಉಮ್ಮರ್ ಮಾಸ್ಟರ್ ಗೆ ಗೌರವಾರ್ಪಣೆ.

Suddi Udaya

ಡಾ ಹೆಗ್ಗಡೆಯವರ ರಾಜ್ಯ ಸಭಾ ನಿದಿಯಿಂದ 100 ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಮಂಜೂರು

Suddi Udaya

ಶಿವಗಿರಿಯಾತ್ರೆಯಲ್ಲಿ ಗೆಜ್ಜೆಗಿರಿಯ ಪ್ರಮುಖರು

Suddi Udaya

ಬೆಳ್ತಂಗಡಿ ಗಣೇಶ್ ಹೋಟೆಲ್ ನ ಮಾಲಕ ದಿವಾಕರ ಪ್ರಭು ನಿಧನ

Suddi Udaya

ಸೇವಾಭಾರತಿ ನೂತನ ಕಟ್ಟಡ ನಿರ್ಮಾಣಕ್ಕೆ ಶ್ರೀಮತಿ ರೋಹಿಣಿ ಅಚ್ಯುತ ಗೌಡ ಇವರಿಂದ ದೇಣಿಗೆ:

Suddi Udaya

ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಹದಿಹರೆಯದ ಹೆಣ್ಣು ಮಕ್ಕಳಲ್ಲಿ ಕಂಡುಬರುವ ಬದಲಾವಣೆಯ ಕುರಿತು ಮಾಹಿತಿ

Suddi Udaya
error: Content is protected !!