November 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನ. 29: ಉಜಿರೆ ಮತ್ತು ಮಂಗಳೂರಿನಲ್ಲಿ ಅಗ್ರಿಲೀಫ್ ಸಂಸ್ಥೆಯಿಂದ ಬೃಹತ್ ಉದ್ಯೋಗ ನೇಮಕಾತಿ ಅಭಿಯಾನ*

ನಿಡ್ಲೆ: ಅಡಿಕೆ ಹಾಳೆಯಿಂದ ತಯಾರಿಸುವ ಊಟದ ತಟ್ಟೆ ಹಾಗೂ ಇತರ ಉತ್ಪನ್ನಗಳ ತಯಾರಿಕಾ ಸಂಸ್ಥೆಯಾಗಿರುವ ಅಗ್ರಿಲೀಫ್ (AGRILEAF) ವತಿಯಿಂದ ನ. 29ರಂದು ಉಜಿರೆ ಹಾಗೂ ಮಂಗಳೂರಿನಲ್ಲಿ ಬೃಹತ್ ಉದ್ಯೋಗ ನೇಮಕಾತಿ ಅಭಿಯಾನ (Job Drive) ಹಮ್ಮಿಕೊಳ್ಳಲಾಗಿದೆ.

ಸಂಸ್ಥೆಯ ಬೆಳವಣಿಗೆಯ ಪಯಣದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಒಂದೇ ದಿನ ಎರಡು ಸ್ಥಳಗಳಲ್ಲಿ ಈ ಉದ್ಯೋಗ ನೇಮಕಾತಿ ಅಭಿಯಾನ ನಡೆಯಲಿದೆ.ನ. 29ರಂದು ಭಾನುವಾರ ಬೆಳಗ್ಗೆ 9.30ರಿಂದ ಉಜಿರೆಯ ದಿ ಓಷನ್ ಪರ್ಲ್ ಹೋಟೆಲ್ ಹಾಗೂ ಮಂಗಳೂರಿನ ಕೊಟ್ಟಾರ ಚೌಕಿಯ ವರ್ಕ್‌ವರ್ಕ್ ಟ್ರಯಾಂಗಲ್‌ನಲ್ಲಿ ಏಕಕಾಲದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.ಸಂಸ್ಥೆಯಲ್ಲಿ ಮಾರಾಟ ಮತ್ತು ಮಾರುಕಟ್ಟೆ (Sales and Marketing), ಲೆಕ್ಕಪತ್ರ ಮತ್ತು ಹಣಕಾಸು (Accounts and Finance), ಘಟಕ ನಿರ್ವಹಣೆ ಮತ್ತು ಉತ್ಪಾದನೆ (Plant and Production), ಸರಬರಾಜು ಸರಪಳಿ ಮತ್ತು ಖರೀದಿ (Supply Chain and Procurement), ಆಡಳಿತ ಮತ್ತು ಮಾನವ ಸಂಪನ್ಮೂಲ (Admin and HR) ಹಾಗೂ ತಾಂತ್ರಿಕ ಮತ್ತು ಎಂಜಿನಿಯರಿಂಗ್‌ ಸೇವೆಗಳು (Technical and Engineering Services) ಸೇರಿದಂತೆ ವಿವಿಧ ವಿಭಾಗಗಳಲ್ಲಿ ಉದ್ಯೋಗಾವಕಾಶಗಳಿವೆ.

ಪೂರ್ವ ನೋಂದಣಿ ಕಡ್ಡಾಯ: ಉದ್ಯೋಗ ನೇಮಕಾತಿ ಅಭಿಯಾನದಲ್ಲಿ ಭಾಗವಹಿಸಲು ಆಸಕ್ತ ಅಭ್ಯರ್ಥಿಗಳು ಕಡ್ಡಾಯವಾಗಿ ಪೂರ್ವ ನೋಂದಣಿ ಮಾಡಿಕೊಳ್ಳಬೇಕು. ಸಂಸ್ಥೆ ಪ್ರಕಟಿಸಿರುವ ಜಾಹೀರಾತಿನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ನೋಂದಾಯಿಸಿಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಇ-ಮೇಲ್ ವಿಳಾಸ [email protected] ಅಥವಾ ಮೊಬೈಲ್ ಸಂಖ್ಯೆ 9606023005 ಅನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Related posts

ಧರ್ಮಸ್ಥಳ ಗ್ರಾಮ ಪಂಚಾಯತ್ ಸಾಮಾಜಿಕ ಪರಿಶೋಧನೆ ಪೂರ್ವಭಾವಿ ಸಭೆ

Suddi Udaya

ಮೇಲಂತಬೆಟ್ಟು ಗ್ರಾಮ ಪಂಚಾಯತ್ ಗೆ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ರಥ

Suddi Udaya

ಭಾರೀ ಮಳೆಗೆ ತುಂಬಿ ಹರಿದ ಅಂಬಡೆಬೆಟ್ಟು ಸೇತುವೆ ನದಿ

Suddi Udaya

ಮಾಜಿ ಶಾಸಕ ಕೆ.ವಸಂತ ಬಂಗೇರರಿಗೆ ಸಾವಿರದ ನುಡಿ ನಮನ ಕಾಯ೯ಕ್ರಮ

Suddi Udaya

ನಾವೂರು: ಸಮಾಲೋಚನಾ ಸಭೆ ಹಾಗೂ ಟ್ರಸ್ಟ್ ಘೋಷಣೆ

Suddi Udaya

ದ.ಕ. ಜಿಲ್ಲಾ ಪ.ಪೂ.ಕಾಲೇಜುಗಳ ಸಂಘ ಮತ್ತು ಎಸ್ ಡಿ ಎಂ ಪ.ಪೂರ.ಕಾಲೇಜಿನ ಜಂಟಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ-ಶಿಕ್ಷಣ ಮತ್ತು ಆರೋಗ್ಯ ಎಲ್ಲರಿಗೂ ಸಿಗುವುದೇ ಸರಕಾರದ ಆಶಯ: ಎಸ್ ಎಲ್ ಭೋಜೇಗೌಡ

Suddi Udaya
error: Content is protected !!