November 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಭಾರತ ಪಂಚರತ್ನ ಪ್ರಶಸ್ತಿ ಪುರಸ್ಕೃತ ಹಾಜಿ ಅಬ್ದುಲ್ ಲೆತೀಫ್ ಸಾಹೇಬ್ ಅವರಿಗೆ ಸನ್ಮಾನ,

ಬೆಳ್ತಂಗಡಿ; ಶಿಕ್ಷಣ ಕ್ಷೇತ್ರದಲ್ಲಿ ಅಬ್ದುಲ್ ಲೆತೀಫ್ ಸಾಹೇಬ್ ಅವರು ಪದ್ಮಶ್ರೀ ಹಾಜಬ್ಬ ಅವರಿಗಿಂತ ಹೆಚ್ಚಿನ ಸೇವೆ ಮಾಡಿದ್ದಾರೆ ಎಂಬ ಹೆಮ್ಮೆ ಇದೆ. ಅವರ ಸೇವೆ ಸಮಾಜ ಗುರುತಿಸಿ ಮುಂದಕ್ಕೆ ಅವರಿಗೆ ಇನ್ನಷ್ಟು ಉನ್ನತ ಅವಕಾಶಗಳು ಲಭಿಸಲಿ ಎಂದು ಜಮೀಯ್ಯತುಲ್ ಫಲಾಹ್ ಜಿಲ್ಲಾಧ್ಯಕ್ಷರಾಗಿರುವ ಅಶ್ಪಾಕ್ ಅಹಮ್ಮದ್ ಕಾರ್ಕಳ ಅವರು ಹೇಳಿದರು.ಜಮೀಯ್ಯತುಲ್ ಫಲಾಹ್ ದ.ಕ ಉಡುಪಿ ಜಿಲ್ಲೆ ಇದರ ಬೆಳ್ತಂಗಡಿ ಘಟಕದ ಸಂಸ್ಥಾಪಕರು ಹಾಗೂ ಪ್ರಸ್ತುತ ಗೌರವಾಧ್ಯಕ್ಷರಾಗಿದ್ದು ಕರ್ನಾಟಕ ಕಾರ್ಮಿಕ ಸಂಘದ ವತಿಯಿಂದ ರಾಷ್ಟ್ರ ಮಟ್ಟದ “ಭಾರತ ಪಂಚರತ್ನ” ಪ್ರಶಸ್ತಿಯೊಂದಿಗೆ ಪುರಸ್ಕೃತರಾಗಿರುವ ಹಾಜಿ ಅಬ್ದುಲ್ ಲೆತೀಫ್ ಸಾಹೇಬ್ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಜಿಲ್ಲಾ ಕೋಶಾಧಿಕಾರಿ ಅಬ್ದುಲ್ ನಾಸರ್ ಕೆ.ಕೆ ಅವರು ಶುಭ ಹಾರೈಸಿ ಮಾತನಾಡಿದರು.ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಜಯರಾಜ್ ಜೈನ್ ಲಾಯಿಲ ಅಭಿನಂದನಾ ಭಾಷಣ ಮಾಡಿ, ಮಾಲಾಡಿ ಸರಕಾರಿ ಶಾಲೆ ಉನ್ನತೀಕರಣ, ಪುಂಜಾಲಕಟ್ಟೆ ಕಾಲೇಜು, ಮಾಲಾಡಿ ಐಟಿಐ ಸಂಸ್ಥಾಪನೆಯ ಸಂದರ್ಭದಲ್ಲಿ ಹಾಗೂ ಶಾಲೆಯ ಮೇಲ್ದರ್ಜೆಗೆ ಏರಲು ಸಲ್ಲಿಸಿದ ಸೇವೆಗಳು, ಸೋಣಂದೂರು ಸರಕಾರಿ ಶಾಲೆಗೆ ನೀಡಿದ‌ ನೆರವು, ಶಿಕ್ಷಣಕ್ಕೆ ಹಾಗೂ ಸಂಘ ಸಂಸ್ಥೆಗಳಿಗೆ ನೀಡುತ್ತಿರುವ ಪ್ರೋತ್ಸಾಹಗಳನ್ನು ನೆನಪಿಸಿ ಮಾತನಾಡಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಹಾಜಿ‌ ಅಬ್ದುಲ್‌ ಲೆತೀಫ್ ಅವರು, ಸಂಘ ನನ್ನ ಮೇಲೆ ಇಟ್ಟಿರುವ ಅಭಿಮಾನಕ್ಕೆ ನಾನು ಋಣಿಯಾಗಿದ್ದೇನೆ. ನಾನು ಯಾವತ್ತೂ ಪ್ರಶಸ್ತಿಗಾಗಿ‌ ಕೆಲಸ ಮಾಡಿಲ್ಲ. ದೇವರ ಮಾರ್ಗದಲ್ಲಿ ಪ್ರಾಮಾಣಿಕ ಸೇವೆ ಮಾತ್ರ ಮಾಡುತ್ತಾ ಬಂದಿದ್ದೇನೆ. ಅದು ನನ್ನ ಕೊನೇಯ ಉಸಿರಿರುವವರೆಗೆ ಮಾಡುತ್ರೇನೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಜಮೀಯ್ಯತುಲ್ ಫಲಾಹ್ ತಾ. ಘಟಕದ ಅಧ್ಯಕ್ಷ ಖಾಲಿದ್ ಪುಲಾಬೆ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಕೋಶಾಧಿಕಾರಿ ಎಸ್‌ಎಂಎಸ್ ಇಬ್ರಾಹಿಂ ಮುಸ್ಲಿಯಾರ್ ಉಪಸ್ಥಿತರಿದ್ದರು. ಘಟಕದ ಮಾಜಿ ಅಧ್ಯಕ್ಷ ಆಲಿಯಬ್ಬ ಪುಲಾಬೆ ಸ್ವಾಗತಿಸಿ ಪ್ರಸ್ತಾವನೆಗೈದರು.ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ‌ ನಿರೂಪಿಸಿದರು. ಸಯ್ಯಿದ್ ಹಬೀಬ್ ಸಾಹೇಬ್ ಖಿರಾಅತ್ ಪಠಿಸಿದರು. ಕಾರ್ಯದರ್ಶಿ ಉಮರ್ ಬೆಳ್ತಂಗಡಿ ಧನ್ಯವಾದ ಸಲ್ಲಿಸಿದರು.ಘಟಕದ ಮಾಜಿ ಅಧ್ಯಕ್ಷರುಗಳು, ಆಜೀವ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Related posts

ಉಜಿರೆ : ಶ್ರೀ ಧ.ಮಂ. ಕಾಲೇಜಿನ ಸ್ವಚ್ಛತಾ ಸಿಬ್ಬಂದಿಗೆ ಬೀಳ್ಕೊಡುಗೆ

Suddi Udaya

ವಾಣಿ ಪದವಿಪೂರ್ವ ಕಾಲೇಜಿನ ಬಾಲಕಿಯರು ಪ್ರತಿನಿಧಿಸಿದ ದಕ್ಷಿಣ ಕನ್ನಡ ಜಿಲ್ಲೆಯ ತ್ರೋಬಾಲ್ ತಂಡಕ್ಕೆ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ

Suddi Udaya

ಬೆಳ್ತಂಗಡಿ :ಜೈನ ವಿದ್ಯಾರ್ಥಿ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

Suddi Udaya

ಅಳದಂಗಡಿ: ಗುಡ್ ಫ್ಯೂಚರ್ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ತೆಂಗಿನಕಾಯಿ ಕೀಳಲು ಕರೆದೊಯ್ದ ಕಾರ್ಮಿಕ ಶಿವಮೊಗ್ಗದಲ್ಲಿ ಸಂಶಯಾಸ್ಪದ ಸಾವು: ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

Suddi Udaya
error: Content is protected !!