32.3 C
ಪುತ್ತೂರು, ಬೆಳ್ತಂಗಡಿ
October 29, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ತೆಂಗಿನಕಾಯಿ ಕೀಳಲು ಕರೆದೊಯ್ದ ಕಾರ್ಮಿಕ ಶಿವಮೊಗ್ಗದಲ್ಲಿ ಸಂಶಯಾಸ್ಪದ ಸಾವು: ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಳ್ತಂಗಡಿ: ತೆಂಗಿನಕಾಯಿ ಕೀಳಲೆಂದು ಕರೆದೊಯ್ಯಲ್ಪಟ್ಟ ಕಾರ್ಮಿಕ ಶಿವಮೊಗ್ಗದಲ್ಲಿ ಸಂಶಯಾಸ್ಪದವಾಗಿ ಸಾವನ್ನಪ್ಪಿದ ಘಟನೆ ಬಗ್ಗೆ, ಅಮೂಲಾಗ್ರ ತನಿಖೆಗೆ ಆಗ್ರಹಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಘಟನೆ ವರದಿಯಾಗಿದೆ.

 ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಕಾರಿಂಜ ಬೈತಾರು ಮನೆ ನಿವಾಸಿ ನಾರಾಯಣ ಪೂಜಾರಿ ಎಂಬವರ ಮಗನಾದ 47 ವರ್ಷ ಪ್ರಾಯದ ದೇವದಾಸ್ ಎಂಬವರೇ ಮೃತಪಟ್ಟ ಕೂಲಿ ಕಾರ್ಮಿಕನಾಗಿದ್ದು ಇವರನ್ನು ಉಳ್ಳಾಲದ ನಿವಾಸಿ ಎಂದು ತಿಳಿಸಲಾದ ಸಯೀದ್ ಹಸನ್ ಎಂಬಾತ ತೆಂಗಿನಕಾಯಿ ಕೀಳುವ ಕೆಲಸಕ್ಕೆಂದು ಅ.23 ರಂದು ಉಪ್ಪಿನಂಗಡಿಯಿಂದ ಕರೆದೊಯ್ಯದ್ದು, ಅ.27 ರಂದು ಸಂಶಯಾಸ್ಪದವಾಗಿ ಸಾವನ್ನಪ್ಪಿರುತ್ತಾರೆಂದೂ, ಸಾವಿನ ಬಗೆ. ಮೃತರ ಸಂಬಂಧಿಕರಿಗೆ ಯಾವುದೇ ಮಾಹಿತಿ ನೀಡದೆ, ಅವರು ಆರೋಗ್ಯವಂತರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಸುಳ್ಳು ಹೇಳಿರುವುದು, ಹಾಗೂ ಈ ಬಗೆ, ಪ್ರಶ್ನಿಸಿದಾಗ ತಾನು ಪೊಲೀಸ್ ಇಲಾಖೆ ಮತ್ತು ಆಸ್ಪತ್ರೆಯಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಂಡಿದ್ದೇನೆಂದು ಸಯೀದ್ ಹಸನ್ ತಿಳಿಸಿರುವುದು ಪ್ರಕರಣದ ಬಗ್ಗೆ, ಸಂಶಯವನ್ನು ಮೂಡಿಸಿದೆ ಎಂದು ಆರೋಪಿಸಿರುವ ಮೃತರ ಪತ್ನಿ ಪದ್ಮಲತಾ ರವರು ತನ್ನ ಗಂಡ ಅನಾರೋಗ್ಯಕ್ಕೆ ತುತ್ತಾದರೂ ವಿಶ್ರಾಂತಿ ನೀಡದೆ ದುಡಿಸಿ ಸಾವಿಗೆ ಕಾರಣವಾಗಿರಬಹುದು ಅಥವ ಬೇರಾವುದೇ ಬಗೆಯಲ್ಲಿ ಹಿಂಸೆ ನೀಡಿ ಸಾವಿಗೆ ಕಾರಣವಾಗಿರಬಹುದೆಂದು ಸಂಶಯಿಸಿದ್ದು, ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ.

Related posts

ರಾಜ್ಯ ನಾರಾಯಣಗುರು ಅಭಿವೃದ್ಧಿ ನಿಗಮದ ಕಚೇರಿ ಉದ್ಘಾಟನೆ

Suddi Udaya

ಶ್ರೀ ಕೃಷ್ಣ ಆಸ್ಪತ್ರೆ,ಕಕ್ಕಿಂಜೆ ಸಹಸಂಸ್ಥೆ ಹೊಯ್ಸಳ ಹೆಲ್ತ್ ಕೇರ್, ಮೂಡಿಗೆರೆ ಹಾಗೂ ರೋಟರಿ ಕ್ಲಬ್, ಮೂಡಿಗೆರೆ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ಉಜಿರೆ ದೇವಸ್ಥಾನದ ಜಾತ್ರೋತ್ಸವಕ್ಕೆ ಚಾಲನೆ

Suddi Udaya

ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Suddi Udaya

ಮಚ್ಚಿನ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಒಕ್ಕೂಟದ ಪದಗ್ರಹಣ ಸಮಾರಂಭಕ್ಕೆ ಡಾ.ಡಿ ವಿರೇಂದ್ರ ಹೆಗ್ಗಡೆಯವರಿಗೆ ಆಮಂತ್ರಣ

Suddi Udaya

ಬೆಳ್ತಂಗಡಿ ವಿಮೆನ್ ಇಂಡಿಯಾ ಮೂವ್ಮೆಂಟ್ ವತಿಯಿಂದ ಮಕ್ಕಳ ಕಲವರ ಕಾರ್ಯಕ್ರಮ

Suddi Udaya
error: Content is protected !!