November 28, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನ.30: ನಾರಾವಿಯಲ್ಲಿ ಹೋಟೆಲ್ ಅಪೂರ್ವ-ಅಪೂರ್ವ ಪ್ಯಾರಡೈಸ್ ಬಾರ್ & ಫ್ಯಾಮಿಲಿ ರೆಸ್ಟೋರೆಂಟ್, ಲಾಡ್ಜಿಂಗ್ ಶುಭಾರಂಭ

ನಾರಾವಿ: ಬೆಳ್ತಂಗಡಿ ತಾಲೂಕಿನ ನಾರಾವಿಯ ಮಂಜು ನಗರದಲ್ಲಿ ಪ್ರವಾಸಿಗರು ಮತ್ತು ಸ್ಥಳೀಯರಿಗೆ ವಿಶೇಷ ಆಕರ್ಷಣೆಯಾಗಲಿರುವ ಹೋಟೆಲ್ ಅಪೂರ್ವ, ಅಪೂರ್ವ ಪ್ಯಾರಡೈಸ್ ಬಾರ್ & ಫ್ಯಾಮಿಲಿ ರೆಸ್ಟೋರೆಂಟ್, ಲಾಡ್ಜಿಂಗ್ ಇದರ ಶುಭಾರಂಭವು ನ.೩೦ರಂದು ಬಹಳ ವಿಜೃಂಭಣೆಯಿಂದ ಜರುಗಲಿದೆ ಎಂದು ಸಂಸ್ಥೆಯ ಮುಖ್ಯಸ್ಥರಾದ ಸುರೇಶ್ ಪೂಜಾರಿ, ಶ್ರೀಮತಿ ಸೌಮ್ಯ ಸುಧೀರ್ ಕೋಟ್ಯಾನ್ ತಿಳಿಸಿದ್ದಾರೆ.

ಹೋಟೆಲ್ ಅಪೂರ್ವ ಆರಾಮದಾಯಕ ತಾಣವಾಗಿ ರೂಪುಗೊಂಡಿದ್ದು ಇದು ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ದೀರ್ಘಾವಧಿ ಸೇವೆಗಳನ್ನು ನೀಡುವುದರೊಂದಿಗೆ, ಅಲ್ಲಿಯ ಪರಿಸರದ ಸುಂದರತೆಯಲ್ಲೂ ಮೈಮರೆಯುವ ಅನುಭವವನ್ನು ನೀಡಲಿದೆ. ಇಲ್ಲಿನ ಸುಸಜ್ಜಿತ ಕೋಣೆಗಳು, ಪ್ರಸಿದ್ಧ ಪಾರ್ಟಿ ಹಾಲ್, ಮತ್ತು ಅತ್ಯುತ್ತಮ ಆಹಾರವನ್ನು ಒದಗಿಸುವ ರೆಸ್ಟೋರೆಂಟ್ ಎಲ್ಲವೂ ಇದನ್ನು ಈ ಪ್ರದೇಶದಲ್ಲಿ ವಿಶ್ರಾಂತಿ ಅಥವಾ ಸಮಾರಂಭಗಳಿಗಾಗಿ ಆದರ್ಶ ತಾಣವನ್ನಾಗಿ ಮಾಡಿವೆ. ಇಲ್ಲಿ ಬರುವ ಪ್ರತಿಯೊಬ್ಬ ಅತಿಥಿಗೂ ಆಹ್ಲಾದಕರ ಅನುಭವವನ್ನು ನೀಡಲು ವಿಶೇಷ ಒತ್ತು ನೀಡಲಾಗಿದೆ ಎಂದು ಮಾಲಕರಾದ ಶ್ರೀಮತಿ ಸೌಮ್ಯ‌‌ ಸುಧೀರ್ ಕೋಟ್ಯಾನ್ ತಿಳಿಸಿದ್ದಾರೆ.ವಿವಿಧ ಸಮಾರಂಭಗಳಿಗೆ ಅವಕಾಶ: ಹೋಟೆಲ್ ಅಪೂರ್ವದ ಪಾರ್ಟಿ ಹಾಲ್‌ ಅತ್ಯಾಧುನಿಕ ಸೌಲಭ್ಯಗಳ ಜೊತೆಗೆ, ಈ ಹಾಲ್ ತನ್ನ ಎಸಿ, ವಿಶಾಲತೆ, ಶ್ರೇಷ್ಠ ವಿನ್ಯಾಸ, ಮತ್ತು ಉತ್ತಮ ನಿರ್ವಹಣೆಯಿಂದ ಗಮನಸೆಳೆಯುವುದಕ್ಕಿದೆ.

ಸಮಾರಂಭಗಳಿಗೆ ಬರುವ ಅತಿಥಿಗಳ ವಾಹನಗಳಿಗೆ ಸುಸಜ್ಜಿತ, ಮತ್ತು ವಿಶಾಲ ಪಾರ್ಕಿಂಗ್ ವ್ಯವಸ್ಥೆ ಲಭ್ಯವಿದೆ.ನಗುಮೊಗದ ಸೇವೆ:ಅಪೂರ್ವ ಪ್ಯಾರಡೈಸ್ ರೆಸ್ಟೋರೆಂಟ್‌ನಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಖಾದ್ಯಗಳು ಲಭ್ಯವಿದ್ದು, ಇಲ್ಲಿ ಸ್ವಾದಿಷ್ಟವಾದ, ಗುಣಮಟ್ಟದ ಆಹಾರವನ್ನು ಸೇವಿಸುವ ಅವಕಾಶವು ಗ್ರಾಹಕರಿಗೆ ಮೆಚ್ಚುಗೆಯನ್ನು ತರುತ್ತದೆ. ಆಹಾರಾಸ್ವಾದನೆಗಾಗಿ ಬರುವ ಪ್ರತಿಯೊಬ್ಬ ಗ್ರಾಹಕನಿಗೆ ವೃತ್ತಿಪರ ಸಿಬ್ಬಂದಿ ಅತ್ಯಂತ ಆತ್ಮೀಯತೆಯೊಂದಿಗೆ ಸೇವೆ ನೀಡಲಾಗುವುದು. ಇಲ್ಲಿ ನೀಡುವ ಆಹಾರ ಪದಾರ್ಥಗಳು ಮತ್ತು ವಾತಾವರಣವು, ಎಲ್ಲಕ್ಕಿಂತ ಮುಖ್ಯವಾದ ಅತಿಥಿ ಸೇವೆಗಳು ಗ್ರಾಹಕರಿಗೆ ತೃಪ್ತಿ ನೀಡಲಿದೆ.

Related posts

ಬಜರಂಗದಳ ಕಾರ್ಯಕರ್ತರ ಮೇಲೆ ಗಡಿಪಾರು ವರದಿಯನ್ನು ಹಿಂಪಡೆಯಲು ವಿಶ್ವ ಹಿಂದೂ ಪರಿಷದ್ ಭಜರಂಗದಳ ದುರ್ಗಾವಾಹಿನಿ ಬೆಳ್ತಂಗಡಿ ಪ್ರಖಂಡದಿಂದ ಬೃಹತ್ ಪ್ರತಿಭಟನೆ : ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ರಿಗೆ ಮನವಿ

Suddi Udaya

ಉಜಿರೆ ಮಹಿಳಾ ವಿವಿದ್ದೋದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಶಶಿಕಲಾ ಡಿ ಗೌಡ , ಉಪಾಧ್ಯಕ್ಷರಾಗಿ ಪ್ರಮೀಳಾ

Suddi Udaya

ಭಾರೀ ಗಾಳಿ ಮಳೆ: ಪಡಂಗಡಿ ವ್ಯಾಪ್ತಿಯಲ್ಲಿ ಮನೆ ಮೇಲೆ ಹಾಗೂ ರಸ್ತೆಗೆ ಬಿದ್ದ ಮರ : ಅಪಾರ ಹಾನಿ

Suddi Udaya

ಸೋಲಾರ್ ಟಾರ್ಪಾಲಿನ್ ಶೀಟ್ ಖರೀದಿಗೆ ಸಹಾಯಧನ: ಅರ್ಜಿ ಆಹ್ವಾನ

Suddi Udaya

ಬೆಳಾಲು ಪ್ರೌಢಶಾಲೆಯಲ್ಲಿ ಮಾಸ್ತಿ ಸಂಸ್ಮರಣ ಕಾರ್ಯಕ್ರಮ

Suddi Udaya

ಪುದುವೆಟ್ಟು: ಶ್ರೀಮತಿ ಯಶೋದಾ ನಿಧನ

Suddi Udaya
error: Content is protected !!