ಬೆಳ್ತಂಗಡಿ: ಇಲ್ಲಿನ ಮದ್ದಡ್ಕ ನೇರಳ ಕಟ್ಟೆ ನಿವಾಸಿಯಾಗಿರುವ ಪಿ.ಎಂ. ಅಹ್ಮದ್ ಇಬ್ರಾಹಿಂ ( 73 ) ಇವರು ಅಲ್ಪಕಾಲದ ಅಸೌಖ್ಯದಿಂದ ನ.28ರಂದು ತನ್ನ ಸ್ವಗೃಹದಲ್ಲಿ ನಿಧನ ಹೊಂದಿದರು.
ಇವರು ಮದ್ದಡ್ಕ ನೂರುಲ್ ಹುದಾ ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷರಾಗಿದ್ದು ಹಾಲಿ ಲೆಕ್ಕ ಪರಿಶೋಧಕರೂ ಆಗಿದ್ದರು.
ಮೃತರು ಪತ್ನಿ, ಐವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿರುತ್ತಾರೆ.













