November 29, 2026
Uncategorized

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವ ನರ್ತಕ ಸುರೇಶ್ ಪರವ ಅವರಿಗೆ ಧಾರ್ಮಿಕ ಮುಖಂಡ ಕಿರಣ್‌ಚಂದ್ರ‌ ಡಿ. ಪುಷ್ಪಗಿರಿ ಅವರಿಂದ ಗೌರವಾಪ೯ಣೆ

ಬೆಳ್ತಂಗಡಿ: ದೈವಾರಾಧನಾ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿರುವ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಸುರೇಶ್ ಪರವ ಅವರನ್ನು ಧಾರ್ಮಿಕ ಮುಖಂಡ ಕಿರಣ್ ಚಂದ್ರ ಡಿ. ಪುಷ್ಪಗಿರಿ ಅವರು ಗೌರವಪೂರ್ವಕವಾಗಿ‌ ಅಭಿನಂದಿಸಿದರು.
ಸುರೇಶ್‌ ಪರವ ಅವರು ಕಿರಣ್ ಚಂದ್ರ ಡಿ. ಪುಷ್ಪಗಿರಿ ಅವರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಗೌರವ ಸಲ್ಲಿಸಲಾಯಿತು. ದೈವಾರಾಧನಾ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸಲ್ಲಿಸುತ್ತಿರುವ ಸೇವೆ, ಧಾರ್ಮಿಕ ಪರಂಪರೆಯ ಉಳಿವು ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ನೀಡಿರುವ ಕೊಡುಗೆಯನ್ನು ಸ್ಮರಿಸಿ ಕೃತಜ್ಞತೆ ವ್ಯಕ್ತಪಡಿಸಲಾಯಿತು.
ದೈವಾರಾಧನೆಯಂತಹ ಪಾರಂಪರಿಕ ಕಲಾ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಸಾಧಕರನ್ನು ಗುರುತಿಸಿ ಗೌರವಿಸುವುದು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಗೌರವವನ್ನು ಹೆಚ್ಚಿಸುತ್ತದೆ ಎಂಬ ಅಭಿಪ್ರಾಯ ಈ ಸಂದರ್ಭದಲ್ಲಿ ವ್ಯಕ್ತವಾಯಿತು.

Related posts

ಬೆನಕ ಆಸ್ಪತ್ರೆಯಿಂದ ಡಾ| ಕೇಶವ ರವರಿಗೆ ಗೌರವಾರ್ಪಣೆ

Suddi Udaya

ಪುಂಜಾಲಕಟ್ಟೆ ಪೆರ್ಮರೊಡಿ ಶ್ರೀಮತಿ ಶಾಂಭವಿ ಪ್ರಭು ನಿಧನ

Suddi Udaya

ಧರ್ಮಸ್ಥಳದಲ್ಲಿ 27ನೇ ವಷ೯ದ ಭಜನಾ ಕಮ್ಮಟ : 23 ಭಜನಾ ಮಂಡಳಿಗಳಿಗೆ ‘ಶ್ರೇಷ್ಠ ಭಜನಾ ಮಂಡಳಿ’ ಪುರಸ್ಕಾರ

Suddi Udaya

ದ.ಕ‌ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ಗೌರವಾನ್ವಿತ ರಾಜ್ಯಪಾಲರ ಭೇಟಿ: ಕು.ಸೌಜನ್ಯಳ ಹತ್ಯೆ ಪ್ರಕರಣದ ಮರುತನಿಖೆಗೆ ಮನವಿ ಸಲ್ಲಿಕೆ

Suddi Udaya

ಅಂತರ್ ಜಿಲ್ಲಾ ಮಟ್ಟದ ಪಾಲಿಟೆಕ್ನಿಕ್ ಪುರುಷರ ಮ್ಯಾಟ್ ಕಬಡ್ಡಿ ಪಂದ್ಯಾಟ:ಉಜಿರೆ ಎಸ್.ಡಿ.ಎಂ. ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ತಂಡ ಪ್ರಥಮ

Suddi Udaya

ಜೆಸಿಐ ವಲಯ ಮಧ್ಯಂತರ ಸಮ್ಮೇಳನ: ಭಾಷಣ ಸ್ಪರ್ಧೆಯಲ್ಲಿ ಕು. ಕನ್ನಿಕಾರಿಗೆ ದ್ವಿತೀಯ ಸ್ಥಾನ

Suddi Udaya
error: Content is protected !!