24.7 C
ಪುತ್ತೂರು, ಬೆಳ್ತಂಗಡಿ
May 18, 2025
ಕರಾವಳಿಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿ

ಮೈರಲ್ಕೆ ಓಡಿಲ್ನಾಳ: ಶ್ರೀ ಕಿರಾತಮೂರ್ತಿ ಮಹಾಲಿಂಗೇಶ್ವರ ಬ್ರಹ್ಮಕಲಶ ಭರದಿಂದ ಸಾಗುತ್ತಿದೆ ಜೀರ್ಣೋದ್ಧಾರ ಕೆಲಸ

ಓಡಿಲ್ನಾಳ: ಶ್ರೀ ಕಿರಾತ ಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದ ನವೀಕರಣ ಪುನರ್ ಪ್ರತಿಷ್ಠ ಅಷ್ಟಬಂಧ ಬ್ರಹ್ಮಕಲಶೋತ್ಸವವೂ ಡಿ.25ರಿಂದ ಜ.3ರವರೆಗೆ ಧಾರ್ಮಿಕ.ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಭ್ರಂಭಣೆಯಿಂದ ನಡೆಯಲಿದೆ.
1 ಸಾವಿರ ವರ್ಷಗಳ ಹಿಂದೆ ಬಂಗರಸರು ತಮ್ಮ ಸೈನ್ಯವನ್ನು ಶತ್ರು ಕೃತ್ಯಗಳಿಂದ ಸಂರಕ್ಷಿಸುವ ಉದ್ದೇಶದಿಂದ ಸೋಮಯಾಗವನ್ನು ಮಾಡಿಸಿ ಈ ಯಾಗದಿಂದ ಅವಿರ್ಭವಿಸಿದ ಶಕ್ತಿಯನ್ನು ಶ್ರೀಕ್ಷೇತ್ರ ಕಿರಾತ ಮೂರ್ತಿ ಸ್ವರೂಪದಲ್ಲಿ ಆರಾಧಿಸಿಕೊಂಡು ಬರುತ್ತಿದ್ದು.
ಆ ಪ್ರಕಾರವಾಗಿ ಶ್ರೀ ಕಿರಾತಮೂರ್ತಿ ಮಹಾಲಿಂಗೇಶ್ವರ ದೇವರಿಗೆ ವೃತ್ತಾಕಾರ ಶಿಲಾಮಯ ಗರ್ಭಗುಡಿ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಗುಡಿ .ಶ್ರೀ ಗಣಪತಿ ದೇವರ ಗುಡಿ ಮತ್ತು ಶ್ರೀ ನಾಗದೇವರಿಗೆ ಕಟ್ಟೆಗಳನ್ನು ವಾಸ್ತು ಪ್ರಕಾರವಾಗಿ ನಿರ್ಮಾಣ ಮಾಡಿ ದೇವರ ಶಿವಲಿಂಗವನ್ನು ಬೆಳಾಲು ಶ್ರೀ ಮಾಯಾ ಮಹಾದೇವ ದೇವಸ್ಥಾನದಿಂದ ಡಿ.22ರಂದು ಎತ್ತಿನ ಗಾಡಿಯ ಮೂಲಕ ಪ್ರಾತ:ಕಾಲ ಗಂಟೆ 4 ರಿಂದ ಉಜಿರೆ ಬೆಳ್ತಂಗಡಿ ಗುರುವಾಯನ ಕೆರೆಯಲ್ಲಿ ವಿಶೇಷ ಪೂಜೆ ನೆರವೇರಿಸಿ ರೇಷ್ಮೆರೋಡು ಮಾರ್ಗವಾಗಿ ಭವ್ಯ ಶೋಭೆ ಯಾತ್ರೆಯೊಂದಿಗೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿ ಬಾಲಾಲಯದಲ್ಲಿ ಪ್ರತಿಷ್ಠಾಪನೆಗೊಂಡು ಮಧ್ಯಾಹ್ನ 12:30ಕ್ಕೆ ಪೂಜೆ ನಡೆಯಲಿದೆ
ಡಿ.25ರಂದು ಬೆಳಗ್ಗೆ 11ಗಂಟೆಗೆ ಓಡಿಲ್ನಾಳ,.ಮಚ್ಚಿನ .ಕಳಿಯ. ನ್ಯಾಯತರ್ಪು .ಕುವೆಟ್ಟು. ಪಡಂಗಡಿ .ಸೋಣಂದೂರು. ಬೆಳ್ತಂಗಡಿ ನಗರ ಗ್ರಾಮಸ್ಥರಿಂದ ಹಸಿರುವಾಣಿ ಹೊರ ಕಾಣಿಕೆಯ ಭವ್ಯ ಶೋಭೆ ಯಾತ್ರೆ ನಡೆಯಲಿ ನಡೆಯಲಿದೆ
ಈಗಾಗಲೇ ಬ್ರಹ್ಮ ಕಲಸಶೋತ್ಸವದ ಪೂರ್ವಸಿದ್ಧತೆ ತಯಾರುಗಳು ಭರದಿಂದ ಸಾಗುತಿದೆ .ಊರ ಪರ ಊರ ಭಕ್ತರು ಪ್ರತಿದಿನ ಶ್ರಮದಾನ ಮೂಲಕ ಕರಸೇವೆ ಮಾಡುತ್ತಿದ್ದಾರೆ. ದೇವಾಲಯದ ಅಭಿವೃದ್ಧಿ ದೃಷ್ಟಿಯಿಂದ ಹಲವಾರು ಕೆಲಸಗಳು ಜನರ ಸಹಕಾರ ಹಾಗೂ ಶ್ರಮದಾನದಿಂದಲೇ ನಡೆದಿದೆ ಎನ್ನುತ್ತಾರೆ ದೇವಾಲಯದ ಆಡಳಿತ ಮಂಡಳಿ ಸದಸ್ಯರು.ಬ್ರಹ್ಮ ಕಲಸಶೋತ್ಸವಕ್ಕೆ ಊರ ಹಾಗೂ ಪರವೂರ ಸಾವಿರಾರು ಭಕ್ತರು ಆಗಮಿಸುತ್ತಿದ್ದು ಈಗಾಗಲೇ ಸಭಾವೇದಿಕೆ, ಅನ್ನ ಛತ್ರ, ಮಂಟಪ .ಅಲಂಕಾರ .ಚಪ್ಪರದ ಕೆಲಸ ಕಾರ್ಯಗಳು ಬರದಿಂದ ಸಾಗುತ್ತಿದೆ.

Related posts

ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆಳ್ತಂಗಡಿ ಗ್ರಾಮ ಸಮಿತಿ ಶಿಶಿಲ ಇದರ ವಾರ್ಷಿಕ ಕಾರ್ಯಕ್ರಮ

Suddi Udaya

ಕೊಕ್ಕಡದಲ್ಲಿ ಶ್ರೀ ಸೌತಡ್ಕ ರಸಗೊಬ್ಬರ ಮತ್ತು ಕೀಟನಾಶಕ ಮಳಿಗೆ” ಶುಭಾರಂಭ

Suddi Udaya

ಡಿ 19 :ಉಜಿರೆ  ಗ್ರಾ.ಪಂ.ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

Suddi Udaya

ನವೋದಯ ವಿದ್ಯಾಲಯ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರವೇಶ ಪರೀಕ್ಷೆಯ ತರಬೇತಿ ಪ್ರಾರಂಭ

Suddi Udaya

ಪೆರ್ಲ -ಬೈಪಾಡಿ ಅಂಚೆ ಇಲಾಖೆಯ ನೂತನ ಶಾಖೆಯ ಮುಂಭಾಗದಲ್ಲಿ ಆಧಾರ್ ಅದಾಲತ್, ನೋಂದಣಿ, ತಿದ್ದುಪಡಿ, ಹಾಗೂ ಅಂಚೆ ಇಲಾಖೆಯ ಹೊಸ ಖಾತೆ ತೆರೆಯುವ ಕಾರ್ಯಕ್ರಮ

Suddi Udaya

ರಾಜಕೀಯ ಪ್ರೇರಿತವಾಗಿ ಶಾಸಕ ಹರೀಶ್ ಪೂಂಜರನ್ನು ಪೊಲೀಸರು ಬಂಧಿಸಿದರೆ ಉಗ್ರ ಹೋರಾಟ: ಕಟೀಲ್

Suddi Udaya
error: Content is protected !!