26 C
ಪುತ್ತೂರು, ಬೆಳ್ತಂಗಡಿ
April 3, 2025
ಅಪರಾಧ ಸುದ್ದಿತಾಲೂಕು ಸುದ್ದಿ

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ : ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಬಿಲ್ಲವ ಸಂಘಟನೆಗಳ ಆಗ್ರಹ

ಬೆಳ್ತಂಗಡಿ : ಟಿ. ವಿ. ನೋಡಲು ಬರುತ್ತಿದ್ದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಆಕೆ ಗರ್ಭವತಿಯಾಗಿರುವುದನ್ನು ತಿಳಿದು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಗರ್ಭಪಾತ ಮಾಡಿಸಿದ ಪ್ರಕರಣದಲ್ಲಿ ನಿಜವಾದ ಆರೋಪಿಯನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಾಲೂಕಿನ ಬಿಲ್ಲವ ಸಂಘಟನೆಯವರು ಜ.9
ರಂದು ಬೆಳ್ತಂಗಡಿ ಠಾಣೆಗೆ ಮನವಿ ನೀಡಿ, ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಎಲ್ದಡ್ಕ, ಪ್ರಧಾನ ಕಾರ್ಯದರ್ಶಿ ಜಯವಿಕ್ರಮ್, ಉಪಾಧ್ಯಕ್ಷ ಶೇಖರ ಬಂಗೇರ, ಕೋಶಾಧಿಕಾರಿ ಅಭಿನಂದನ್ ಹರೀಶ್ ಕುಮಾರ್, ನಿರ್ದೇಶಕರುಗಳಾದ ದಿನೇಶ್ ಕೋಟ್ಯಾನ್, ಯಶೋಧರ, ಗೋಪಾಲ ಪೂಜಾರಿ, ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಸುಜಿತಾ ವಿ. ಬಂಗೇರ, ಕಾರ್ಯದರ್ಶಿ ಶಂಭಾವಿ ಬಂಗೇರ, ಮಾಜಿ ಅಧ್ಯಕ್ಷೆ ರಾಜಶ್ರೀ ರಮಣ್, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ನಿತೀಶ್ ಎಚ್., ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಅಶ್ವಥ್ ಕುಮಾರ್, ಕಾರ್ಯದರ್ಶಿ ಸುನಿಲ್ ಕನ್ಯಾಡಿ ಮಾಜಿ ಅಧ್ಯಕ್ಷ ಹರೀಶ್ ಸುವರ್ಣ ಕನ್ಯಾಡಿ, ಕೇಂದ್ರ ಸಮಿತಿ ನಿರ್ದೇಶಕ ಎಂ. ಕೆ. ಪ್ರಸಾದ್, ಕಾನೂನು ಸಲಹೆಗಾರ ಮನೋಹರ್ ಇಳಂತಿಲ, ಪ್ರಶಾಂತ್ ಮಚ್ಚಿನ, ರಮಾನಂದ ಮುಂಡೂರು, ಶಾಂತ ಬಂಗೇರ, ಗುರುರಾಜ್ ಗುರಿಪಳ್ಳ ಸುರೇಂದ್ರ ಬಂಗಾಡಿ ಮೊದಲದವರು ಉಪಸ್ಥಿತರಿದ್ದರು

Related posts

ಜಾರಿಗೆಬೈಲಿನಲ್ಲಿ ಕೆ.ಎಮ್.ಜೆ. ವತಿಯಿಂದ “ಪ್ರಜಾ ಭಾರತ” ಸೌಹಾರ್ಧ ಕಾರ್ಯಕ್ರಮ

Suddi Udaya

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ‘ಸಂಸ್ಕೃತೋತ್ಸವ’, ‘ಸಂಸ್ಕೃತ ಸಂಧ್ಯಾ’

Suddi Udaya

ಲಾಯಿಲ: ಬಜಕ್ರೆಸಾಲು ಸೇತುವೆ ಅಡಿ ಎರಡು ಕಾಣಿಕೆ ಡಬ್ಬಗಳು ಒಡೆದ ರೀತಿಯಲ್ಲಿ ಪತ್ತೆ: ಡಬ್ಬಗಳನ್ನು ಒಡೆದು ಹಣ ಕಳವು ಗೈದಿರುವ ಶಂಕೆ

Suddi Udaya

ನಾರಾವಿ ಗ್ರಾ.ಪಂ ನಲ್ಲಿ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ವಿಶೇಷ ಗ್ರಾಮ ಸಭೆ

Suddi Udaya

ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ

Suddi Udaya

ಮಂಜೊಟ್ಟಿ ದ್ವಿಚಕ್ರ ವಾಹನಕ್ಕೆಬಸ್‌ ಡಿಕ್ಕಿ: ಗಂಭೀರ ಗಾಯಗೊಂಡಿದ್ದ ಯುವಕ ಸಾವು

Suddi Udaya
error: Content is protected !!