ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ರೈಸ್ ಮಿಲ್ ನ ಹಿಂಬದಿಯಲ್ಲಿ ನೀರು ತುಂಬಿದ ಸ್ಟೀಲ್ ಪಾತ್ರೆ ಒಳಗೆ ವ್ಯಕ್ತಿಯ ಶವ ಪತ್ತೆ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಧಮ೯ಸ್ಥಳ: ಇಲ್ಲಿನ ರೈಸ್ ಆಯಿಲ್ ಫ್ಲೋರ್ ಮಿಲ್ಸ್ ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಕೃಷ್ಣಪ್ಪ ಸಫಲ್ಯ (60ವ) ಎಂಬವರ ಮೃತದೇಹ ಸೆ.3 ರಂದು ರೈಸ್ ಮಿಲ್ ನ ಹಿಂಬದಿಯಲ್ಲಿ ನೀರು ತುಂಬಿಸಿಟ್ಟಿರುವ ದೊಡ್ಡ ಗಾತ್ರದ ಸ್ಟೀಲ್ ಪಾತ್ರೆಯ ಒಳಗೆ ನೀರಿನಲ್ಲಿ ಕವುಚಿ ತೇಲಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಮೃತರ ಪುತ್ರ ವಿನಯ್ ಕುಮಾರ್ ರವರ ಪೊಲೀಸರಿಗೆ ನೀಡಿರುವ ದೂರಿನಲ್ಲಿ, ಕೃಷ್ಣಪ್ಪ ಸಫಲ್ಯ ರವರು ರೈಸ್ ಆಯಿಲ್ ಫ್ಲೋರ್ ಮಿಲ್ಸ್ ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಪ್ರತಿನಿತ್ಯ ಮದ್ಯ ಸೇವನೆ ಮಾಡುವ ಚಟ ಹೊಂದಿದ್ದರು. ಸೆ.3 ರಂದು ಬೆಳಿಗ್ಗೆ ಸದರಿ ರೈಸ್ ಮಿಲ್ಲಿಗೆ ಹೋದವರು ಮಧ್ಯಾಹ್ನ ಮನೆಗೆ ಬಂದಿರಲಿಲ್ಲ,
ಸಂಜೆ ಅಲ್ಲಿಂದ ಬಂದ ಮಾಹಿತಿಯಂತೆ ಹೋಗಿ ನೋಡಲಾಗಿ ಸ್ಟೀಲ್ ಪಾತ್ರೆಯ ಮೇಲ್ಭಾಗವನ್ನು ಅರ್ಧದಷ್ಟು ಸಿಮೆಂಟ್ ಶೀಟ್ ನ್ನು ಮುಚ್ಚಿದ್ದು, ಕೃಷ್ಣಪ್ಪ ಸಫಲ್ಯ ರವರು ಸ್ಟೀಲ್ನ ದೊಡ್ಡ ಗಾತ್ರದ ಪಾತ್ರೆಯಲ್ಲಿ ತುಂಬಿಸಿಟ್ಟಿದ್ದ ನೀರಿಗೆ ಇಳಿದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಂತೆ ಕಂಡುಬಂದಿದೆ ಎಂಬುದಾಗಿ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಯು ಡಿ ಆರ್ ಸಂಖ್ಯೆ 65/2023 ಕಲಂ: 174 (iii)& (iv) ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ (ಸಅ) ಅವಹೇಳನ ಪೋಸ್ಟ್ ಪ್ರಕರಣ; ಚೇತನ್ ಹೊದ್ದೆಟ್ಟಿ ವಿರುದ್ಧ ಅಕ್ಬರ್ ಬೆಳ್ತಂಗಡಿಯಿಂದ ದೂರು ದಾಖಲು

Suddi Udaya

ಸ್ಕೂಟಿಗೆ- ಆಟೋ ರಿಕ್ಷಾ ಡಿಕ್ಕಿ ಪ್ರಕರಣ: ಆಟೋ ಚಾಲಕನಿಗೆ ಕಾರಾಗೃಹ ಶಿಕ್ಷೆ ಪ್ರಕಟ

Suddi Udaya

ಬಳಂಜದಲ್ಲಿ ಪುರುಷರ ರಾಶಿ ಪೂಜೆ: ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗಿ

Suddi Udaya

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದೆ: ಪ್ರತಾಪ್ ಸಿಂಹ ನಾಯಕ್ ಆರೋಪ

Suddi Udaya

ಗಾಳಿ-ಮಳೆ: ನಾಲ್ಕೂರು ಬಳಂಜದಲ್ಲಿ ಮರ ಬಿದ್ದು ವಿದ್ಯುತ್ ಕಂಬಗಳು ಧರಾಶಾಯಿ

Suddi Udaya

ಪುಂಜಾಲಕಟ್ಟೆ ಕೆ.ಪಿ.ಎಸ್ ಸರಕಾರಿ ಪ.ಪೂ. ಕಾಲೇಜು ವಾರ್ಷಿಕೋತ್ಸವ

Suddi Udaya
error: Content is protected !!