32.9 C
ಪುತ್ತೂರು, ಬೆಳ್ತಂಗಡಿ
March 6, 2026
Uncategorized

ಮುಂಡಾಜೆ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನಾಚರಣೆ

ಮುಂಡಾಜೆ:ಇಲ್ಲಿನ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೋವರ್ಸ್ ಮತ್ತು ರೇಂಜರ್ಸ್ ವಿಭಾಗದ ವತಿಯಿಂದ ಸ್ವಾಮಿ ವಿವೇಕಾನಂದರ 160ನೇ ಜನ್ಮದಿನೋತ್ಸವವನ್ನು ʼರಾಷ್ಟ್ರೀಯ ಯುವ ದಿನʼವನ್ನಾಗಿ ಆಚರಿಸಲಾಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ಬೆಳ್ತಂಗಡಿ ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ಡಾ.ಸುಬ್ರಹ್ಮಣ್ಯ ಕೆ. ಮಾತನಾಡಿ,” ಸ್ವಾಮಿ ವಿವೇಕಾನಂದರು ಭಾರತದ ಸಂಸೃತಿ, ಜ್ಞಾನ, ಆಧ್ಯಾತ್ಮಿಕತೆ ಮತ್ತು ಸಹೋದರತೆಯನ್ನು ಜಗತ್ತಿಗೆ ಸಾರಿದವರು. ಇಂದಿನ ಯುವ ಜನತೆ ವಿವೇಕಾನಂದರ ಆದರ್ಶಗಳನ್ನು ಸಂಕಲ್ಪ ಮಾಡಿ ಅನುಷ್ಟಾನಕ್ಕೆ ತರಬೇಕು” ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧೀನಕ್ಕೊಳಪಟ್ಟ ಮುಂಡಾಜೆ ಶಿಕ್ಷಣ ಸಂಸ್ಥೆಗಳ ಸ್ಥಾನೀಯ ಸಮಿತಿ ಅಧ್ಯಕ್ಷ ವಿನಯಚಂದ್ರ ವಹಿಸಿದ್ದರು. ಪ್ರಿನ್ಸಿಪಾಲ್ ಜಾಲಿ ಡಿ’ಸೋಜ ಉಪಸ್ಥಿತರಿದ್ದರು. ಇಂಗ್ಲಿಷ್‌ ಭಾಷಾ ಉಪನ್ಯಾಸಕ ಪುರುಷೋತ್ತಮ ಶೆಟ್ಟಿ ಸ್ವಾಗತಿಸಿ, ಮನಃಶಾಸ್ತ್ರ ಉಪನ್ಯಾಸಕಿ ನಮಿತಾ ಕೆ.ಆರ್. ಕಾರ್ಯಕ್ರಮ ನಿರೂಪಿಸಿದರು. ಇತಿಹಾಸ ಉಪನ್ಯಾಸಕಿ ಗೀತಾ ಗೋಪಾಲ್ ವಂದಿಸಿದರು.

Related posts

ವೇಣೂರು: ಕುಣಿತ ಭಜನಾ ತರಬೇತಿಯ ಉದ್ಘಾಟನಾ ಕಾರ್ಯಕ್ರಮ

Suddi Udaya

ವೇಣೂರು- ಶ್ರೀ ಶಾರದಾ ಸೇವಾ ಟ್ರಸ್ಟ್ ,ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವೇಣೂರು,ಲಯನ್ಸ್ ಕ್ಲಬ್ (ರಿ)ವೇಣೂರು,ಹಾಗು ಪದ್ಮಾಂಬ ಕ್ಯಾಟರ್ಸ್ ಅಳದಂಗಡಿ ಇವರ ಸಹಭಾಗಿತ್ವದಲ್ಲಿ ದೀಪಾವಳಿ* ಪ್ರಯುಕ್ತ ದೋಸೆ ಹಬ್ಬ,ಗೂಡುದೀಪ ಹಾಗು ರಂಗೋಲಿ ಸ್ಪರ್ಧೆ

Suddi Udaya

ಬಿಜೆಪಿ ಯುವ ಮೋರ್ಚಾ ಲಾಯಿಲ ಮಹಾಶಕ್ತಿ ಕೇಂದ್ರದ ಸಂಚಾಲಕರಾಗಿ ಮೇಘರಾಜ್

Suddi Udaya

ನಾವೂರು : ಕುಂಬಾರ ಸ್ವಜಾತಿ ಬಾಂಧವರ ಜಿಲ್ಲಾ ಮಟ್ಟದ ಬಿಡ್ಡಿಂಗ್ ಕ್ರಿಕೆಟ್ ಪಂದ್ಯಾಟ

Suddi Udaya

ಪುಂಜಾಲಕಟ್ಟೆ ಪ್ರ.ದ. ಕಾಲೇಜು: ಯೂತ್ ಹೆಲ್ತ್ ಮತ್ತು ನ್ಯೂಟ್ರಿಷನ್ ವಿಶೇಷ ಉಪನ್ಯಾಸ

Suddi Udaya

ಅಳದಂಗಡಿ: ವಿಶ್ವಾಸ್ ಭಂಡಾರಿ ರವರಿಗೆ ಸನ್ಮಾನ

Suddi Udaya
error: Content is protected !!