23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿ

ಜೇಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಕುಟುಂಬೋತ್ಸವ

ಬೆಳ್ತಂಗಡಿ:ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಪೂರ್ವಧ್ಯಕರಾದ ಜೇಸಿ ಕಿರಣ್ ಕುಮಾರ್ ಶೆಟ್ಟಿ ಅವರ ಮನೆಯಲ್ಲಿ ನಡೆದ ಕುಟುಂಬೊಸ್ಸವ ಕಾರ್ಯಕ್ರಮದಲ್ಲಿ ಒಂದು ಅನೂಹ್ಯವಾದ ಪ್ರಯತ್ನವನ್ನು ಮಾಡಿದೆ.

ಸೆಲ್ಯೂಟ್ ದ ಸೈಲೆಂಟ್ ವರ್ಕರ್ಸ್ ಸಂಚಾರಿ ಆರಕ್ಷಕರಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ರೋಹಿನಾಥ್ ಮತ್ತು ಶ್ರೀಮತಿ ಸವಿತಾ ಶೆಟ್ಟಿ ಇವರುಗಳನ್ನು ಗುರುತಿಸಿ ಗೌರವಿಸಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಜೆಸಿಐ ಬೆಳ್ತಂಗಡಿ ಅಧ್ಯಕ್ಷರಾದ ಜೆಸಿ ಶಂಕರ್ ರಾವ್ ವಹಿಸಿ, ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾಲೂಕು ವರ್ತಕರ ಸಂಘದ ಅಧ್ಯಕ್ಷರಾದ ಶ್ರೀ ಪುಷ್ಪರಾಜ್ ಶೆಟ್ಟಿ, ಸುದ್ದಿಬಿಡುಗಡೆ ವಾರ ಪತ್ರಿಕೆಯ ಬೆಳ್ತಂಗಡಿ ವ್ಯವಸ್ಥಾಪಕರಾದ ಶ್ರೀ ಮಂಜುನಾಥ್ ರೈ ಮತ್ತು ಬೆಳ್ತಂಗಡಿ ಸರಕಾರಿ . ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಕಿಶೋರ್ ಕುಮಾರ್ ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಜೆಸಿಐ ಬೆಳ್ತಂಗಡಿಯ ನಿಕಟ ಪೂರ್ವ ಅಧ್ಯಕ್ಷರಾದ ಜೆಸಿ ಪ್ರಸಾದ್ ಬಿ. ಎಸ್, ಮಹಿಳಾ ಜೆಸಿ ಸಂಯೋಜಕಿ ಮಮಿತಾ ಸುಧೀರ್, ಜೂನಿಯರ್ ಜೆಸಿ ಅಧ್ಯಕ್ಷ ಜೆಜೆಸಿ ರಾಮಕೃಷ್ಣ ಮತ್ತು ಕಾರ್ಯಕ್ರಮ ಸಂಯೋಜಕ ಜೆಸಿ ಸೃಜನ್ ರ್ ರೈ ಉಪಸ್ಥಿತರಿದ್ದರು.

ಘಟಕದ ಉಪಾಧ್ಯಕ್ಷ ಜೆಸಿ ರಂಜಿತ್ ವೇದಿಕೆಗೆ ಅತಿಥಿಗಳನ್ನು ಬರಮಾಡಿಕೊಂಡರು, ಸದಸ್ಯ ಜೆಸಿ ಅನುದೀಪ್ ಜೈನ್ ಜೆಸಿ ವಾಣಿ ವಾಚಿಸಿದರು, ಸದಸ್ಯೆ ಜೆಸಿ ಸುಭಾಷಿಣಿ ಸನ್ಮಾನಿತರ ಪರಿಚಯ ವಾಚಿಸಿದರು.
ಘಟಕದ ಕಾರ್ಯದರ್ಶಿ ಜೆಸಿ ಸುಧೀರ್ ಕೆ ಎನ್ ಧನ್ಯವಾದ ಸಮರ್ಪಿಸಿದರು. ನಂತರ ನಡೆದ ಮನೋರಂಜನಾ ಕಾರ್ಯಕ್ರಮವನ್ನು ಘಟಕದ ಸದಸ್ಯೆ ಜೆಸಿ ಆರೋಲಿನ್ ಡಿ. ಸೋಜಾ ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಜೆಸಿಐ ಬೆಳ್ತಂಗಡಿಯ ಪೂರ್ವಧ್ಯಕ್ಷರು, ಸದಸ್ಯರು ಪಾಲ್ಗೊಂಡಿದ್ದರು.

Related posts

ಐಸಮ್ಮರವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಉಚಿತ ವೀಲ್ ಚೇರ್ ವಿತರಣೆ

Suddi Udaya

ಕಕ್ಕಿಂಜೆ: ಗಾಂಧಿನಗರ ನಿವಾಸಿ ವೀರಪ್ಪ ಗೌಡ ನಿಧನ

Suddi Udaya

ದ.ಕ. ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ: ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ 1,16,990 ಅಂತರದಿಂದ ಭಾರಿ ಮುನ್ನಡೆ

Suddi Udaya

ಸೌತಡ್ಕ : ಗೇರು ಪ್ಲಾಂಟೇಶನ್ ನಲ್ಲಿ ಬೆಳ್ಳಂಬೆಳ್ಳಗೆ ಎರಡು ಕಾಡಾನೆಗಳು ಪ್ರತ್ಯಕ್ಷ

Suddi Udaya

ಬೆಳ್ತಂಗಡಿ ವಕೀಲರ ಭವನದಲ್ಲಿ ವಕೀಲರ ದಿನ ಆಚರಣೆ

Suddi Udaya

ಲಾಯಿಲ: ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನ ಬೆಳ್ತಂಗಡಿ ವತಿಯಿಂದ 352 ನೇ ಆರಾಧನಾ ಮಹೋತ್ಸವ

Suddi Udaya
error: Content is protected !!