September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ವಕೀಲರ ಭವನದಲ್ಲಿ ವಕೀಲರ ದಿನ ಆಚರಣೆ

ಬೆಳ್ತಂಗಡಿ : ವಕೀಲರ ಸಂಘ ಬೆಳ್ತಂಗಡಿ ಹಾಗೂ ಯುವ ವಕೀಲರ ವೇದಿಕೆ ಇದರ ನೇತೃತ್ವದಲ್ಲಿ ಇಂದು(ಡಿ.3) ವಕೀಲರ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿಯ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಮನು ಬಿ.ಕೆ ಸಮಾಜದಲ್ಲಿ ವಕೀಲರ ಸ್ಥಾನಮಾನ, ನ್ಯಾಯಾಲಯ ಮತ್ತು ವಕೀಲ ನಡುವಿನ ಸಂಬಂಧದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಹಿರಿಯ ನ್ಯಾಯವಾದಿ ಸುಬ್ರಹ್ಮಣ್ಯ ಕುಮಾರ್ ಅಗರ್ತ ರವರು ವಕೀಲ ವೃತ್ತಿಗೆ ಸಮಾಜದಲ್ಲಿ ಇರುವ ಗೌರವದ ಬಗ್ಗೆ ಮಾತನಾಡುತ್ತಾ ಅತಿ ಶ್ರೇಷ್ಠ ವೃತ್ತಿಗಳಲ್ಲಿ ಒಂದಾಗಿದೆ. ಸಮಾಜಕ್ಕೆ ಮಾರ್ಗದರ್ಶನವನ್ನು ನೀಡುವ ಹಾಗೂ ಸಮಾಜದೊಂದಿಗೆ ಬೆರೆಯುವ ಅವಕಾಶವನ್ನು ಈ ವೃತ್ತಿಯಲ್ಲಿ ನಾವು ಕಾಣಬಹುದಾಗಿದೆ, ವಕೀಲರ ಜವಾಬ್ದಾರಿಗಳ ಬಗ್ಗೆ ಬಹಳ ಅರ್ಥವತ್ತಾಗಿ ತಮ್ಮ ದಿಕ್ಸೂಚಿ ಭಾಷಣದಲ್ಲಿ ವಿವರಿಸಿದರು.

ವೇದಿಕೆಯಲ್ಲಿ ವಕೀಲರ ಹಿರಿಯ ಸಮಿತಿಯ ಅಧ್ಯಕ್ಷ ಅಲೋಶಿಯಸ್ ಎಸ್ ಲೋಬೊ, ಪ್ರಧಾನ ಕಾರ್ಯದರ್ಶಿ ನವೀನ್ ಬಿ ಕೆ ಹಾಗೂ ಯುವ ವಕೀಲರ ವೇದಿಕೆಯ ಅಧ್ಯಕ್ಷ ಸಂದೀಪ್ ಡಿಸೋಜ ಉಪಸ್ಥಿತರಿದ್ದರು.

ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಹಿರಿಯ ವಕೀಲರಾದ ಪಿ ಸುಬ್ರಹ್ಮಣ್ಯ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಪ್ರಯುಕ್ತ ವಕೀಲರಿಗೆ ಆಯೋಜಿಸಲಾಗಿದ್ದ ಮನೋರಂಜನ ಸ್ಪರ್ಧೆಗಳ ಬಹುಮಾನವನ್ನು ವಿಜೇತ ತಂಡಗಳಿಗೆ ವಿತರಿಸಲಾಯಿತು.

ಈ ಸಮಾರಂಭದಲ್ಲಿ ಯುವ ವಕೀಲರ ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಜೋಸ್ನಾ ವೆಲೋನ ಕೊರೆಯ ಶ್ರೀಮತಿ ಅಸ್ಮಾ, ಶ್ರೀಮತಿ ಉಷಾ ಎನ್ ಜಿ ರವರು ಸಹಕರಿಸಿದರು.

ಹಿರಿಯ ವಕೀಲರಾದ ಶಿವಕುಮಾರ್ ಎಸ್ಎಂ ರವರು ಸಿಹಿ ತಿಂಡಿಯ ವ್ಯವಸ್ಥೆಯನ್ನು ಮಾಡಿದ್ದರು.

ಯುವ ವಕೀಲರಾದ ಕು. ಸೌಮ್ಯ ಸ್ವಾಗತಿಸಿದರು. ಪ್ರಾರ್ಥನೆಯನ್ನು ಕು ಪ್ರತೀಕ್ಷಾ ನೆರವೇರಿಸಿದರು, ಜಿತೇಶ್ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಯಕ್ಷಿತಾ ನೆರವೇರಿಸಿದರು.

Related posts

ಬಳಂಜ: ಕಾಪಿನಡ್ಕ ರಬ್ಬರ್ ತೋಟದಲ್ಲಿ ಚಿರತೆ ಪ್ರತ್ಯಕ್ಷ

Suddi Udaya

ಉಜಿರೆ ಎಸ್‌.ಡಿ.ಎಂ ತಾಂತ್ರಿಕ ಮಹಾವಿದ್ಯಾಲಯದ ನೂತನ ಪ್ರಾಂಶುಪಾಲರಾಗಿ ಡಾ. ಸಂದೀಪ್ ಆರ್. ಅಧಿಕಾರ ಸ್ವೀಕಾರ

Suddi Udaya

ಬಡಗಕಾರಂದೂರು ಸ.ಉ.ಹಿ.ಪ್ರಾ. ಶಾಲೆಯಲ್ಲಿ “ಹದಿಹರೆಯ ಮತ್ತು ಆರೋಗ್ಯ” ಕಾರ್ಯಕ್ರಮ

Suddi Udaya

ರಾಜ್ಯಮಟ್ಟದ ಸ್ಕ್ವೇಯ್ ಮಾರ್ಸಲ್ ಆರ್ಟ್ಸ್ ಸ್ಪರ್ಧೆ: ಶಹೀರ್ ಅನಸ್ ರವರಿಗೆ ಚಿನ್ನದ ಪದಕ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಬಿಸಿ ಊಟಕ್ಕೆ ಚಾಲನೆ

Suddi Udaya

ಕುಕ್ಕೇಡಿ ಗ್ರಾಮ ಪಂಚಾಯತ್ ನ 2023-24 ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya
error: Content is protected !!