23.3 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ಓಡಿಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ

ಮದ್ದಡ್ಕ:ಶಿವನನ್ನು ಶಿವಯಾದ ಆರಾಧನೆ ಮಾಡುವುದು ನಮ್ಮ ಹಿಂದೂ ಧರ್ಮ ದೇವರಲ್ಲಿ ಮತ್ತು ಭಕ್ತರಲ್ಲಿ ಇರುವ ಶಾಸಾತ್ಕಾರ ನೋಡುವ ಭಾವನೆಯೆ ನಮ್ಮ ಬದುಕು ಎಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ ಅಲ್ಲಿ ಮಂಗಳ ಕಾರ್ಯ ನಡೆಯಬೇಕು ಎಂದು ಹೈ ಕೋರ್ಟ್ ವಕೀಲರಾದ ಪ್ರಜ್ವಲ್ ಬಂಗೇರ ನುಡಿದರು ಅವರು ಫೆ 2ರಿಂದ ಫೆ 4ರವರೆಗೆ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿದ ಜಾತ್ರಾಮಹೋತ್ಸವದ ಫೆ 2ರಂದು ಧಾರ್ಮಿಕ ಸಭಾಕಾರ್ಯಕ್ರಮ ಜರಗಿತು

ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ ವಹಿಸಿದ್ದರು ವೇದಿಕೆಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮು ಬಸ್ತಿ ಪಲ್ಕೆ ಪಡಂಗಡಿ. ಶಾಂತಾ ಜೆ ಬಂಗೇರ ಕುವೆಟ್ಟು. ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಿದಾನಂದ ಇಡ್ಯ.ಯವ ಸಮಿತಿ ಅಧ್ಯಕ್ಷ ಅಶ್ವಿತ್ ಓಡೀಲು. ಮಾತ್ರ ಮಂಡಳಿ ಅಧ್ಯಕ್ಷೆ ಧನಲಕ್ಷ್ಮಿ ಚಂದ್ರಶೇಖರ್.ಭಜನಾ ಸಮಿತಿ ಅಧ್ಯಕ್ಷ ಸಂದೇಶ್ ಅನಿಲ. ಉಪಸ್ಥಿತರಿದ್ದರು ಚಿದಾನಂದ ಇಡ್ಯ ಸ್ವಾಗತಿಸಿ ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು ಸಂದೇಶ್ ಅನಿಲ ಧನ್ಯವಾದ ವಿತ್ತರು ತಂತ್ರಿಗಳಾದ ವೇದಮೂರ್ತಿ ಉದಯಪಾಂಗಣ್ಣಾಯ ನೇತೃತ್ವದಲ್ಲಿ ಪ್ರಧಾನ ಅರ್ಚಕರಾದ ರಘರಾಮ್ ಭಟ್ ಫೆ 2ರಂದು ಶತರುದ್ರಾಭಿಷೇಕ ಇನ್ನಿತರ ಧಾರ್ಮಿಕ ವಿಧಿ ವಿಧಾನಗಳು ಜರಗಿತು ಸಾಯಂಕಾಲ ಪಡಂಗಡಿ. ಕುವೆಟ್ಟು. ಸೊಣಂದೂರು. ಓಡಿಲ್ನಾಳ ಗ್ರಾಮದ ಭಕ್ತಾದಿಗಳ ಹಸಿರು ಹೊರೆಕಾಣಿಕೆ ವಿವಿಧ ಭಜನಾ ತಂಡದ ನ್ರತ್ಯ ಭಜನೆಯೊಂದಿಗೆ ಮೆರವಣಿಗೆಯಲ್ಲಿ ತರಲಾಯಿತು ಫೆ 3ರಂದು ಕಲಶಾಧಿವಾಸ. ಗಣಹೋಮ. ಪ್ರಧಾನ ಹೋಮ ಮಧ್ಯಾಹ್ನ ಮಹಾಪೂಜೆ ದ್ವಜರೋಹಣ ದೇವರ ಬಲಿ ಉತ್ಸವ ಸಾರ್ವಜನಿಕ ಅನ್ನಸಂತರ್ಪಣೆ ಸಾಯಂಕಾಲ ದೇವರ ದರ್ಶನ ಬಲಿ ಉತ್ಸವ ಜರಗಿತು ಸಾಂಸ್ಕೃತಿಕ ಕಾರ್ಯಕ್ರಮ ಪುತ್ತೂರು ಜಗದೀಶ್ ಆಚಾರ್ಯ ಇವರಿಂದ ಸಂಗೀತ ಗಾನ ಸಂಭ್ರಮ ಹಾಗೂ ವೀರಭದ್ರ ಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿ ಹಿರಿಯಡ್ಕ ಇವರಿಂದ ಮಾಯೊದ ಅಜ್ಜೆ ಯಕ್ಷಗಾನ ಬಯಲಾಟ ಜರಗಿತು ಜಾತ್ರಾಮಹೋತ್ಸವ ಯಶಶ್ವಿಗೆ ವ್ಯವಸ್ಥಾಪನಾ ಸಮಿತಿ ಸದಸ್ಯರು ವಿಜಯ ಸಾಲಿಯನ್ ಪಣಕಜೆ. ಎಸ್ ಗಂಗಾಧರ ರಾವ್ ಕೆವುಡೇಲು.ರಾಜ್ ಪ್ರಕಾಶ್ ಪಡ್ಡೈಲು. ನೇಹಾ (ಅಶ್ವಿನಿ)ನಾಯಕ್ ಪಣಕಜೆ. ಭಜನಾ ಸಮಿತಿ ಕಾರ್ಯದರ್ಶಿ ಕುಶಾಲಪ್ಪ ಕಿನ್ನಿಗೋಳಿ. ಯುವ ಸಮಿತಿ ಕಾರ್ಯದರ್ಶಿ ಹರೀಶ್ ಕೋಟ್ಯಾನ್ ಮದ್ದಡ್ಕ. ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಪುರಿಪಟ್ಟ ಕೋಶಾಧಿಕಾರಿ. ವಸಂತ ಗೌಡ ವರಕಬೆ ಮಾತ್ರ ಮಂಡಳಿ ಕಾರ್ಯದರ್ಶಿ ದೀಕ್ಷಾ ಸದಾನಂದ. ದೇವಸ್ಥಾನದ ಕಾರ್ಯನಿರ್ವಾಕ ವಿಕಾಸ್ ಶೆಟ್ಟಿ ಎಲ್ಲಾ ಸಮಿತಿಗಳ ಸದಸ್ಯರು ಭಕ್ತಾಭಿಮಾನಿಗಳು ಸಹಕರಿಸಿದರು ಫೆ 4ರಂದು ಬೆಳಿಗ್ಗೆ ಸಂಪ್ರೋಕ್ಷಣಾ ವಿಧಿ ಮಹಾಪೂಜೆ ವೈದಿಕ ಮಂತ್ರಾಕ್ಷತೆ ಜರಗಿತು

Related posts

ತೆಕ್ಕಾರು ಗ್ರಾಮದಲ್ಲಿ ರಾತ್ರಿ ವೇಳೆ ಕಣ್ಣಾ ಮುಚ್ಚಾಲೆ ಆಡುತ್ತಿರುವ ವಿದ್ಯುತ್

Suddi Udaya

ಪುದುವೆಟ್ಟು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟನೆ

Suddi Udaya

ಬಜಕ್ರೆಸಾಲು ಸೇತುವೆ ಕೆಳಗೆ ನದಿಯಲ್ಲಿ ದನದ ಚರ್ಮ ಪತ್ತೆ

Suddi Udaya

ಸುಮಾರು 700 ವರ್ಷಗಳ ಇತಿಹಾಸ ಹೊಂದಿದ್ದ ತೆಕ್ಕಾರಿನ ಶ್ರೀಗೋಪಾಲಕೃಷ್ಣ ದೇವರಿಗೆ ನೂರೈವತ್ತು ವರ್ಷಗಳ ನಂತರ ಬಾಲಾಲಯದಲ್ಲಿ ಪ್ರಥಮ ಪೂಜೆ

Suddi Udaya

ಮುಂಡಾಜೆ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಸುಯ೯ ಕ್ಷೇತ್ರಕ್ಕೆ ಕೃಷಿ ಸಚಿವ ಚೆಲುವರಾಯಸ್ವಾಮಿ ಭೇಟಿ: ವಿಶೇಷ ಪೂಜೆ ಸಲ್ಲಿಸಿದ ಸಚಿವ ದಂಪತಿ

Suddi Udaya
error: Content is protected !!