ವೇಣೂರು: ಶ್ರೀ ಮಹಾಲೀಂಗೇಶ್ವರ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಫೆ 18 ರಿಂದ ಮಾ 1ರ ವರೆಗೆ ವಿವಿಧ ವೈದಿಕ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಲಿದೆ.
ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಐತಿಹಾಸಿಕ ಹಿನ್ನಲೆಯುಳ್ಳ ಅಜಿಲ ಸೀಮೆಯ ಪ್ರಧಾನ ದೇವಸ್ಥಾನ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಕೆಲಸ ಕಾರ್ಯಗಳು ಅತ್ಯಂತ ಭರದಿಂದ ನಡೆಯುತ್ತಿದ್ದು ದಿನಂಪ್ರತಿ ಸಾವಿರಾರು ಜನ ಭಕ್ತರ ಶ್ರಮದಾನ, ನೂರಾರು ಕುಶಲ ಕರ್ಮಿಗಳಿಂದ ದೇವಳದ ಅಂತಿಮ ಹಂತದ ಕೆಲಸಗಳು ನಡೆಯುತ್ತಿದೆ. ‘ನಭೂತೋ ನಃ ಭವಿಷ್ಯತಿ’ ಎನ್ನುವ ರೀತಿ ನಡೆಯಲಿರುವ ಈ ಬ್ರಹ್ಮಕಲಶದಲ್ಲಿ ನಾವೆಲ್ಲರೂ ಭಾಗಿಗಳಾಗೋಣ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಶಾಸಕ ಹರೀಶ್ ಪೂಂಜ ತಿಳಿಸಿದರು.
ರಸ್ತೆಗಳೆಲ್ಲ ಶೃಂಗಾರಗೊಳ್ಳುತ್ತಿದೆ.ಸಾವಿರಾರು ಮಂದಿ ಶ್ರಮದಾನ ಸೇವೆ ಮಾಡುತ್ತಿದ್ದಾರೆ. ಆಮಂತ್ರಣ ಹಂಚುವ ಕೆಲಸ ನಡೆಯುತ್ತಿದೆ.ದೇವಸ್ಥಾನದ ಚಪ್ಪರ ಕೆಲಸ ಸಂಪೂರ್ಣ ನೇರವೇರಿದೆ.
ಇಗಾಗಲೇ ದೇವಸ್ಥಾನದ ಪೂರ್ಣ ಕೆಲಸಗಳು ಸಾಗುತ್ತಿದ್ದು ಸೀಮೆಯ ದೇವರ ಬ್ರಹ್ಮಕಲಶೋತ್ಸವಕ್ಕೆ ಸಿದ್ದತೆಗಳು ನಡೆಯುತ್ತಿದೆ.
ಸಮಿತಿಯ ಸರ್ವ ಪದಾಧಿಕಾರಿಗಳು ಬ್ರಹ್ಮಕಲಶೋತ್ಸವದ ಯಶಸ್ವಿಗೆ ಶ್ರಮಿಸುತ್ತಿದ್ದಾರೆ.