April 2, 2025
ಗ್ರಾಮಾಂತರ ಸುದ್ದಿ

ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಬೆಳಕು ಕಾರ್ಯಕ್ರಮ

ಬೆಳ್ತಂಗಡಿ: ಫೆ. 28 ರಂದು ಪಿಲಿಗೂಡು ಉನ್ನತಿಕರಿಸಿದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿಯ ಕುರಿತು ಬೆಳಕು ಎನ್ನುವ ಹೆಸರಿನಲ್ಲಿ ತರಬೇತಿ ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿ ಬಹುಮುಖ ಪ್ರತಿಭೆಯ ಚಂದ್ರಹಾಸ್ ಬಳಂಜ ನಡೆಸಿಕೊಟ್ಟರು.

ಬಹುಮುಖ ಪ್ರತಿಭೆಯುಳ್ಳ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿ ಸಂಯೋಜಕಿ ಜೆಸಿ ಮಮಿತಾ ಸುಧೀರ್ ವಹಿಸಿಕೊಂಡರು.

ಮುಖ್ಯ ಅತಿಥಿಯಾಗಿ ಪಿಲಿಗೂಡು ಸರ್ಕಾರಿ ಉನ್ನತೀಕರಿಸಿದ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಅನಿತಾ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಯನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷರಾದ ಜೆಸಿ ಶಂಕರ್ ರಾವ್ ಸಭೆಗೆ ಪರಿಚಯಿಸಿದರು.
ಮಹಿಳಾ ವಿಭಾಗದ ನಿರ್ದೇಶಕರಾದ ಶ್ರೀಮತಿ ಸುಭಾಷಿಣಿ ಗೌರವಾನ್ವಿತರನ್ನ ವೇದಿಕೆಗೆ ಆಹ್ವಾನಿಸಿದರು. ಜೆಜೆಸಿ ಸೃಷ್ಟಿ ಜೆಸಿ ವಾಣಿ ವಾಚಿಸಿದರು. ಜಿಸಿಐ ಬೆಳ್ತಂಗಡಿ ಮಂಜುಶ್ರೀ ಕಾರ್ಯದರ್ಶಿ ಜೆಸಿ ಸುಧೀರ್ ಕೆ ಎನ್ ಸರ್ವರಿಗೂ ವಂದಿಸಿದರು.

Related posts

ಹಳೆಪೇಟೆ ಮುಹಿಯುದ್ದಿನ್ ಜುಮ್ಮಾ ಮಸ್ಜಿದ್ ಈದ್-ಉಲ್-ಫಿತರ್ ಆಚರಣೆ

Suddi Udaya

ಮುಂಡಾಜೆ: ಯಂಗ್ ಚಾಲೆಂಜರ್ಸ್ ನಲ್ಲಿ ಅಣಬೆ ತರಬೇತಿ ಕಾರ್ಯಾಗಾರ

Suddi Udaya

ಶಿಶಿಲ ಶ್ರೀ ಗಡಿ ಚಾಮುಂಡಿ ದೇವಸ್ಥಾನದಲ್ಲಿ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ: ವಾಸ್ತು ಬಲಿ ಹೋಮ, ದುರ್ಗಾನಮಸ್ಕಾರ ಪೂಜೆ

Suddi Udaya

ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಹಿಳಾ ದಿನಾಚರಣೆ

Suddi Udaya

ಅರಸಿನಮಕ್ಕಿ: ದರ್ಬೆತಡ್ಕ ಶ್ರೀ ಕಾಲಕಾಮ ಪರಶುರಾಮ ದೇವಸ್ಥಾನದಲ್ಲಿ ಚಿತ್ಪಾವನಿ ಭಾಷೆಯಲ್ಲಿ ಯಕ್ಷಗಾನ ತಾಳಮದ್ದಳೆ

Suddi Udaya

ಉಜಿರೆ ಲಲಿತನಗರ ನಿವಾಸಿ ಲೀಲಾವತಿ ನಿಧನ

Suddi Udaya
error: Content is protected !!