24 C
ಪುತ್ತೂರು, ಬೆಳ್ತಂಗಡಿ
June 8, 2026
ತಾಲೂಕು ಸುದ್ದಿ

ರೂ. 1.50 ಕೋಟಿ ವೆಚ್ಚದಲ್ಲಿ ನಿಮಾ೯ಣವಾಗಲಿದೆ ಕನಸಿನ ಹೊಸ ʻಭವ್ಯ ಕುಲಾಲ ಸಮುದಾಯ ಭವನʼ:ಮಾ.19 ಶಾಸಕ ಹರೀಶ್ ಪೂಂಜರಿಂದ ಶಿಲಾನ್ಯಾಸ

ಗುರುವಾಯನಕೆರೆ: ಸುಮಾರು ರೂ.1.50 ಕೋಟಿ ವೆಚ್ಚದಲ್ಲಿ‌ ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಕನಸಿನ ಹೊಸ ʻಭವ್ಯ ಕುಲಾಲ ಸಮುದಾಯ ಭವನʼ ನಿರ್ಮಾಣವಾಗಲಿದ್ಧು, ಇದರ ಶಿಲಾನ್ಯಾಸ ಕಾರ್ಯಕ್ರಮ ಮಾ.19ರಂದು ಆದಿತ್ಯವಾರ ನಡೆಯಲಿದೆ ಎಂದು ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ತಾಲೂಕು ಸಂಘದ ಕಾಯ೯ಕಾರಿ ಸಮಿತಿ, ಕಟ್ಟಡ ಸಮಿತಿ, ಯುವ ವೇದಿಕೆ ಹಾಗೂ ಸವ೯ ಸದಸ್ಯರ ಸಮಾಲೋಚನಾ ಸಭೆಯು ಫೆ.26ರಂದು ಕುಲಾಲ ಮಂದಿರ ಗುರುವಾಯನಕೆರೆಯಲ್ಲಿ ಜರುಗಿತು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ‌ಸಂಘದ ಅಧ್ಯಕ್ಷ ಹರೀಶ್‌ ಕಾರಿಂಜ ಅವರು ಮಾತನಾಡಿ, ಶಾಸಕ ಹರೀಶ್‌ ಪೂಂಜ ಅವರು ಸರಕಾರದಿಂದ ನಮ್ಮ ಭವ್ಯ ಕುಲಾಲ ಸಮುದಾಯ ಭವನ ನಿಮಾ೯ಣಕ್ಕೆ ರೂ. 1.50 ಕೋಟಿ ಮಂಜೂರುಗೊಳಿಸಿದ್ದಾರೆ. ಭವನದ ಶಿಲಾನ್ಯಾಸ ಕಾಯ೯ಕ್ರಮ ಅಭೂತ ಪೂವ೯ವಾಗಲು ಸಮಾಜ ಬಾಂಧವರು ಪೂಣ೯ ಸಹಕಾರ ನೀಡಬೇಕು, ಕಾಯ೯ಕ್ರಮದ ದಿನ ಸುಮಾರು 5 ಸಾವಿರಕ್ಕೂ ಮಿಕ್ಕಿ ಸಮಾಜ ಬಾಂಧವರು ಭಾಗವಹಿಸಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಶಿಲಾನ್ಯಾಸ ಕಾಯ೯ಕ್ರಮವನ್ನು ಮಾಡುವ ಬಗ್ಗೆ ಚಚಿ೯ಸಲಾಯಿತು. ಮಾ.19ರಂದು ಅದಿತ್ಯವಾರ ಕುಲಾಲ ಭವನಕ್ಕೆ ಶಿಲಾನ್ಯಾಸವನ್ನು ನೆರವೇರಿಸುವುದೆಂದು ತೀಮಾ೯ನಿಸಲಾಯಿತು. ಆ ದಿನ ಗುರುವಾಯನಕೆರೆಯ ಶಾರದಾ ಮಂಟಪದ ಬಳಿಯಿಂದ ಸ್ವಾಮೀಜಿಯವರನ್ನು ಉಸ್ತುವಾರಿ ಸಚಿವರು, ಶಾಸಕರು ಹಾಗೂ ಅತಿಥಿ-ಗಣ್ಯರನ್ನು ಭವ್ಯವಾದ ಮೆರವಣಿಗೆಯಲ್ಲಿ ಶಿಲಾನ್ಯಾಸದ ಸ್ಥಳದವರೆಗೆ ಕರೆ ತರುವುದು, ಮೆರವಣಿಗೆಯಲ್ಲಿ ಸುಮಾರು ಐದು ಸಾವಿರಕ್ಕೂ ಮಿಕ್ಕಿ ಸಮಾಜ ಬಾಂಧವರು ಭಾಗವಹಿಸುವುದು, ಮೆರವಣಿಗೆ, ನಗರದ ಅಲಂಕಾರ, ಬ್ಯಾನರ್‌ ಅಳವಡಿಕೆ, ಶಿಲಾನ್ಯಾಸ ನಡೆಯಲಿರುವ ಸಂಘದ ಜಾಗದ ಸಮತಟ್ಟು, ಮಧ್ಯಾಹ್ನ ಊಟೋಪಚಾರದ ವ್ಯವಸ್ಥೆ ಸೇರಿದಂತೆ ಕಾಯ೯ಕ್ರಮವನ್ನು ಯಶಸ್ವಿಗೊಳಿಸುವ ಬಗ್ಗೆ ನಿಧ೯ರಿಸಲಾಯಿತು.
ಸಭೆಯಲ್ಲಿ ಪ್ರಮುಖರಾದ ಯತೀಶ್‌ ಸಿರಿಮಜಲು, ಉಮೇಶ್‌ ಗುರುವಾಯನಕೆರೆ, ಸಂತೋಷ್‌ ಭಾಗ೯ವಿ, ಉದಯ ಬಿ.ಕೆ ಬಂದಾರು, ಸದಾನಂದ ಕುಲಾಲ್‌ ಸಿರಿಮಜಲು, ಸತೀಶ್‌ ಬಂಗೇರ, ಪದ್ಮನಾಭ ಅಳದಂಗಡಿ, ಅಶೋಕ್‌ ಕುಲಾಲ್‌ ನಾಲ್ಕೂರು, ಡೀಕಯ್ಯ ಕೆ. ಬಳೆಂಜ, ಮುಖೇಶ್‌ ಕುಲಾಲ್‌ ಬರಾಯ, ದಿನೇಶ್‌ ಮೂಲ್ಯ ಮಾಲಾಡಿ, ಹರಿಶ್ಚಂದ್ರ ಪಾಂಡೇಶ್ವರ, ಹರೀಶ್‌ ಮೂಲ್ಯ, ಬಿ.ಎಸ್‌ ಕುಲಾಲ್‌ ಗುರುವಾಯನಕೆರೆ ಮೊದಲಾದವರು ಭಾಗವಹಿಸಿ ಸೂಕ್ತ ಸಲಹೆಗಳನ್ನು ನೀಡಿದರು.

Related posts

ಯುವಶಕ್ತಿ ಫ್ರೆಂಡ್ಸ್ ನ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬಂದಾರು: ಆದಿಪೂಜಿತ ಸಿದ್ದಿವಿನಾಯಕ ಕನ್ನಡ ಭಕ್ತಿಗೀತೆ ಆಡಿಯೋ ಬಿಡುಗಡೆ

Suddi Udaya

ನಾಲ್ಕೂರು: ಪ್ರಗತಿಪರ ಕೃಷಿಕ ಬಾಲಕೃಷ್ಣ ಶೆಟ್ಟಿ ಕುರೆಲ್ಯ ನಿಧನ

Suddi Udaya

ಕರಾಟೆ ಚಾಂಪಿಯನ್ ಶಿಪ್: ಬಜಿರೆ ಪಿ. ಎಂ.ಶ್ರೀ ಸ.ಉ. ಪ್ರಾ ಶಾಲೆಯ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

Suddi Udaya

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ : ಬೆಳ್ತಂಗಡಿಯ ಎಸ್.ಡಿ.ಎಂ ಶಾಲೆಗೆ ಹಲವು ಪ್ರಶಸ್ತಿ

Suddi Udaya

ಬೆಳ್ತಂಗಡಿ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನಲ್ಲಿ “ಅನಿಮಲ್ ಫಾರ್ಮ್” ಚಲನ ಚಿತ್ರ ಪ್ರದರ್ಶನ

Suddi Udaya
error: Content is protected !!