30.7 C
ಪುತ್ತೂರು, ಬೆಳ್ತಂಗಡಿ
April 24, 2026
ಅಪರಾಧ ಸುದ್ದಿ

ಪುಂಜಾಲಕಟ್ಟೆ: ತಲೆಮರೆಸಿಕೊಂಡಿದ್ದ ಆರೋಪಿಗಳಿಬ್ಬರ ಬಂಧನ: ಜಾಮೀನ‌ ಮೇಲೆ ಬಿಡುಗಡೆ

ಬೆಳ್ತಂಗಡಿ: ಪುಂಜಾಲಕಟ್ಟೆ ಪೋಲಿಸ್ ಠಾಣೆಯ ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿ,
ನಾಲ್ಕು ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ, ನಾಸೀರುದ್ದೀನ್ (25ವ) ಕಳಂಜಿಬೈಲು ಮನೆ ಪುತ್ತಿಲ ಗ್ರಾಮ ಎಂಬಾತನನ್ನು ಹಾಗೂ ಇದೇ ಠಾಣೆಯ ಪ್ರಕರಣವೊಂದರಲ್ಲಿ ಆರೋಪಿಯಾಗಿ 1 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಸಿನಾನ (23ವ) ಕಳಂಜಿಬೈಲು ಮನೆ, ಪುತ್ತಿಲ ಎಂಬುವವರನ್ನು ಮಾ.1ರಂದು
ಬೆಳ್ತಂಗಡಿ ತಾಲೂಕು ಪುತ್ತಿಲ ಗ್ರಾಮದ ಕಳಂಜಿಬೈಲು ಎಂಬಲ್ಲಿ ಪುಂಜಾಲಕಟ್ಟೆ ಪೊಲೀಸ್‌ ಠಾಣೆಯ HC ನವೀನ ಜಿ, HC‌ ಸಂದೀಪ್ ಎಸ್ , PC ಶಾಮರಾಯಯವರು ದಸ್ತಗಿರಿ ಮಾಡಿ ಎಸಿಜೆ ಮತ್ತು ಜೆ ಎಮ್ ಎಫ್ ಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ
ರೂ. 28,300/- ದಂಡವನ್ನು ವಿಧಿಸಿ ಉಳಿದ ಪ್ರಕರಣದಲ್ಲಿ ಷರತ್ತುಬದ್ದ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.

Related posts

ರೆಖ್ಯ: ಆಕಸ್ಮಿಕವಾಗಿ ರಸ್ತೆ ಕಾಂಕ್ರಿಟ್ ಚರಂಡಿಯ ಒಳಗೆ ಬಿದ್ದು ಚಾಲಕ ಮೃತ್ಯು

Suddi Udaya

ನಿವೃತ್ತ ಯೋಧ ದಿನೇಶ್ ಮೂಲ್ಯಹೃದಯಾಘಾತದಿಂದ ನಿಧನ

Suddi Udaya

ವೇಣೂರು: ಅಕ್ರಮ ಮರಳು ಸಾಗಟ: ರೂ.6 ಸಾವಿರ ಮೌಲ್ಯದ ಮರಳು ವಶಪಡಿಸಿಕೊಂಡ ವೇಣೂರು ಪೊಲೀಸರು

Suddi Udaya

ಕಳೆಂಜ: ಮನೆ ಪಂಚಾಂಗ ದೂಡಿ ಹಾಕಿದ ಪ್ರಕರಣ: ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಪ್ರಕರಣ ದಾಖಲು

Suddi Udaya

ನವೀನ್ ನೆರಿಯ ವಿರುದ್ದ ದಾಖಲಾಗಿದ್ದ ದ್ವೇಷ ಭಾಷಣ ಪ್ರಕರಣ‌ ವಜಾಗೊಳಿಸಿದ ಹೈಕೋರ್ಟ್

Suddi Udaya

ಶಾಲಾ ವಿದ್ಯಾರ್ಥಿನಿಯನ್ನು. ನಿರ್ಜನ ಪ್ರದೇಶದಲ್ಲಿ ತಡೆದು ಹಲ್ಲೆ : ಜೀವಬೆದರಿಕೆ, ಬಟ್ಟೆ ಹರಿದು ಮಾನಕ್ಕೆ ಕುಂದು ಆರೋಪ ವಿದ್ಯಾರ್ಥಿನಿ ವೇಣೂರು ಪೊಲೀಸ್ ಠಾಣೆಗೆ ದೂರು

Suddi Udaya
error: Content is protected !!