ಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿಬೆಳ್ತಂಗಡಿ

ಚಾರ್ಮಾಡಿ ಘಾಟಿಯಲ್ಲಿ ಚಿರತೆ: ವಾಹನ ಸವಾರರಲ್ಲಿ ಆತಂಕ

ಬೆಳ್ತಂಗಡಿ: ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿಯಲ್ಲಿ ಬುಧವಾರ ರಾತ್ರಿ ಚಿರತೆ ಪ್ರತ್ಯಕ್ಷವಾಗಿದ್ದು ವಾಹನ ಸವಾರರಲ್ಲಿ ಆತಂಕ ಎದುರಾಗಿದೆ.


ಘಾಟಿಯ ಹನ್ನೊಂದನೇ ತಿರುವಿನ ಬಳಿ, ಬೇಲೂರು 62ಕಿ.ಮೀ.ಮೈಲಿಗಲ್ಲು ಇರುವಲ್ಲಿ ಚಿರತೆ ರಸ್ತೆ ಬದಿ ತಿರುಗಾಟ ನಡೆಸಿದೆ. ಇದಕ್ಕೆ ಮೊದಲು ಚಿರತೆ ತಡೆಗೋಡೆ ಪ್ರದೇಶದಲ್ಲಿ ಕುಳಿತಿತ್ತು. ಈ ಎರಡು ದೃಶ್ಯಗಳನ್ನು ವಾಹನ ಸವಾರರು ಚಿತ್ರೀಕರಿಸಿದ್ದಾರೆ. ಕಳೆದ ತಿಂಗಳು ಇಲ್ಲಿಂದ ಸುಮಾರು 6 ಕಿ.ಮೀ.ದೂರದ ಚಿಕ್ಕಮಗಳೂರು ವಿಭಾಗದ ಘಾಟಿ ಪ್ರದೇಶದ ರಸ್ತೆ ಬದಿಯ ತಡೆಗೋಡೆಯಲ್ಲಿ ಚಿರತೆ ಕಂಡುಬಂದಿತ್ತು. ಬಳಿಕ ಕಳೆದ ವಾರ ಚಾರ್ಮಾಡಿ ಘಾಟಿಗೆ ಸಮೀಪದ ನೆರಿಯದ ರಬ್ಬರ್ ತೋಟದಲ್ಲಿ ಚಿರತೆ ಓಡಾಟ ನಡೆಸಿತ್ತು.


ಚಾರ್ಮಾಡಿ ಘಾಟಿ ಭಾಗದಲ್ಲಿ ಕಾಡಾನೆಗಳ ತಿರುಗಾಟ ಸಾಮಾನ್ಯವಾಗಿದ್ದು ಇದೀಗ ಚಿರತೆಗಳ ಓಡಾಟವು ಕಂಡು ಬರುತ್ತಿದೆ. ಇದಲ್ಲದೆ ಹಲವಾರು ಹಾವುಗಳು ಇಲ್ಲಿನ ರಸ್ತೆ ವ್ಯಾಪ್ತಿಯಲ್ಲಿ ಆಗಾಗ ತಿರುಗಾಟ ನಡೆಸುತ್ತವೆ. ಕಾಡು ಹಂದಿ,ಜಿಂಕೆ ಇತ್ಯಾದಿ ಪ್ರಾಣಿಗಳ ಓಡಾಟ ಇಲ್ಲಿ ಸಾಮಾನ್ಯವಾಗಿದೆ.


ಘಾಟಿ ಭಾಗದಲ್ಲಿ ವಾಹನ ಸವಾರರು ಹೆಚ್ಚಿನ ಮುಂಜಾಗ್ರತೆಯಿಂದ ಸಂಚರಿಸಬೇಕು.ವನ್ಯಜೀವಿಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ನೋಡಿ ಕೊಳ್ಳಬೇಕು. ವನ್ಯಜೀವಿಗಳಿಗೆ ತೊಂದರೆ ಉಂಟು ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Related posts

ಓಡೀಲು 33ನೇ ಸಾರ್ವಜನಿಕ ಗಣೇಶೋತ್ಸವ: ಗಣಪತಿ ದೇವರಿಗೆ ಬೆಳ್ಳಿ ಕಿರೀಟ ಸಮರ್ಪಣೆ

Suddi Udaya

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ: ಎಸ್.ಡಿ.ಎಂ. ಬಿ.ಎಡ್. ಕಾಲೇಜಿನ 25 ವಿದ್ಯಾರ್ಥಿಗಳು ಉತ್ತೀರ್ಣ

Suddi Udaya

ಬೆಳ್ತಂಗಡಿ: ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಹಾಗೂ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಸಹಯೋಗದಲ್ಲಿ “ರೋಟಾಲಯ ಸಂಗೀತ ಸ್ಪರ್ಧೆ”

Suddi Udaya

ಬೆಳ್ತಂಗಡಿ ಗೃಹರಕ್ಷಕದಳ ಘಟಕಕ್ಕೆ ಪ್ರಭಾರ ಘಟಕಾಧಿಕಾರಿಯಾಗಿ ಡೇನಿಸ್ ಡಿ’ಸೋಜ ನೇಮಕ

Suddi Udaya

ಮಚ್ಚಿನ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಮಂತ್ರಿಮಂಡಲ ರಚನೆ

Suddi Udaya

ದ್ವಿತೀಯ ಪಿಯುಸಿ ಫಲಿತಾಂಶ: ಕೊಕ್ಕಡ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶೇ. 69 ಫಲಿತಾಂಶ

Suddi Udaya
error: Content is protected !!