ಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿಶಾಲಾ ಕಾಲೇಜು

ಉಡುಪಿ:ಐದನೇ ರಾಷ್ಟ್ರೀಯ ಮಟ್ಟದ ಆಹ್ವಾನಿತ ಕರಾಟೆ ಚಾಂಪಿಯನ್ ಶಿಪ್

ಬೆಳ್ತಂಗಡಿ: ಉಡುಪಿ ಅಜ್ಜರಕಾಡು ಮಹಾತ್ಮಾ ಗಾಂಧಿ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ ಕುಬುಡೋ ಬುಡೋಕಾನ್ ಕರಾಟೆ-ಡೋ ಅಸೋಸಿಯೇಷನ್ ಕರ್ನಾಟಕ (ರಿ) ಸಂಸ್ಥೆಯು ನಡೆಸಿದ ಐದನೇ ರಾಷ್ಟ್ರೀಯ ಮಟ್ಟದ ಆಹ್ವಾನಿತ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಮುಹಮ್ಮದ್ ಹಫೀಲ್ ಕಟಾ ಪ್ರಥಮ, ಕುಮಿತೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.


ಆ ಬಳಿಕ ಮೈಸೂರು ನಗರದ ವಿಜಯನಗರ ಮುಡ ಸ್ಪೋರ್ಟ್ಸ್ ಗ್ರೌಂಡ್ ನಲ್ಲಿ ಓಶೋಕೈ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಮತ್ತು ಎಜುಕೇಶನಲ್ ಟ್ರಸ್ಟ್ ನಡೆಸಿದ ನೋಬೆಲ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಗ್ರೂಪ್ ಈವೆಂಟ್ ನಲ್ಲಿ ಸುಮಾರು 250 ಕರಾಟೆ ವಿದ್ಯಾರ್ಥಿಗಳಿಂದ ಏಕ ಸಮಯದಲ್ಲಿ 1500 ಟೈಲ್ಸ್ ಗಳನ್ನು ಒಂದು ನಿಮಿಷದಲ್ಲಿ ತುಂಡು ಮಾಡಿ ವಿಶ್ವ ದಾಖಲೆ ನಿರ್ಮಿಸಿರುತ್ತಾರೆ.

ಈ ವಿದ್ಯಾರ್ಥಿಗಳಿಗೆ ಕರಾಟೆ ಸಂಸ್ಥೆಯು ನೆನಪಿನ ಕಾಣಿಕೆ ಮತ್ತು ನೋಬೆಲ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆಯ ವತಿಯಿಂದ ಪ್ರಮಾಣ ಪತ್ರ ಗೌರವ ಲಭಿಸಲಿದೆ.
ಮುಂದುವರಿದು,
ಮೈಸೂರು ನಗರದ ಸೈಂಟ್ ಫಿಲೋಮಿನಾ ಕಾಲೇಜು ಸ್ಟೇಡಿಯಂ ನಲ್ಲಿ ನಡೆದ ಮೈಸೂರು ಓಪನ್ ಕರಾಟೆ ಚಾಂಪಿಯನ್ ಶಿಪ್ – 2023 ಇದರಲ್ಲಿ ಮುಹಮ್ಮದ್ ಹಫಿಲ್ ಭಾಗವಹಿಸಿ ಕಟಾ ವಿಭಾಗದಲ್ಲಿ ಪ್ರಥಮ, ಕುಮಿತೆ ವಿಭಾಗದಲ್ಲಿ ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.
ಇದಾದ ಬಳಿಕ
ಶೃಂಗೇರಿ ಕೊಪ್ಪದಲ್ಲಿ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಡೋಕಾನ್ ಕರಾಟೆ ಮತ್ತು ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ನಡೆದ ಪ್ರಥಮ ಓಪನ್ ಕರಾಟೆ ಚಾಂಪಿಯನ್ ಶಿಪ್ – 2023 ರಲ್ಲಿ ಭಾಗವಹಿಸಿದ ಮುಹಮ್ಮದ್ ಹಫಿಲ್ ಇವರು ಕಟಾ ವಿಭಾಗದಲ್ಲಿ ಪ್ರಥಮ, ಕುಮಿತೆ ವಿಭಾಗದಲ್ಲಿ ಪ್ರಥಮ ಸ್ಥಾನ ಬಾಚಿಕೊಂಡಿದ್ದಾರೆ.
ಮುಹಮ್ಮದ್ ಶಾಹಿಲ್ ಅವರು ಕುದ್ರಡ್ಕದ ಕೆ.ಎಮ್ ಹನೀಫ್ ಮತ್ತು ಆಯಿಶಾ ದಂಪತಿಯ ಪುತ್ರರಾಗಿವದ್ದು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ 7 ನೇ ತರಗತಿಯ ವಿದ್ಯಾರ್ಥಿಯಾಗಿದ್ದಾರೆ.
ಇವರಿಗೆ ಕರಾಟೆ ನಿರ್ದೇಶಕ ಮತ್ತು ಮುಖ್ಯ ಶಿಕ್ಷಕ ಶಿಹಾನ್ ವಸಂತ ಕೆ ಬಂಗೇರ ಪಾರೇಂಕಿ ಇವರು ತರಭೇತಿ ನೀಡಿದ್ದಾರೆ.

Related posts

ನ್ಯಾಯಾಲಯಕ್ಕೆ ಹಾಜರಾಗದ ವಾರಂಟ್ ಆರೋಪಿಯನ್ನು ಬಂಧಿಸಿದ ಧರ್ಮಸ್ಥಳ ಪೊಲೀಸರು

Suddi Udaya

ಗುರಿಪಳ್ಳ ಒಕ್ಕೂಟದ ವತಿಯಿಂದ ನಿಡಿಗಲ್ ದೇವಸ್ಥಾನದಲ್ಲಿ ವನಮಹೋತ್ಸವ ಕಾರ್ಯಕ್ರಮ

Suddi Udaya

ಸಮಾಜ ಸೇವಕ ಕೇಶವ ಫಡಕೆಯವರಿಗೆ ಸನ್ಮಾನ

Suddi Udaya

ಮರೋಡಿ: ನ್ಯುಮೋನಿಯದಿಂದ 7ವರ್ಷದ ಬಾಲಕಿ ನಿಧನ

Suddi Udaya

ಬೆಳ್ತಂಗಡಿ: ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ, ಹೊಗೆ ರಹಿತ ವಾಹನ ನಿರ್ಮಲ ಪರಿಸರದ ಜೀವನ ಬಗ್ಗೆ ಕಾರ್ಯಕ್ರಮ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥನ ದರ್ಶನ ಪಡೆದ ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್

Suddi Udaya
error: Content is protected !!