September 6, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಬೆಳ್ತಂಗಡಿ

ಬಿ ಎಂ ಎಸ್ ರಿಕ್ಷಾ ಚಾಲಕ ಸದಸ್ಯರಿಗೆ ಕ್ಷೇಮ ನಿಧಿ ಯೋಜನೆ

ಬೆಳ್ತಂಗಡಿ:ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ಇದರ ವತಿಯಿಂದ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಎಂಎಸ್ ರಿಕ್ಷಾ ಚಾಲಕ ಸದಸ್ಯರಿಗೆ ಕ್ಷೇಮ ನಿಧಿಯನ್ನು ಉಜಿರೆಯ ಉದ್ಯಮಿ ,ಲಕ್ಷ್ಮೀ ಗ್ರೂಪ್ ನ ಮಾಲಕರಾದ ಮೋಹನ್ ಕುಮಾರ್ ಅವರು ಪೆ.3ರಂದು ಉದ್ಘಾಟಿಸಿ ಚಾಲನೆ ನೀಡಿದರು

. ಮತ್ತು ಅವರು ಉಪಸ್ಥಿತರಿದ್ದ ರಿಕ್ಷಾ ಚಾಲಕರನ್ನು ಉದ್ದೇಶಿಸಿ ತಾನು ರಿಕ್ಷಾ ಚಾಲಕರ ಸಂಕಷ್ಟಕ್ಕೆ ಸದಾ ಸಹಾಯ ಮಾಡುತ್ತೇನೆಂದು ಭರವಸೆ ನೀಡಿದರು
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಿಎಂಎಸ್ ಹಿರಿಯ ನಾಯಕರು ವಿಶ್ವನಾಥ ಶೆಟ್ಟಿ ಅವರು ರಿಕ್ಷಾ ಚಾಲಕರು ತಮ್ಮ ‌ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳುವಂತೆ ಹಾಗೂ ಕ್ಷೇಮ ನಿಧಿಯ ಯೋಜನೆಯನ್ನು ಉತ್ತಮ ಕಾರ್ಯಗತಗೊಳಿಸಲು ಪ್ರಯತ್ನಿಸುವಂತೆ ವಿನಂತಿಸಿದರು.ಕಟ್ಟಡ ಕಾರ್ಮಿಕರ ಮಂಡಳಿಯಂತೆ ರಿಕ್ಷಾ ಚಾಲಕರ ಶ್ರೇಯೋಬಿವ್ರದ್ದಿಗೆ ಮಂಡಳಿಯನ್ನು ರಚಿಸುವಂತೆ ಭಾರತೀಯ ಮಜ್ದೂರ್ ಸಂಘ ಕರ್ನಾಟಕ ಸರಕಾರವನ್ನು ಅನೇಕ ಭಾರಿ ಒತ್ತಾಯಿಸಿದೆ.ಈ ಹೋರಾಟಕ್ಕೆ ಬಲ ಬರಬೇಕಾದರೆ ರಿಕ್ಷಾ ಚಾಲಕರು ಸಂಘಟಿತರಾಗಬೇಕಾಗುವುದು ಅವಶ್ಯಕ ಎಂದು ತಿಳಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಎಂಎಸ್ ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್ ಯು. ವಹಿಸಿದ್ದರು

ಬಿಎಂಎಸ್ ರಾಜ್ಯ ಕಾರ್ಯದರ್ಶಿ ಶ್ರೀ ಜಯರಾಜ್ ಸಾಲಿಯಾನ್ ,.ಬಿಎಂಎಸ್ ಬೆಳ್ತಂಗಡಿ ತಾಲೂಕು ಸಮಿತಿ ಅದ್ಯಕ್ಷರಾದ ಉದಯ ಬಿ.ಕೆ.
ಬಿಎಂಎಸ್ ರಿಕ್ಷಾ ಚಾಲಕ ಸಂಘ ಬೆಳ್ತಂಗಡಿ ಗೌರವ ಸಲಹೆಗಾರರು ರಿಕ್ಷಾ ಸಂಘಟನೆಯ ಮುಂಖಡರಾದ ಉಮೇಶ್ ಅತ್ತಾಜೆ ಹಾಗೂ ಅದ್ಯಕ್ಷರಾದ ಕ್ರಷ್ಣ ಬೆಳಾಲು ,ಪ್ರಧಾನ ಕಾರ್ಯದರ್ಶಿ ರಮೇಶ್ ಕುದ್ರಡ್ಕ,ಪ್ರಶಾಂತ ಗರ್ಡಾಡಿ,ಲವಕುಮಾರ್ ಕಾರ್ಯಕ್ರಮವನ್ನು ಬಿಎಂಎಸ್ ತಾಲೂಕು ಸಂಯೋಜಕ ಬಿಎಂಎಸ್ ತಾಲೂಕು ಸಂಯೋಜಕ ಸಾಂತಪ್ಪ ಕಲ್ಮಂಜ ನಿರೂಪಿಸಿ,ರಿಕ್ಷಾ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ಕೆ.ಕುದ್ರಡ್ಕ ಸ್ವಾಗತಿಸಿ ಪ್ರಶಾಂತ ಗರ್ಡಾಡಿ ವಂದಿಸಿದರು

Related posts

ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಕ್ರೀಡಾ ಶಿಬಿರದ ಸಮಾರೋಪ ಸಮಾರಂಭ

Suddi Udaya

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ಹೊರಂಗಣ ಜಲಾವೃತ

Suddi Udaya

ವಾಣಿ ಆಂಗ್ಲ ಮಾಧ್ಯಮ ಶಾಲೆಯ ನೂತನ ಮಂತ್ರಿಮಂಡಲದ ಪ್ರಮಾಣವಚನ ಸಮಾರಂಭ

Suddi Udaya

ಬಂದಾರು: ಪೆರ್ಲ ಬೈಪಾಡಿಯ ಕಾಡಂಡ ಬಳಿ ಗುಡ್ಡಕ್ಕೆ ಬೆಂಕಿ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕಮೋಡ್ ವೀಲ್‌ಚೇರ್ ವಿತರಣೆ

Suddi Udaya

ಕೊಕ್ರಾಡಿ: ದೇವೆಂದ್ರ ಹೆಗ್ಡೆಯವರ ಮಾತೃಶ್ರೀ ಕೊಡಂಗೆಗುತ್ತು ನೀಲಮ್ಮ ಹೆಗ್ಡೆ ನಿಧನ

Suddi Udaya
error: Content is protected !!