September 6, 2026
ಗ್ರಾಮಾಂತರ ಸುದ್ದಿಬೆಳ್ತಂಗಡಿವರದಿ

ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಕ್ರೀಡಾ ಶಿಬಿರದ ಸಮಾರೋಪ ಸಮಾರಂಭ

ಉಜಿರೆ: ಶ್ರೀ ಧ.ಮ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಕ್ರೀಡಾ ಶಿಬಿರದ ಸಮಾರೋಪ ಸಮಾರಂಭ ಎ.10 ರಂದು ಜರಗಿತು.

ಎಸ್.ಡಿ. ಎಮ್. ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಕ್ಷೇಮ ಪಾಲನ ಅಧಿಕಾರಿ ಧನ್ಯ ಕುಮಾರ್ ಇವರು ವಿದ್ಯಾರ್ಥಿಗಳಿಗೆ ಕ್ರೀಡೆಯ ಮಹತ್ವ ಅದರಿಂದ ಆಗುವ ಪ್ರಯೋಜನ ಮತ್ತು ಅದನ್ನು ಸಂಪೂರ್ಣವಾಗಿ ನಿಮ್ಮ ಜೀವನದಲ್ಲಿ ತೊಡಗಿಸಿಕೊಳ್ಳಿ ಇದರಿಂದ ನಿಮ್ಮ ಜೀವನಕ್ಕೂ ಮತ್ತು ನಿಮ್ಮ ಆರೋಗ್ಯಕ್ಕೂ ಉತ್ತಮ ಎಂದರು.

ವೇದಿಕೆಯಲ್ಲಿ ಎಸ್.ಡಿ.ಎಮ್ ಸ್ಪೋರ್ಟ್ಸ್ ಕ್ಲಬ್ ನ ಕಾರ್ಯದರ್ಶಿ ರಮೇಶ್ ಎಚ್., ಎಸ್ ಡಿ ಎಮ್ ಪದವಿ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕಿ ಶಾರದ, ಎಸ್ ಡಿ ಎಮ್ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಸಂದೇಶ ಪೂoಜ, ಸುದಿನ, ದೈಹಿಕ ಶಿಕ್ಷಣ ನಿರ್ದೇಶಕರು ಎಸ್ಡಿಎಂ ಪದವಿ ಕಾಲೇಜು. ಸುಭಾಷ್, ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಧ ಮ ಆಂಗ್ಲ ಮಾಧ್ಯಮ ಶಾಲೆ ಉಜಿರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತರಬೇತು ನೀಡಿದ ಎಸ್ ಡಿ ಎಮ್ ಪದವಿ ಕಾಲೇಜಿನ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶ್ರೀ ಧ ಮ ಅನುದಾನಿತ ಸೆಕೆಂಡರಿ ಶಾಲೆಯ ಶಿಕ್ಷಕಿ ತ್ರಿವೇಣಿ ಇವರು ಸಭೆಯ ಅಧ್ಯಕ್ಷತೆಯ ನುಡಿಯೊಂದಿಗೆ ವಂದಿಸಿದರು. ಕಾರ್ಯಕ್ರಮದ ಸಂಯೋಜಕರಾದ ದೈಹಿಕ ಶಿಕ್ಷಣ ಶಿಕ್ಷಕ ಪರಮೇಶ್ವರ್ ಇವರು ಸ್ವಾಗತಿಸಿದರು. ವಿದ್ಯಾರ್ಥಿಯಾದ ಆತ್ಮೀ ಕಾರ್ಯಕ್ರಮ ನಿರೂಪಿಸಿದರು.

Related posts

ನಿಡಿಗಲ್: ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ – ಶಾಂಭವಿ ವಿಲಾಸ ಯಕ್ಷಗಾನ ಪ್ರದರ್ಶನ

Suddi Udaya

ಸುವರ್ಣಮಹೋತ್ಸವ ಸಂಭ್ರಮದಲ್ಲಿ ಸಾಲಿಗ್ರಾಮ ಮಕ್ಕಳ ಮೇಳ: ಧರ್ಮಸ್ಥಳದಲ್ಲಿ ಸುವರ್ಣ ಪರ್ವ ಉದ್ಘಾಟನೆ

Suddi Udaya

ಅರಸಿನಮಕ್ಕಿ ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ಶಿಬಿರ

Suddi Udaya

ಇಂದು ಸಂಜೆ ಬಹುನಿರೀಕ್ಷಿತ ದಸ್ಕತ್ ತುಳು ಚಲನಚಿತ್ರದ ಟೀಸರ್ ಬಿಡುಗಡೆ

Suddi Udaya

ಕಳೆಂಜ: ಕುಶಾನಿ ಶೆಟ್ಟಿಯ ಹುಟ್ಟುಹಬ್ಬದ ಪ್ರಯುಕ್ತ ಶಿಬರಾಜೆ ಅಂಗನವಾಡಿಗೆ ಪ್ಯಾನ್ ಕೊಡುಗೆ

Suddi Udaya

ಖ್ಯಾತ ನೋಟರಿ ನ್ಯಾಯವಾದಿ ಸೇವಿಯರ್ ಪಾಲೇಲಿ ಕಾಂಗ್ರೆಸ್ ಸೇರ್ಪಡೆ

Suddi Udaya
error: Content is protected !!