ಅಪರಾಧ ಸುದ್ದಿಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ತೋಟಾತ್ತಾಡಿ:ಜುಗಾರಿ ಅಡ್ಡೆಗೆ ಪೊಲೀಸರ ದಾಳಿ

ತೋಟತ್ತಾಡಿ : ತೋಟತ್ತಾಡಿ ಗ್ರಾಮದ ಮುಂಡಾಯಿಲು ಎಂಬಲ್ಲಿ ಸರಕಾರಿ ಗುಡ್ಡದಲ್ಲಿ ಜುಗಾರಿ ಆಟವಾಡುತ್ತಿದ್ದ
ಅಡ್ಡೆಗೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿ, ,ರೂ.11,870 ಮೌಲ್ಯದ ಸೋತ್ತುಗಳನ್ನು ವಶಪಡಿಸಿಕೊಂಡ ಘಟನೆ ಮಾ.12 ರಂದು ವರದಿಯಾಗಿದೆ.

ಚಾರ್ಮಾಡಿ ಗ್ರಾಮದ  ಅರೆಕಲ್ ಮನೆ ನಿವಾಸಿ ರಹೀಂ ( 44ವರ್ಷ), 

ಮುಂಡಾಜೆ ಗ್ರಾಮದ, ದೇವಗುಡಿ ಮನೆಯ ಫಯಾಜ್‌ ಪಾಷಾ ( 33 ವರ್ಷ), ‌‌ಕಡಿರುದ್ಯಾವರ ಗ್ರಾಮದ,
ಕಾನಪ೯ ನಿವಾಸಿ ರಾಜೇಶ್‌, (46 ವರ್ಷ) ,ತೋಟತ್ತಾಡಿ ಗ್ರಾಮದ‌ ಮುಂಡಾಯಿಲ್‌ ಮನೆಯ
ಅನೀಲ್ ( 45 ವರ್ಷ) ಬಂಧಿತರಾದವರು. ಸಿದ್ದಿಕ್‌ ಯಾನೆ ಅರೆಕಲ್‌ ಸಿದ್ದಿಕ್‌, ಕೃಷ್ಣ ಯಾನೆ ಕಿಟ್ಟ ಗಾಂಧಿನಗರ, ಸಂತೋಷ್‌ ಗಾಂಧಿನಗರ, ಸುಧಾಕರ ಕೊಯಿಕುರಿ ಪೊಲೀಸರ ದಾಳಿ ವೇಳೆ ತಪ್ಪಿಸಿಕೊಂಡಿದ್ದಾರೆ.
ಘಟನೆ ವಿವರ: ತೋಟತ್ತಾಡಿ ಗ್ರಾಮದ ಮುಂಡಾಯಿಲು ಎಂಬಲ್ಲಿ ಸರಕಾರಿ ಗುಡ್ಡದಲ್ಲಿ ಕೆಲವರು ಹಣವನ್ನು ಪಣವಾಗಿಟ್ಟು ಇಸ್ಪೀಟ್‌ ಜುಗಾರಿ ಆಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯನ್ವಯ ಮಾ.22ರಂದು ಬೆಳಗ್ಗಿನ ಜಾವ 3.30 ಗಂಟೆಗೆ ಜುಗಾರಿ ಅಡ್ಡೆಗೆ ಧಾಳಿ ನಡೆಸಿದಾಗ ಆಟ ಆಡುತ್ತಿದ್ದವರು ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದ್ದು ಓಡಿ ಹೋಗುತ್ತಿದ್ದವರನ್ನು ಪೊಲೀಸರು ಬೆನ್ನಟ್ಟಿ ನಾಲ್ಕು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳದಲ್ಲಿದ್ದ ಪ್ಲಾಸ್ಟಿಕ್‌ ಚಾಪೆ,
ಮೇಣದ ಬತ್ತಿ , ಲೈಟರ್‌ ,
ವಿವಿಧ ಜಾತಿಯ ಇಸ್ಪೀಟ್‌ ಎಲೆಗಳು,
ಒಟ್ಟು ರೂ 7,070 ನಗದು, ಒಂದು ಟಚ್‌ ಸ್ಕ್ರೀನ್‌ ಮೊಬೈಲ್‌, ನಾಲ್ಕು
ಚಿಕ್ಕ ಮೊಬೈಲ್‌ ಪೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೋತ್ತುಗಳ ಒಟ್ಟು ಮೌಲ್ಯ ರೂ.
11,870 ಎಂದು ಅಂದಾಜಿಸಲಾಗಿದೆ.
ಧಮ೯ಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಡಿ.16: ಮರೋಡಿ ಶಾರದಾಂಬ ಪ್ಲೇಯರ್ಸ್ ಆಶ್ರಯದಲ್ಲಿ ಪುರುಷರ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾಟ ಹಾಗೂ ಮಹಿಳೆಯರ ಮುಕ್ತ ತ್ರೋಬಾಲ್ ಪಂದ್ಯಾಟ, “ಸ್ಪಂದನಾ ಟ್ರೋಫಿ-2023”

Suddi Udaya

ಗೇರುಕಟ್ಟೆ ಶ್ರೀ ಕೃಷ್ಣ ಮಹಿಳಾ ಭಜನಾ ಮಂಡಳಿ ವತಿಯಿಂದ ಕೃಷ್ಣ ಜನ್ಮಾಷ್ಠಮಿ

Suddi Udaya

ಕಳೆಂಜ ರಾಜೇಶ್ ಎಂ.ಕೆ ರವರ ಪೋಕ್ಸೋ ಪ್ರಕರಣ: ಅಪ್ರಾಪ್ತ ವಯಸ್ಕಳ ಮೂಲಕ ಸುಳ್ಳು ಪ್ರಕರಣ ದಾಖಲಿಸಿ ಕಾನೂನು ವ್ಯವಸ್ಥೆಯ ದುರ್ಬಳಕೆ ಮಾಡಿದ ಬಗ್ಗೆ ಮಂಗಳೂರು ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ಕಳೆಂಜ ಗ್ರಾಮಸ್ಥರಿಂದ ಮನವಿ

Suddi Udaya

ಬೆಳ್ತಂಗಡಿ: ಕೂಟ ಮಹಾ ಜಗತ್ತು ಮಹಿಳಾ ವೇದಿಕೆಯಿಂದ ಆಟಿ ಕೂಟ ಆಚರಣೆ: ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಮಹನೀಯರಿಗೆ ವಿವಿಧ ಸ್ಪರ್ಧೆಗಳು

Suddi Udaya

ಉಜಿರೆ ಎಸ್.ಡಿ.ಎಂ. ಮಹಿಳಾ ಐ.ಟಿ.ಐ. ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭ ಹಾಗೂ ಆಟಿದ ಕೂಟ

Suddi Udaya

ನ್ಯಾಯತರ್ಪು: ಜಾರಿಗೆಬೈಲು ಮಸೀದಿ ಬಳಿ ತಂಡಗಳ ನಡುವೆ ಹಲ್ಲೆ: ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya
error: Content is protected !!