September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ: ಕೂಟ ಮಹಾ ಜಗತ್ತು ಮಹಿಳಾ ವೇದಿಕೆಯಿಂದ ಆಟಿ ಕೂಟ ಆಚರಣೆ: ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಮಹನೀಯರಿಗೆ ವಿವಿಧ ಸ್ಪರ್ಧೆಗಳು

ಬೆಳ್ತಂಗಡಿ : ಕೂಟ ಮಹಾ ಜಗತ್ತು ಬೆಳ್ತಂಗಡಿ ಇದರ ಮಹಿಳಾ ವೇದಿಕೆಯಿಂದ ಆಟಿ ಕೂಟವು ಮಹಿಳಾ ಸದಸ್ಯರಲ್ಲೊಬ್ಬರಾದ ಲಕ್ಷ್ಮಿ ಮಾಧವ ಹೊಳ್ಳ ಇವರ ಮನೆಯಲ್ಲಿ ಜು. 31ರಂದು ಜರುಗಿತು. ಕೂಟ ಮಹಾಜಗತ್ತು ಬೆಳ್ತಂಗಡಿ ಇದರ ಅಧ್ಯಕ್ಷ ವಿಶ್ವನಾಥ ಹೊಳ್ಳ ಮತ್ತು ಮಹಿಳಾವೇದಿಕೆಯ ಅಧ್ಯಕ್ಷೆಯಾಗಿರುವ ಶ್ರೀಮತಿ ನಳಿನಿ ಹೊಳ್ಳ ಕಾರ್ಯಕ್ರಮ ವನ್ನು ಉದ್ಘಾಟಿಸಿದರು.

ಮಹಿಳಾ ವೇದಿಕೆಯ ನಿಕಟಪೂರ್ವ ಅಧ್ಯಕ್ಷೆ ಪದ್ಮಾಕ್ಷಿ ಎಂ ರಾವ್ ಇವರು ಆಟಿಯ ಆಚರಣೆಯ ಬಗ್ಗೆ,ಮತ್ತು ಆಟಿಯಲ್ಲಿ ತಯಾರಿಸುವ ಆಹಾರಗಳ ಬಗ್ಗೆ ತಿಳಿಸಿಕೊಡುತ್ತಾ ಮುಂದಿನ ಪೀಳಿಗೆಗೂ ಈ ಆಚರಣೆಗಳೆಲ್ಲ ವರ್ಗಾವಣೆ ಆಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಮಹಿಳಾ ಸದಸ್ಯೆಯರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ತಮ್ಮ ಮನೆಗಳಿಂದ ಆಟಿಯ ವಿಶೇಷ ಖಾದ್ಯಗಳನ್ನು ತಯಾರಿಸಿ ತಂದು ಹಂಚಿಕೊಂಡು ಸೇವಿಸಿ ಸಂತೋಷಪಟ್ಟರು.

ಮಕ್ಕಳಿಗೆ ಮಹಿಳೆಯರಿಗೆ ಮತ್ತು ಮಹನೀಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಅದರಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ಮಹಿಳಾ ವೇದಿಕೆಯ ಕಾರ್ಯದರ್ಶಿ ಅಕ್ಷತಾ ಅಡೂರ್ ಮತ್ತು ಹಿರಿಯ ಸದಸ್ಯೆ ಲಲಿತಾ ರಾವ್ ಉಪಸ್ಥಿತರಿದ್ದರು.
ವೇದಿಕೆಯ ಸದಸ್ಯೆಯರಾದ ಮಮತಾ ಕಾರ್ಯಕ್ರಮ ನಿರೂಪಣೆಯನ್ನು ನೆರವೇರಿಸಿದರು. ವಿದ್ಯಾಶ್ರೀ ಅಡೂರ್ ವಂದಿಸಿದರು.

Related posts

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಭೇಟಿ

Suddi Udaya

ನಾವೂರು: ವಾಲ್ಟರ್ ಪಾಯಸ್ ನಿಧನ

Suddi Udaya

ಮಿತ್ತಬಾಗಿಲು: ವಳಗುಡ್ಡೆ ನಿವಾಸಿ ಕೃಷ್ಣ ಗೌಡ ನಿಧನ

Suddi Udaya

ಡಿ.16-30: ಧರ್ಮಸ್ಥಳದಲ್ಲಿ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರ

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದಲ್ಲಿ ಸರ್ವಜ್ಞ ಜಯಂತಿ ಆಚರಣೆ:

Suddi Udaya

ನಾರಾವಿ: ಎನ್ ಎಸ್ ಎಸ್ ವತಿಯಿಂದ ಗಾಂಧಿ ಜಯಂತಿ ಹಾಗೂ ಈದ್ ಮಿಲಾದ್ ಆಚರಣೆ

Suddi Udaya
error: Content is protected !!