24.7 C
ಪುತ್ತೂರು, ಬೆಳ್ತಂಗಡಿ
May 17, 2025
ಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿರಾಜ್ಯ ಸುದ್ದಿ

ರಾಜ್ಯದಲ್ಲಿ ಸ್ವಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಿಜೆಪಿಯ ಯಾವುದೇ ಶಾಸಕರು ಕಾಂಗ್ರೆಸ್‌ ಪಕ್ಷಕೆ ಹೋಗುತ್ತಿಲ್ಲ: ಈಶ್ವರಪ್ಪ

ಧಮ೯ಸ್ಥಳ: ದೇಶದಲ್ಲಿ ಪ್ರಧಾನಿ ಮೋದಿಯವರ ನೇತೃತ್ವ, ಹಾಗೂ ರಾಜ್ಯದಲ್ಲಿ ದಾಖಲೆ ಮೊತ್ತದಲ್ಲಿ ನಡೆದ ಅಭಿವೃದ್ಧಿ ಕಾಯ೯ಗಳಿಂದ ರಾಜ್ಯದ ಜನತೆಯ ನಿಲುವು ಬಿಜೆಪಿ ಪರವಾಗಿದೆ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತದಿಂದ ಅಧಿಕಾರಕ್ಕೆ ಬರಲಿದ್ದು, ಭ್ರಷ್ಟಾಚಾರದಲ್ಲಿ ಸಿಕ್ಕಿಬಿದ್ದು, ತಿಹಾರ್‌ ಜೈಲ್‌ನಲ್ಲಿದ್ದು, ಜಾಮೀನಿನ ಮೇಲೆ ಇರುವ ಕಾಂಗ್ರೆಸ್‌ ಪಕ್ಷದ ನಾಯಕರು ಇನ್ನೊಬ್ಬರ ಮೇಲೆ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಎಂಬುದು ರಾಜ್ಯದಲ್ಲಿ ಖಾಲಿ ಡಬ್ಬವಾಗಿದೆ. ಇದು ಶಬ್ದಮಾತ್ರ ಮಾಡುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ. ಎಸ್‌ ಈಶ್ವರಪ್ಪ ಹೇಳಿದರು.
ಅವರು ಮಾ.12ರಂದು ಧಮ೯ಸ್ಥಳದ ಸನ್ನಿದಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ನೇತೃತ್ವದ ಸರಕಾರ, ರಾಜ್ಯದಲ್ಲಿ ಹಾಗೂ ದೇಶದಲ್ಲಿ ನಡೆದ ಅಭಿವೃದ್ಧಿ ಕಾಯ೯ಗಳು, ಪಕ್ಷದ ಸಂಘಟನಾ ಶಕ್ತಿಯಿಂದ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದನೆ, ಭಾರತೀಯ ಸಂಸ್ಕೃತಿಯ ರಕ್ಷಣೆ ಹಾಗೂ ದೇಶದ ರಕ್ಷಣೆ ಕಾಯ೯ಗಳಿಂದ ಜನರು ಬಿಜೆಪಿ ಪಕ್ಷದ ಸರಕಾರದ ಮೇಲೆ ನಿರೀಕ್ಷೆಗೂ ಮೀರಿ ಬೆಂಬಲ ನೀಡುತ್ತಿದ್ದಾರೆ. ಇದು ಮುಂದಿನ ಚುನಾವಣೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿಯ ಯಾವುದೇ ಶಾಸಕರು ಜೀವ ಇಲ್ಲದೆ ಹೋಗಿರುವ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ ಆಗುತ್ತಿಲ್ಲ, ಹಗಲು ಕಂಡ ಬಾವಿಗೆ ರಾತ್ರಿ ಹೋಗಿ ಬೀಳಲು ಯಾರೂ ತಯಾರಿಲ್ಲ, ಭ್ರಷ್ಟಾಚಾರದಲ್ಲಿ ಸಿಕ್ಕಿ ಬಿದ್ದು, ಬೇಲ್‌ನಲ್ಲಿರುವ ಡಿ.ಕೆ ಶಿವಕುಮಾರ್‌ ಹಾಗೂ ಅಕ೯ವತಿ ಯೋಜನೆಯಲ್ಲಿ 800 ಎಕ್ರೆ ಡಿನೋಟೀಫಿಕೇಶನ್‌ ಮಾಡಿ, ಕೋಟಿ, ಕೋಟಿ ಊಟಿ ಮಾಡಿದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಾವು ಮಾಡಿರುವ ಕಳ್ಳತನವನ್ನು ಮರೆಮಾಚಿ ಇನ್ನೋಬ್ಬರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ಪಕ್ಷದ ಶಾಸಕರು ಭ್ರಷ್ಟಾಚಾರದಲ್ಲಿ ಸಿಕ್ಕಿ ಬಿದ್ದಿರುವ ವಿಷಯದ ಬಗ್ಗೆ ಪತ್ರಕತ೯ರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ ಅವರು ಉಪ್ಪು ತಿಂದವ ನೀರು ಕುಡಿಯಲೇ ಬೇಕು. ಇದನ್ನು ನಾವು ಸಮಥ೯ನೆ ಮಾಡುವುದಿಲ್ಲ, ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ ಎಂದು ಸ್ವಷ್ಟಪಡಿಸಿದರು.
ಸಚಿವ ಸೋಮಣ್ಣ ಅವರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ವಿಷಯದ ಬಗ್ಗೆ ಮಾತನಾಡಿ, ಅವರಿಗಾದ ನೋವಿನ ಬಗ್ಗೆ ಅವರಲ್ಲಿ ರಾಜ್ಯದ ಮುಖಂಡರು ಕೂತು ಮಾತನಾಡುತ್ತಾರೆ. ರಾಜಕೀಯ ಎಂಬುವುದು ಪವಿತ್ರವಾದ ಗಂಗೆಯಂತೆ, ಬಿಜೆಪಿ ಪವಿತ್ರ ನೀರಿನಂತೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ, ಯಾವುದೇ ಪಕ್ಷ ಸ್ವಷ್ಟ ಬಹುಮತ ಪಡೆದುಕೊಳ್ಳುವುದಿಲ್ಲ ಎಂಬದುದು ರಾಜ್ಯದ ಜನತೆಯ ಅಭಿಪ್ರಾಯವಲ್ಲ, ಇದು ಕಾಂಗ್ರೆಸ್‌ನವರ ಅಭಿಪ್ರಾಯ ಇತ್ತಿಚೇಗೆ ನಡೆದ ಈಶಾನ್ಯ ರಾಜ್ಯದ ಚುನಾವಣೆಯಲ್ಲಿ ಬಿಜೆಪಿ ಮೂರು ಕಡೆಗಳಲ್ಲಿ ಅಧಿಕಾರಕ್ಕೆ ಬಂದಿದೆ. ಮುಂದೆ ರಾಜ್ಯದಲ್ಲೂ ಸ್ವಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಹರೀಶ್‌ ಪೂಂಜ, ವಿಜಯ ಸಂಕಲ್ಪ ಯಾತ್ರೆಯ ರಾಜ್ಯ ಸಹಸಂಚಾಲಕ ದತ್ತಾತ್ರೇಯ, ಬಿಜೆಪಿ ಜಿಲ್ಲಾಧ್ಯಕ್ಷ ಸುದಶ೯ನ ಮೂಡಬಿದ್ರೆ, ತಾಲೂಕು ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್‌, ಜಿಲ್ಲಾ ಉಪಾಧ್ಯಕ್ಷ ಕೊರಗಪ್ಪ ನಾಯ್ಕ, ಎಸ್‌.ಟಿ ಮೋಚಾ೯ ಜಿಲ್ಲಾಧ್ಯಕ್ಷ ಚೆನ್ನಕೇಶವ ಮುಂಡಾಜೆ ಉಪಸ್ಥಿತರಿದ್ದರು.

Related posts

ಮುಗಳಿ ಬ್ರಹ್ಮ ಕ್ಷೇತ್ರ ದೇವರ ಸನ್ನಿಧಿ ಬಸದಿ ಒಳಗೆ ನುಗ್ಗಿದ್ದ ನೀರು

Suddi Udaya

ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿ- ಗಾಯಾಳು ಪುತ್ತೂರು ಆಸ್ಪತ್ರೆಗೆ ದಾಖಲು

Suddi Udaya

ಕಲ್ಮಂಜ: 18ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ

Suddi Udaya

ನಾಲ್ಕೂರು ಬೋವಾಡಿ ದೈವಸ್ಥಾನದಲ್ಲಿ ದೊಂಪದ ಬಲಿ ಉತ್ಸವ: ಶ್ರೀ ಕೊಡಮಣಿತ್ತಾಯ ಹಾಗೂ ಕಲ್ಲುರ್ಟಿ, ಕಲ್ಕುಡ ದೈವಗಳ ನೇಮೋತ್ಸವ

Suddi Udaya

ಬಿರುಗಾಳಿ: ಹಲೇಜಿ -ಕಲಾಯಿಯಲ್ಲಿ ನೂರಕ್ಕೂ ಹೆಚ್ಚು ಅಡಿಕೆ ಗಿಡಗಳು ಹಾಗೂ ನಾಲ್ಕು ಕರೆಂಟ್ ಕಂಬಗಳು ಧಾರಾಶಾಹಿ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಚರ್ಮರೋಗ ತಪಾಸಣಾ ಶಿಬಿರ : 200 ಕ್ಕೂ ಅಧಿಕ ಮಂದಿ ಶಿಬಿರದಲ್ಲಿ ಭಾಗಿ

Suddi Udaya
error: Content is protected !!