ರಸ್ತೆ – ಕುಡಿಯುವ ನೀರಿನ ಬೇಡಿಕೆಯನ್ನು ಮುಂದಿಟ್ಟು ಚಾರ್ಮಾಡಿಯ ಮಸಣಗುಡ್ಡೆ ಪರಿಸರದ ಜನರು ಚುನಾವಣೆ ಬಹಿಷ್ಕರಿಸಲು ನಿಧಾ೯ರ

Suddi Udaya

ಚಾಮಾ೯ಡಿ: ರಸ್ತೆ ಹಾಗೂ ಕುಡಿಯುವ ನೀರಿನ ಬೇಡಿಕೆಯನ್ನು ಮುಂದಿಟ್ಟುಕೊಂಡು ಇದೀಗ ಚಾರ್ಮಾಡಿಯ ಮಸಣಗುಡ್ಡೆ ಪರಿಸರದ ಜನರು ಚುನಾವಣೆ ಬಹಿಷ್ಕರಿಸುವುದಾಗಿ ಮುಂದಾಗಿದ್ದಾರೆ.
ಚಾರ್ಮಾಡಿಯ ಮಸಣ ಗುಡ್ಡೆ, ಗಾಂದೀನಗರ ಪರಿಸರದಲ್ಲಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ, ಕುಡಿಯಲು ನೀರೂ ಇಲ್ಲವಾಗಿದೆ. ಈ ಬಗ್ಗೆ ಹಲವಾರು ಬಾರಿ ಜನಪ್ರತಿನಿಧಿಗಳ ಗಮನ ಸೆಳೆದರೂ ಇನ್ನೂ ರಸ್ತೆ ದುರಸ್ತಿಯಾಗಿಲ್ಲ, ನೀರಿನ ವ್ಯವಸ್ಥೆಯನ್ನು ಸರಿಪಡಿಸಲಾಗಿಲ್ಲ, ಈ ಬಗ್ಗೆ ಭರವಸೆಗಳನ್ನು ಕೇಳಿ ಸಾಕಾಗಿದೆ ಆದ್ದರಿಂದ ಈ ಬಾರಿಯ ಚಿನಾವಣೆಯಲ್ಲಿ ಮತದಾನದಲ್ಲಿ ಭಾಗವಹಿಸುವುದಿಲ್ಲ ಎಂದು ಈ ಪ್ರದೇಶದ ಜನರು ಪ್ರಕಟಿಸಿದ್ದಾರೆ. ನಮಗೆ ರಸ್ತೆ ಮತ್ತು ನೀರಿನ ವ್ಯವಸ್ಥೆಯನ್ನು ಮಾಡಿಕೊಟ್ಟರೆ ಮಾತ್ರ ರಾಜಕಾರಣಿಗಳು ಮತ ಕೇಳಲು ಇಲ್ಲಿಗೆ ಬಂದರೆ ಸಾಕು ಎಂಬುದು ಇಲ್ಲಿನ ಜನರ

ಒತ್ತಾಯವಾಗಿದೆ. ಈ ಪ್ರದೇಶದಲ್ಲಿ ಸುಮಾರು 100ರಷ್ಟು ಮನೆಗಳಿವೆ ಪ್ರತಿಬೇಸಗೆಯಲ್ಲಿಯೂ ಕುಡಿಯುವ ನೀರಿಗಾಗಿ ಪರದಾಡಬೇಕಾದ ಸ್ಥಿತಿ ಇಲ್ಲಿನ ನಿವಾಸಿಗಳದ್ದಾಗಿದೆ.ಜನರು ತಾವು ಚುನಾವಣಾ ಬಹಿಷ್ಕಾರ ಮಾಡುವುದಾಗಿ ಪ್ರಕಟಿಸಿದ್ದು ರಾಜಕೀಯ ಮುಖಂಡರುಗಳು ಇದಕ್ಕೆ ಯಾವ ರೀತಿ ಸ್ಪಂದಿಸುವರು ಕಾದು ನೋಡಬೇಕಾಗಿದೆ

Leave a Comment

error: Content is protected !!