24.7 C
ಪುತ್ತೂರು, ಬೆಳ್ತಂಗಡಿ
May 17, 2025
ತಾಲೂಕು ಸುದ್ದಿ

ಉಜಿರೆಯಲ್ಲಿ “ಖಿಯಾದ” ಎಸ್.ಎಸ್. ಎಫ್ ರಾಜ್ಯ ಪ್ರತಿನಿಧಿ ಸಮಾವೇಶ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್.ಎಸ್.ಎಫ್) ಇದರ ಗ್ರಾಂಡ್ ಪ್ರತಿನಿಧಿ ಸಮಾವೇಶ
ಮಾ. 18-19 ರಂದು ಕಾಶಿಬೆಟ್ಟು ಮಲ್‌ಜ‌ಅ ಕ್ಯಾಂಪಸ್ ನಲ್ಲಿ (ಉಜಿರೆ ಹಳೆಪೇಟೆ ಸಮೀಪ) ನಡೆಯಲಿದೆ ಎಂದು ಸಂಘಟನೆಯ ನಾಯಕರು ಮಾ. 15 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಯುನಿಟ್, ಸೆಕ್ಟರ್, ಡಿವಿಷನ್, ಜಿಲ್ಲೆಗಳಿಗೆ ನಾಯಕರಾಗಿ ಆಯ್ಕೆಯಾದ ಎರಡು ಸಾವಿರ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ರಾಜ್ಯ ಮತ್ತು ಹೊರರಾಜ್ಯದ ಖ್ಯಾತ ತರಬೇತುದಾರರಿಂದ ವಿಶೇಷ ತರಬೇತಿ ನಡೆಯಲಿದೆ. ಮುಂದಿನ ಎರಡು ವರ್ಷಕ್ಕೆ ಸಂಘಟನೆ ಕೈಗೊಳ್ಳಬೇಕಾದ ಕಾರ್ಯಚಟುವಟಿಕೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳ ತರಗತಿಗಳು ಈ ಸಮಾವೇಶದಲ್ಲಿ ನಡೆಯಲಿದೆ.
ರಾಜ್ಯ SSF ಇದರ ವಾರ್ಷಿಕ ಕೌನ್ಸಿಲ್ ಸಭೆ ಕೂಡ ನಡೆದು ರಾಜ್ಯ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ. ಮಾ.19 ರಂದು ಸಮಾರೋಪ ಸಮಾರಂಭದಲ್ಲಿ ನವ ನಾಯಕತ್ವದ ಘೋಷಣೆ ನಡೆಯಲಿದೆ.
ಎಸ್‌ಎಮ್‌ಎ ರಾಜ್ಯಾಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಧ್ವಜಾರೋಹಣ ನಡೆಸಲಿದ್ದಾರೆ. ಉದ್ಘಾಟನೆ ಯನ್ನು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷ ಡಾ.‌ ಕಾವಳಕಟ್ಟೆ ಹಝ್ರತ್ ನೆರವೇರಿಸಲಿದ್ದಾರೆ.
ಕರ್ನಾಟಕ ರಾಜ್ಯ ಉಲಮಾ ಒಕ್ಕೂಟದ ಅಧ್ಯಕ್ಷ, ಖಾಝಿ‌ ಮಾಣಿ ಉಸ್ತಾದ್ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ ಲೆತೀಫ್ ಸ‌ಅದಿ ಅಧ್ಯಕ್ಷತೆ ವಹಿಸಲಿದ್ದಾರೆ.

ತಾಲೂಕಿನ ಎಲ್ಲಾ ಸಯ್ಯಿದರುಗಳು, ಸುನ್ನೀ ಸಂಘ ಕುಟುಂಬದ ಸಂಘಟನೆಗಳಾದ ಕರ್ನಾಟಕ ಸುನ್ನೀ ವಿದ್ಯಾರ್ಥಿ ಸಂಘಟನೆ(SBS), ಸುನ್ನೀ ಯುವಜನ ಸಂಘ(SYS), ಕರ್ನಾಟಕ ಮುಸ್ಲಿಂ ಜಮಾಅತ್ ( KMJ), ಸುನ್ನೀ ಮೆನೇಜ್‌ಮೆಂಟ್ ಅಸೋಸಿಯೇಷನ್ ( SMA), ಸುನ್ನೀ ಜಂ ಇಯ್ಯತುಲ್ ಮುಅಲ್ಲಿಮೀನ್ ( SJM), ಸುನ್ನೀ ಜಂಇಯ್ಯತುಲ್ ಉಲಮಾ (SJU) ಮೊದಲಾದ ಸಂಘಟನೆಗಳ ನಾಯಕರುಗಳು ಭಾಗವಹಿಸಲಿದ್ದಾರೆ.

ಮಾ. 19 ರಂದು ಸಂಜೆ 4.00 ಕ್ಕೆ ಹಳೆಪೇಟೆಯಿಂದ ಉಜಿರೆ ಬೆಳಾಲು ತಿರುವು ರಸ್ತೆವರೆಗೆ ಕಾರ್ಯಕರ್ತರ ಕಾಲ್ನಡಿಗೆ ಜಾಥಾ ಏರ್ಪಡಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ “ಖಿಯಾದ” ರಾಜ್ಯ ಪ್ರತಿನಿಧಿ‌ ಅಮೀರ್ ಮುಸ್ತಫಾ ನ‌ಈಮಿ, ರಾಜ್ಯ ಆತಿಥೇಯ “ಖಿಯಾದ ಟೀಮ್ ಅನ್ಸಾರಿ”, ಸ್ವಾಗತ ಸಮಿತಿ ಚೇರ್ಮನ್ ಸಲೀಂ ಕನ್ಯಾಡಿ, ಕೋಶಾಧಿಕಾರಿ ಅಬೂಬಕ್ಕರ್ ಮಲೆಬೆಟ್ಟು, ಸಂಘಟಕರುಗಳಾದ ಸಾದಿಕ್ ಮಾಸ್ಟರ್ ಮಲೆಬೆಟ್ಟು, ಅಶ್ರಫ್ ಆಲಿಕುಂಞಿ ಮುಂಡಾಜೆ, ಎಂ.ಎ ಕಾಸಿಂ ಮುಸ್ಲಿಯಾರ್ ಮಾಚಾರು ಉಪಸ್ಥಿತರಿದ್ದರು.

Related posts

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ನೂತನ ವ್ಯವಸ್ಥಾಪನಾ ಸಮಿತಿ ರಚನೆ: 3ನೇ ಬಾರಿ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಶಬರಾಯ ಆಯ್ಕೆ

Suddi Udaya

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ಭಜನಾ ಮಂಡಳಿ ಭಜನಾ ಸಪ್ತಾಹದ ಧಾರ್ಮಿಕ ಸಭೆ

Suddi Udaya

ಬೆಳ್ತಂಗಡಿ ತರಬೇತಿ ಕೇಂದ್ರದ ವಾರ್ಷಿಕ ವರದಿ ಬಿಡುಗಡೆ

Suddi Udaya

ಧರ್ಮಸ್ಥಳವನ್ನು ಏಕ ಬಳಕೆಯ ಪ್ಲಾಸ್ಟಿಕ್ ಮುಕ್ತ ಗ್ರಾಮವೆಂದು ಸಚಿವ ಈಶ್ವರ ಖಂಡ್ರೆಯವರಿಂದ ಅಧಿಕೃತ ಘೋಷಣೆ

Suddi Udaya

ಓಡಿಲ್ನಾಳ ಸ.ಉ.ಪ್ರಾ. ಶಾಲಾ ವಿದ್ಯಾರ್ಥಿ ಮಂತ್ರಿಮಂಡಲ ರಚನೆ

Suddi Udaya

ಧರ್ಮಸ್ಥಳ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಅಯೋಧ್ಯೆಯ ಶ್ರೀ ರಾಮ ಮಂದಿರದ ಉದ್ಘಾಟನೆಯ ಆಹ್ವಾನ ಪತ್ರಿಕೆ

Suddi Udaya
error: Content is protected !!