September 6, 2026
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಡಿ. 7 :ಪದ್ಮುಂಜದಲ್ಲಿ ಮ್ಯಾರಥಾನ್ ಯೋಗ ತರಬೇತಿ ಶಿಬಿರ

ಪದ್ಮುಂಜ: ಪ್ರಾಥಮಿಕ ಕೃಷಿ ಉತ್ಪನ್ನ ಸಹಕಾರಿ ಸಂಘ ಪದ್ಮುಂಜ ಇದರ ವಠಾರದಲ್ಲಿ ಆವಿಷ್ಕಾರ ಯೋಗ ಮಂಗಳೂರು ಹಾಗೂ ಸಹ ಸಂಘಟನೆಗಳ ಸಹಯೋಗದಲ್ಲಿ 12 ಗಂಟೆಗಳ (ತಲಾ 1.30 ಗಂಟೆಯ 8 ಬ್ಯಾಚ್‌ನಲ್ಲಿ) ಮ್ಯಾರಥಾನ್ ಯೋಗ ತರಬೇತಿ ಶಿಬಿರವು ಡಿ. 7, ಶನಿವಾರ ಬೆಳಿಗ್ಗೆ, 6 ರಿಂದ ಸಂಜೆ 7 ಗಂಟೆಯ ವರೆಗೆ ನಡೆಯಲಿದೆ.

ಯೋಗ ಚಿಕಿತ್ಸಕ ವಿಶ್ವದಾಖಲೆಯ ಖ್ಯಾತಿಯ ಯೋಗ ತರಬೇತುದಾರ ಕುಶಾಲಪ್ಪ ಗೌಡ ನೆಕ್ಕರಜೆ ಇವರು ನಿರಂತರ 12 ಗಂಟೆಗಳಲ್ಲಿ ತರಬೇತಿ ನೀಡಲಿರುವರು. ತಲಾ 1 2 ಗಂಟೆಗಳ ತರಬೇತಿಗೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವಿರುವುದು. ತರಬೇತಿಯ ಅವಧಿಯಲ್ಲಿ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಆರೋಗ್ಯಕ್ಕೆ ಪೂರಕವಾದ ಯೋಗಾಸನ, ಕ್ರಿಯೆ, ಪ್ರಾಣಾಯಾಮ, ವಿಶ್ರಾಂತಿ ಹಾಗೂ ಧ್ಯಾನದ ತರಬೇತಿ ನೀಡಲಾಗುವುದು. ತರಬೇತಿಗೆ ಭಾಗವಹಿಸುವ ಎಲ್ಲರಿಗೂ ಉಚಿತವಾಗಿ ಯೋಗ ಕ್ಯಾಲೆಂಡರ್ ಶೈಕ್ಷಣಿಕ ಸಾಮಾಗ್ರಿ, ಪ್ರಮಾಣ ಪತ್ರ ಹಾಗೂ ನಿತ್ಯ ಅಭ್ಯಾಸಕ್ಕೆ ಶಿಬಿರದಲ್ಲಿ ತರಬೇತಿ ನೀಡಿದ ಯೋಗ ವೀಡಿಯೋ ಲಿಂಕ್ ನೀಡಲಾಗುವುದು. ಶಿಬಿರದ ಸಂದರ್ಭದಲ್ಲಿ ಅಷ್ಟಾಂಗ ಯೋಗ ಸಿದ್ಧಾಂತ ತರಗತಿ ಹಾಗೂ ಆರೋಗ್ಯ ಸಮಸ್ಯೆಗೆ ಚಿಕಿತ್ಸಾತ್ಮಕ ಯೋಗದ ಮಾರ್ಗದರ್ಶನ ನೀಡಲಾಗುವುದು.

13 ಸಂಘಟನೆಗಳು ಬಾಗಿ : ಯೋಗ ವಿದ್ಯೆಯನ್ನು ಗ್ರಾಮೀಣ ಪ್ರದೇಶದ ಜನರಿಗೆ ತಲುಪಿಸಲು ಸಾಮಾಜಿಕ ಚಟುವಟಿಕೆಯು 13 ಸಂಘಟನೆಗಳು ಎಂಟು ಅವಧಿಯ ಪ್ರಾಯೋಜಕರಾಗಿ ಹಾಗೂ ಸಂಘಟಕರಾಗಿ ಭಾಗಿಯಾಗುತ್ತಿದೆ. ಬೆಳಿಗ್ಗೆ 6 ರಿಂದ 8 ಮೊದಲನೆ ಅವಧಿ ವಿಶ್ವ ಹಿಂದು ಹಾಗೂ ಸಂಘಟಕರಾಗಿ ಭಾಗಿಯಾಗುತ್ತಿದೆ. ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗದಳ ಪದ್ಮುಂಜ ಘಟಕ, ಬೆಳಿಗ್ಗೆ 8 ರಿಂದ 9.30 ರ 2ನೇ ಅವಧಿಯನ್ನು ಪದ್ಮುಂಜ ಹಾಲು ಉತ್ಪಾದಕರ ಸಹಕಾರಿ ಸಂಘ 3ನೇ ಅವಧಿ ಬೆಳಿಗ್ಗೆ 9.30 ರಿಂದ 11 ಜ್ಞಾನ ಜ್ಯೋತಿ ಯುವಕ ಮಂಡಲ ಅಡೆಂಜ, 4ನೇ ಅವಧಿ ಬೆಳಿಗ್ಗೆ 11 ರಿಂದ 12.30 ಕ್ಕೆ ನಡೆಯುವ ಬ್ಯಾಚನ್ನು ಟೀಮ್ ನವಕೇಸರಿ ಮುಲೆಂಗಲ್ಲು ಹಾಗೂ ಯುವ ವೇದಿಕೆ ಮುಗೇರಡ್ಕ ಮೊಗ್ರು, ಮಧ್ಯಾಹ್ನ 12.30 ರಿಂದ 2ರ ಐದನೇ ಅವಧಿಯನ್ನು ಶ್ರೀ ಚಾಮುಂಡೇಶ್ವರಿ ಯುವಕ ಮಂಡಲ(ರಿ.) ಮುಂಡೂರು ಆರನೇ ಅವಧಿ ಮಹಿಳೆಯರಿಗೆ ವಿಶೇಷ ಅವಧಿ ಮಧ್ಯಾಹ್ನ 2 ರಿಂದ 3.30ಕ್ಕೆ ಪಾಂಚಜನ್ಯ ಗೆಳೆಯರ ಬಳಗ, ವಿಷ್ಣುನಗರ ಪಾಂಜಳ, ಶ್ರೀ ಚಕ್ರ ಗೆಳೆಯರ ಬಳಗ (ರಿ) ಬಂದಾರು ನೇತೃತ್ವದಲ್ಲಿ ನಡೆಯಲಿದೆ. ಏಳನೇ ಅವಧಿಯು ಸಂಜೆ 3.30ರಿಂದ 5ರವರೆಗೆ ಜೈ ಶ್ರೀರಾಮ್ ಗೆಳೆಯರ ಬಳಗ, ಶ್ರೀ ರಾಮನಗರ ಬಂದಾರು ಹಾಗೂ ಶ್ರೀ ವಿಷ್ಣು ಅಸೋಸಿಯೇಟ್ಸ್ ಇದರ ಸಹಯೋಗದಲ್ಲಿ ಕೊನೆಯ 8ನೇ ಅವಧಿ ಸಂಜೆ 5.00 ರಿಂದ 6.30ರ ವರೆಗೆ ಶ್ರೀ ಸದಾಶಿವ ಭಜನಾ ಮಂಡಳಿ (ರಿ) ಕುರಾಯ ಹಾಗೂ ಮೂವರು ದೈವಗಳ ದೈವಸ್ಥಾನ ಮುಗೇರಡ್ಕ, ಶ್ರೀ ದುರ್ಗಾನುಗ್ರಹ ಭಜನಾ ಮಂದಿರ ಮುಗೇರಡ್ಕ, ಮೊಗ್ರು ಇದರ ನೇತೃತ್ವದಲ್ಲಿ ನಡೆಯಲಿದೆ.

ಗಣ್ಯರ ಉಪಸ್ಥಿತಿಯಲ್ಲಿ ಸಂಜೆ 6.30ಕ್ಕೆ ಸಮಾರೋಪ ನಡೆಯಲಿದೆ. ಸರಕಾರಿ ಶಾಲಾಭಿವೃದ್ಧಿಗೆ ದೇಣಿಗೆಗಾಗಿ ಯೋಗ ಶಿಬಿರ ಶಿಬಿರಾರ್ಥಿಗಳಿಂದ ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್(ರಿ) ಮೊಗ್ರು ಇದರ ವಿದ್ಯಾನಿಧಿಗೆ ದೇಣಿಗೆಯನ್ನು ಸ್ವೀಕರಿಸಲಾಗುವುದು. ಸಂಗ್ರಹವಾದ ಮೊತ್ತ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೊಗ್ರು ಇದರ ಅಭಿವೃದ್ಧಿಗೆ ಬಳಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ 9845588740, 9591130105 ಸಂಪರ್ಕಿಸಿ ಹಾಗೂ https://forms.gle/waVSEt2wew9yZkCk9 ಈ ಲಿಂಕ್ ನ ಮೂಲಕ ನೊಂದಯಿಸಿಕೊಳ್ಳಬಹುದು.

Related posts

2023-24ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಬಳಂಜ ಪ್ರೌಢ ಶಾಲೆಯ ವಿದ್ಯಾರ್ಥಿನಿ ಶರಣ್ಯರವರಿಗೆ ಸರ್ಕಾರದ ವತಿಯಿಂದ ಲ್ಯಾಪ್‌ಟಾಪ್ ವಿತರಣೆ

Suddi Udaya

ಮಾ.8 ರಿಂದ 11 ರವರೆಗೆ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ವಿದ್ವತ್ ಕಾಲೇಜಿನಿಂದ ಪ್ರತಿಭಾನ್ವೇಷಣೆ ಪರೀಕ್ಷೆ– 2026

Suddi Udaya

ಕರಾವಳಿ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಕರಾವಳಿ ಅಭಿವೃದ್ಧಿ ಮಂಡಳಿ ರಚಿಸಿ ಬಜೆಟ್‌ನಲ್ಲಿ ರೂ.500 ಕೋಟಿ ಅನುದಾನ ಮೀಸಲಿಡಿ: ಬೆಳ್ತಂಗಡಿ ಪ್ರತಿಕಾಗೋಷ್ಠಿಯಲ್ಲಿ ಎಂಎಲ್ಸಿ ಐವನ್ ಡಿ’ಸೋಜ

Suddi Udaya

ದೇವರ ನಾಡು ಕೇರಳದಲ್ಲಿ ನಡೆದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹರೀಶ್ ವೈ ಚಂದ್ರಮ ನೇತೃತ್ವದ ಬಳಂಜದ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರು

Suddi Udaya

ಎಸ್‌ಡಿಎಂ ಪಾಲಿಟೆಕ್ನಿಕ್ ಅಂತಿಮ ವರ್ಷದ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಉಜಿರೆ ಪಂಚಾಯತ್‌ನ ಎಂಆರ್‌ಎಫ್ ಘಟಕಕ್ಕೆ ಭೇಟಿ

Suddi Udaya

ಸೌತಡ್ಕ ಮಹಾಗಣಪತಿ ಕ್ಷೇತ್ರದಲ್ಲಿ ಶಾಸಕ ಹರೀಶ್ ಪೂಂಜ ರವರ ಉಪಸ್ಥಿತಿಯಲ್ಲಿ 120 ಅಗೇಲು ರಂಗಪೂಜೆ

Suddi Udaya
error: Content is protected !!