ಬೆಳ್ತಂಗಡಿ: ಬೆಳ್ತಂಗಡಿ ನಗರದ ಮುಖ್ಯ ಭಾಗದಲ್ಲಿರುವ ಲೋಕೋಪಯೋಗಿ ಇಲಾಖೆಯ ವತಿಯಿಂದ ನಿರ್ಮಾಣಗೊಂಡಿರುವ ನೂತನ ನಿರೀಕ್ಷಣಾ ಮಂದಿರದ ಲೋಕಾರ್ಪಣೆಯು ಮಾ28 ರಂದು ನಡೆಯಲಿದೆ.
ನೂತನ ನಿರೀಕ್ಷಣಾ ಮಂದಿರವನ್ನು ಜಿಲ್ಲಾ ಉಸ್ತುವಾರಿ ಸಚಿವ,ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಖಾತೆ ಸಚಿವ ಸುನೀಲ್ ಕುಮಾರ್ ಲೋಕಾರ್ಪಣೆಗೊಳಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ಸದಸ್ಯರಾದ ನಳಿನ್ ಕುಮಾರ್ ಕಟೀಲು,ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಶಾಸಕರಾದ ಕೆ.ಹರೀಶ್ ಕುಮಾರ್,ಪ್ರತಾಪಸಿಂಹ ನಾಯಕ್, ಪಟ್ಟಣ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವ ಹಾಗೂ ಇತರ ಅಧಿಕಾರಿ ವರ್ಗದವರು ಭಾಗವಹಿಸಲಿದ್ದಾರೆ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಇಗಾಗಲೇ ನಿರೀಕ್ಷಣಾ ಮಂದಿರದ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು ಎರಡನೇ ಹಂತದ ಕಾಮಗಾರಿ ಪ್ರಗತಿಯಲ್ಲಿದೆ.
ಪ್ರವಾಸಿ ಮಂದಿರದಲ್ಲಿ ಮೀಟಿಂಗ್ ಹಾಲ್, ಡೈನಿಂಗ್ ಹಾಲ್, ಶಾಸಕರಿಗೆ ಕೊಠಡಿ, 2 ವಿವಿಐಪಿ ಕೊಠಡಿ, 8 ವಿಐಪಿ ರೂಮ್ ಗಳು,ಆಡಳಿತ ಕಚೇರಿ,7 ಸಿಂಗಲ್ ರೂಮ್, ನಿರ್ವಾಕರಿಗೆ ಮನೆ,ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ನೀರಿನ ಸೌಕರ್ಯ,ಶೌಚಾಲಯ ಸೇರಿದಂತೆ ವಿವಿದ ಸೌಲಭ್ಯಗಳು ಲಭ್ಯವಿದೆ ಎಂದು ತಿಳಿಸಿದರು.