April 2, 2025
ಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ಶ್ರೀ ಪದ್ಮನಾಭಸ್ವಾಮಿ ಅಕ್ಷರ ದೇಶಿ ಸಮುದಾಯ ಸಂಘ ಅಧ್ಯಕ್ಷರಾಗಿ ಶರತ್ ಕೃಷ್ಣ ಪಡ್ವೆಟ್ನಾಯ

ಕೊಕ್ಕಡ: ತಿರುವನಂತಪುರ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಪೂಜಾ ಹಕ್ಕನ್ನು ಹೊಂದಿರುವ ಶಿವಳ್ಳಿ ಬ್ರಾಹ್ಮಣ ಪಂಗಡಕ್ಕೆ ಸೇರಿದ ಶಬರಾಯ, ಯಡಪಡಿತ್ತಾಯ, ಉಪ್ಪಾರ್ಣ, ಮುಡಂಬಳಿತ್ತಾಯ, ಪಡ್ವೆಟ್ನಾಯ, ಅರಿಪಡಿತ್ತಾಯ, ತೋಡ್ತಿಲ್ಲಾಯ, ಅರಿಮಣಿತ್ತಾಯ ಈ ಕುಟುಂಬದ ಸದಸ್ಯರ ಸಭೆಯು ಇತ್ತೀಚೆಗೆ ಕೊಕ್ಕಡ ಸುಬ್ರಹ್ಮಣ್ಯ ಶಬರಾಯರ ವಾಸುಕೀ ನಿಲಯದಲ್ಲಿ ಜರುಗಿತು.
ದೇವಳದ ಪೂಜಾ ಕರ್ತವ್ಯವನ್ನು ಸುಲಭವಾಗಿ ನಿರ್ವಹಿಸಲು ಅನುಕೂಲವಾಗುವಂತೆ ಶ್ರೀ ಪದ್ಮನಾಭ ಸ್ವಾಮಿ ಅಕ್ಷರದೇಶಿ ಸಮುದಾಯ ಸಂಘ ಎನ್ನುವ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾದ ಶರತ್‌ಕೃಷ್ಣ ಪಡ್ವೆಟ್ನಾಯ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಸೌತಡ್ಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ, ಕಾರ್ಯದರ್ಶಿ ಬೊಣ್ಯಸಾಗು ಸತೀಶ್ ಯಡಪಡಿತ್ತಾಯ, ಸಹಕಾರ್ಯದರ್ಶಿಯಾಗಿ ರವಿಪ್ರಸಾದ್ ಯಡಪಡಿತ್ತಾಯ, ಕೋಶಾಧಿಕಾರಿಯಾಗಿ ಲಕ್ಷ್ಮೀ ನಾರಾಯಣ ಉಪ್ಪಾರ್ಣ, ಮಾರ್ಗದರ್ಶಕರಾಗಿ ಸುರೇಶ ಶಬರಾಯ ಹುರುಳಿಮಜಲು, ಸುಬ್ರಹ್ಮಣ್ಯ ಶಬರಾಯ ಮರುವಂತಿಲ, ಪ್ರವೀಣ್ ಯಡಪಡಿತ್ತಾಯ, ಸದಸ್ಯರಾಗಿ ಸುಬ್ರಹ್ಮಣ್ಯ ಶಬರಾಯ ಗುಂಡಿಮಾರು, ಪ್ರಶಾಂತ್ ಶಬರಾಯ ಗುಂಡಿಮಾರು, ವಿಷ್ಣುಪ್ರಸಾದ್ ಶಬರಾಯ ಪುತ್ಯೆ, ಸುಕುಮಾರ್ ಯಡಪಡಿತ್ತಾಯ ಪಾಳಾಲೆ, ಲಕ್ಷ್ಮೀನಾರಾಯಣ ಶಬರಾಯ ಮುಂಡೂರು, ಡೆಂಜ ವೆಂಕಟರಮಣ ಉಪ್ಪಾರ್ಣ, ರವಿ ಶಬರಾಯ ಕನ್ಯಾಡಿ, ಪದ್ಮನಾಭ ಶಬರಾಯ ಪಟ್ರಮೆ, ಸತ್ಯನಾರಾಯಣ ತೋಡ್ತಿಲ್ಲಾಯ ಕೊಕ್ಕಡ, ಮಂಡೆಗುಂಡಿ, ರಾಧಾಕೃಷ್ಣ ಯಡಪಡಿತ್ತಾಯ, ಸೀತಾರಾಮ ಯಡಪಡಿತ್ತಾಯ ಆಯ್ಕೆಯಾದರು. ನೀಲೇಶ್ವರ ಆಲಂಬಾಡಿ ವಾಸುದೇವನ್ ಪಟ್ಟೇರಿ ತಂತ್ರಿಗಳು ಅಧ್ಯಕ್ಷತೆ ವಹಿಸಿದ್ದರು.

Related posts

ಜಿನ ಭಜನೆ ಸ್ಪರ್ಧೆಯಲ್ಲಿ ಉಜಿರೆಯ 4 ತಂಡಗಳು ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ. ಬಿ.ಎಸ್. ಇ) ಶಾಲೆಯಲ್ಲಿ “ಪ್ರತಿಭಾ ಸಂಗಮ” ಕಾರ್ಯಕ್ರಮ

Suddi Udaya

ಪಡ್ಪು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

Suddi Udaya

ಬಂಟ್ವಾಳದಲ್ಲಿ ಸಮರ ಸೌಗಂಧಿಕೆ ತಾಳಮದ್ದಳೆ

Suddi Udaya

ಅಳದಂಗಡಿಯಲ್ಲಿ ಬಿಜೆಪಿ ಬೃಹತ್ ಪ್ರಚಾರ ಸಭೆ: ಸಿಂಗಂ ಖ್ಯಾತಿಯ ಅಣ್ಣಾಮಲೈಯಿಂದ ಹರೀಶ್ ಪೂಂಜರ ಪರ ಮತ ಪ್ರಚಾರ

Suddi Udaya

ಪೆರಿಂಜೆ ಶ್ರೀ ಧ.ಮಂ.ಅ. ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Suddi Udaya
error: Content is protected !!