ಬೆಳ್ತಂಗಡಿ: ಈ ಬಾರಿಯ ಎಸ್.ಎಸ್.ಎಲ್.ಸಿ ಪಬ್ಲೀಕ್ ಪರೀಕ್ಷೆ ಇಂದು ಮಾ.31ರಿಂದ ಆರಂಭಗೊಂಡಿದೆ. ತಾಲೂಕಿನ 14ಪರೀಕ್ಷಾ ಕೇಂದ್ರಗಳಲ್ಲಿ ಬೆಳ್ತಂಗಡಿ ತಾಲೂಕಿನ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಸೇರಿದಂತೆ ಒಟ್ಟು 70 ಪ್ರೌಢ ಶಾಲೆಗಳಿಂದ 4215ಮಂದಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪರೀಕ್ಷೆಗೆ ಬರೆಯುತ್ತಿದ್ದಾರೆ.
ತಾಲೂಕಿನಲ್ಲಿ ಸಂತ ತೆರೇಸಾ ಅನುದಾನಿತ ಪ್ರೌಢ ಶಾಲೆ ಬೆಳ್ತಂಗಡಿ- 228ವಿದ್ಯಾರ್ಥಿಗಳು, ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಹಳೆಕೋಟೆ ಬೆಳ್ತಂಗಡಿ-542 ವಿದ್ಯಾರ್ಥಿಗಳು, ಎಸ್.ಡಿ.ಎಂ ಸೆಕೆಂಡರಿ ಶಾಲೆ ಉಜಿರೆ-263 , ಎಸ್.ಡಿ.ಎಂ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಉಜಿರೆ-213 ಮುಂಡಾಜೆ ಅನುದಾನಿತ ಪ್ರೌಢ ಶಾಲೆ-407 ಸ.ಪ.ಪೂ.ಕಾಲೇಜು ಪುಂಜಾಲಕಟ್ಟೆ-283, ಸೇ.ಹಾ.ಕ.ಮಾ. ಪ್ರೌಢ ಶಾಲೆ ಮಡಂತ್ಯಾರು- 240 ಸರಕಾರಿ ಪದವಿ ಪೂರ್ವ ಕಾಲೇಜು ವೇಣೂರು-518 ಸ.ಪ.ಪೂ.ಕಾಲೇಜು ಅಳದಂಗಡಿ-331, ಸ.ಪ್ರೌ ಕಣಿಯೂರು – 267 ಒಟ್ಟು-4215 ವಿದ್ಯಾರ್ಥಿಳು ಪರೀಕ್ಷೆ ಬರೆಯುತ್ತಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಹಾಗೂ ತಾಲೂಕಿನ ನೋಡೆಲ್ ಅಧಿಕಾರಿಯಾಗಿ ಶಂಭುಶಂಕರ್ ಅವರ ಉಸ್ತುವಾರಿಯಲ್ಲಿ ಪರೀಕ್ಷೆ ಯಶಸ್ವಿಯಾಗಿ ನಡೆಯುತ್ತಿದೆ.
next post