22.2 C
ಪುತ್ತೂರು, ಬೆಳ್ತಂಗಡಿ
November 24, 2024
Uncategorized

ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಷನ್ ಉಜಿರೆ ವಲಯ ಸಮಿತಿ ಮಹಾಸಭೆಹಾಗೂ ಪದಾಧಿಕಾರಿಗಳ ಆಯ್ಕೆ

ನೂತನ ಅಧ್ಯಕ್ಷರಾಗಿ ಶ್ರೀಮತಿ ರೂಪ ಜಗದೀಶ್ ಧರ್ಮಸ್ಥಳ, ಕಾರ್ಯದರ್ಶಿಯಾಗಿ ಝೀನತ್ ಉಜಿರೆ ಆಯ್ಕೆ

ಉಜಿರೆ: ಉಜಿರೆ ವಲಯ ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಷನ್ ಉಜಿರೆ ವಲಯ ಸಮಿತಿಯ ಮಹಾಸಭೆಯು ಮಾ.೨೮ರಂದು ಶಾರದಾ ಮಂಟಪದಲ್ಲಿ ವಲಯದ ಅಧ್ಯಕ್ಷರಾದ
ಶ್ರೀಮತಿ ವೇದಾವತಿ ಜನಾರ್ದನ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕುಶಾಲಪ್ಪ ಗೌಡ ಇವರು ಸರ್ಕಾರದಿಂದ ಸಿಗುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಇದರ ಪ್ರಯೋಜನ ಪಡೆಯುವಂತೆ ವಿನಂತಿಸಿದರು. ಬೆಳ್ತಂಗಡಿ ತಾಲೂಕಿನಲ್ಲಿ ಹಲವು ಜನರಿಗೆ ಉಚಿತವಾಗಿ ಮೆಷೀನ್ ಹಾಗೂ ಆರ್ಥಿಕ ಧನ ಸಹಾಯ ದೊರೆತಿರುವುದು ನಮ್ಮ ಟೈಲರ್ ಸಂಘಟನೆಯಿಂದ ಎಂದು ತಿಳಿಸಿದರು..
ಕ್ಷೇತ್ರ ಸಮಿತಿ ಕಾರ್ಯದರ್ಶಿ ನಾಗೇಶ್ ಉಜಿರೆ, ಕ್ಷೇತ್ರ ಕೋಶಾಧಿಕಾರಿ ಜಯಂತಿ ಚಿದಾನಂದ್, ವಲಯದ ಕಾರ್ಯದರ್ಶಿ ರೂಪ ಜಗದೀಶ್,
ವಲಯದ ಕೋಶಾಧಿಕಾರಿ ಶುಭಲತ ಕನ್ಯಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಭೆಯಲ್ಲಿ ೩೭ ಜನರಿಗೆ ಗುರುತಿನ ಕಾರ್ಡ್ ವಿತರಣೆ ಮಾಡಲಾಯಿತು
ಹೊಸ ಸದಸ್ಯರ ನೋಂದಾವಣೆ ಮಾಡಲಾಯಿತು.
ಈ ಸಂದರ್ಭ ಮುಂದಿನ ಎರಡು ವರ್ಷದ ಅವಧಿಗೆ ನೂತನ ಪದಾಧಿಕಾರಿ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಶ್ರೀಮತಿ ರೂಪ ಜಗದೀಶ್ ಧರ್ಮಸ್ಥಳ, ಕಾರ್ಯದರ್ಶಿಯಾಗಿ ಝೀನತ್ ಉಜಿರೆ ಆಯ್ಕೆಯಾದರು.
ಜೊತೆ ಕಾರ್ಯದರ್ಶಿಯಾಗಿ ಭಾಗ್ಯಜ್ಯೋತಿ, ಕೋಶಾಧಿಕಾರಿಯಾಗಿ ಬಾಲಕೃಷ್ಣ, ಕ್ಷೇತ್ರ ಸಮಿತಿಗೆ ವಿನೋದ, ಜಯ ಚಿದಾನಂದ್, ವಿನುತ, ವೇದಾವತಿ ಜನಾರ್ಧನ, ನಾಗೇಶ್ ಉಜಿರೆ, ಉಪಾಧ್ಯಕ್ಷರಾಗಿ ವಿಠಲ, ಸವಿತಾ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಮಮತಾ ಕಲ್ಮಂಜ, ವೇದಾವತಿ ಕನ್ಯಾಡಿ, ನವೀನ, ವಾಣಿ, ಹರಿಣಾಕ್ಷಿ ಇವರನ್ನು ಆಯ್ಕೆ ಮಾಡಲಾಯಿತು. ಈ ಸಭೆಯಲ್ಲಿ ಝೀನತ್ ಉಜಿರೆ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಭಾಗ್ಯಜ್ಯೋತಿ ಧನ್ಯವಾದವಿತ್ತರು.

Related posts

ಬಿ.ಎಸ್.ಎಫ್ ನಲ್ಲಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಲಾಯಿಲದ ಗಣೇಶ್ ಬಿ.ಎಲ್ ರವರಿಗೆ ಬೆಳ್ತಂಗಡಿಯಲ್ಲಿ ಭವ್ಯ ಸ್ವಾಗತ

Suddi Udaya

ಹಲ್ಲೆಗೆ ಯತ್ನ: ಸೌಜನ್ಯ ತಾಯಿ ಕುಸುಮಾವತಿರವರಿಂದ ಬೆಳ್ತಂಗಡಿ ಠಾಣೆಗೆ ದೂರು

Suddi Udaya

ನಡ ಪ್ರೌಢಶಾಲೆಯಲ್ಲಿ ಮಕ್ಕಳ ಹಕ್ಕುಗಳ ಸಂಘ ಉದ್ಘಾಟನೆ

Suddi Udaya

ಬೆಳ್ತಂಗಡಿಯಲ್ಲಿ 500 ಎಕ್ರೆ ಯಾಂತ್ರಿಕೃತ ಯಂತ್ರಶ್ರೀ ನಾಟಿಗೆ ಚಾಲನೆ

Suddi Udaya

ಫುದುವೆಟ್ಟು : ಮರಳು ಅಡ್ಡೆ ಮೇಲೆ ಧರ್ಮಸ್ಥಳ ಪೊಲೀಸ್ ದಾಳಿ

Suddi Udaya

ನಡ -ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಬಡ ಕುಟುಂಬದ ಮನೆಯ ದುರಸ್ಥಿ ಕಾರ್ಯ

Suddi Udaya
error: Content is protected !!