25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸುಳ್ಯಗ್ರಾಹಕರ ಸೇವೆಗಾಗಿ ವೇಣೂರಿನಲ್ಲಿ 21 ನೇ ನೂತನ ಶಾಖೆಯ ಉದ್ಘಾಟನೆ

ವೇಣೂರು: ಸತತ ಮೂರು ಬಾರಿ ಕರ್ನಾಟಕ ರಾಜ್ಯದ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸುಳ್ಯದ 21 ನೇ ನೂತನ ಶಾಖೆ ವೇಣೂರಿನಲ್ಲಿ ಪ್ರಾರಂಭಗೊಂಡಿದೆ.

ವೇಣೂರು ಮಹಾವೀರನಗರದ ಮಂಜುಶ್ರೀ ಕಾಂಪ್ಲೆಕ್ಸ್ ನ ಒಂದನೇ ಮಹಡಿಯಲ್ಲಿ ನೂತನ ಸಂಸ್ಥೆ ಗ್ರಾಹಕರ ಸೇವೆಗೆ ರೆಡಿಯಾಗಿದೆ.21ನೇ ನೂತನ ಶಾಖೆಯ ಉದ್ಘಾಟನೆಯನ್ನು ಮಂಗಳೂರು ವಿ.ಜಿ.ಎಸ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಲೋಕಯ್ಯ ಗೌಡ ಉದ್ಘಾಟಿಸಿ ಶುಭಕೋರಿದರು.

ದೀಪ ಪ್ರಜ್ವಲನೆಯನ್ನು ಬೆಳ್ತಂಗಡಿ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಪಿ.ತಿಮ್ಮಪ್ಪ ಗೌಡ ಬೆಳಾಲು ನೇರವೇರಿಸಿ ಶುಭಕೋರಿದರು. ಅಧ್ಯಕ್ಷತೆಯನ್ನು ಶ್ರೀ ವೆಂಕಟರಮಣ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಸಿ ಜಯರಾಮ ವಹಿಸಿದ್ದರು.

ಗಣಕೀಕರಣದ ಉದ್ಘಾಟನೆಯನ್ನು ವೇಣೂರು ಬಳ್ಳಾಲ್ ಪ್ಯೂಯೆಲ್ ಮತ್ತು ಸರ್ವಿಸಸ್ ನ ನವೀನ್ ಚಂದ್ರ ಬಳ್ಳಾಲ್ ನೆರವೇರಿಸಿದರು.ಭದ್ರತಾ ಕೊಠಡಿಯ ಉದ್ಘಾಟನೆಯನ್ನು ಮಂಜುಶ್ರೀ ಕಾಂಪ್ಲೆಕ್ಸ್ ಮಾಲಕ ಕೆ.ಉದಯ ಕುಮಾರ್ ಕಂಬಳಿ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಮೋಹನ್ ರಾಂ ಸುಳ್ಳಿ,ನಿರ್ದೇಶಕರಾದ ಜಾಕೆ ಸದಾನಂದ,ನಿತ್ಯಾನಂದ ಮುಂಡೋಡಿ,ಎ‌.ವಿ ತೀರ್ಥರಾಮ,ಚಂದ್ರಾ ಕೋಲ್ಚಾರ್,ಕೆ.ಸಿ ನಾರಾಯಣ ಗೌಡ,ಕೆ.ಸಿ ಸದಾನಂದ,ಪಿ.ಎಸ್ ಗಂಗಾಧರ,ದಿನೇಶ್ ಮಡಪ್ಪಾಡಿ,ದಾಮೋದರ ಎನ್.ಎಸ್,ಜಯಲಲಿತಾ ಕೆ.ಎಸ್,ನಳಿನಿ ಸೂರಯ್ಯ,ಲತಾ ಎಸ್ ಮಾವಜಿ,ಹೇಮಚ್ಚಂದ್ರ ಐ.ಕೆ,ಶೈಲೇಶ್ ಅಂಬೆಕಲ್ಲು, ನವೀನ್ ಕುಮಾರ್ ಜೆ.ವಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ ಹಾಗೂ ಬ್ಯಾಂಕಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related posts

ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆ: ಬೆಳ್ತಂಗಡಿ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಕಾರ್ಕಳ ವಿಧಾನಸಭಾ ಕ್ಷೇತ್ರದ ಪಕ್ಷದ ಉಸ್ತುವಾರಿಯಾಗಿ ರಕ್ಷಿತ್ ಶಿವರಾಂ ನೇಮಕ

Suddi Udaya

ಶಿರ್ಲಾಲು ಗ್ರಾಮ ಪಂಚಾಯತ್ ನಲ್ಲಿ ಶಾಸಕ ಹರೀಶ್ ಪೂಂಜರವರ ಅಧ್ಯಕ್ಷತೆಯಲ್ಲಿ ಜನಸ್ಪಂದನ ಸಭೆ

Suddi Udaya

ಕುವೆಟ್ಟು ಜನಸ್ಪಂದನ ಸಭೆ

Suddi Udaya

ಉಜಿರೆಯಲ್ಲಿ ನಾಟ್ಯ ತರಬೇತಿ ಪುನರಾರಂಭ

Suddi Udaya

ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷರಿಂದ ಅಭಿನಂದನಾ ಸಮಾರಂಭ

Suddi Udaya
error: Content is protected !!