September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷರಿಂದ ಅಭಿನಂದನಾ ಸಮಾರಂಭ

ಗೇರುಕಟ್ಟೆ : ಕಳಿಯ ಗ್ರಾಮ ಪಂಚಾಯತ್ ವಿವಿಧ ರಂಗದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಅಭಿನಂದನಾ ಸಮಾರಂಭ ಫೆ.11 ರಂದು ಕಳಿಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜರಗಿತು.

ನಿರಂತರ ಇಪ್ಪತ್ತು ವರ್ಷಗಳ ಕಾಲ ಮೂರು ಭಾರಿ ಪಂಚಾಯತ್ ಸದಸ್ಯರಾಗಿ ಪ್ರಸ್ತುತ ಅಧ್ಯಕ್ಷರಾಗಿದ್ದು ಸಮಾಜ ಸೇವೆ ಸಲ್ಲಿಸಿದ ದಿವಾಕರ ಮತ್ತು ರೋಹಿಣಿ ದಂಪತಿಯ ನೇತೃತ್ವದಲ್ಲಿ ಸನ್ಮಾನ ಹಾಗೂ ಔತನ ಕೂಟ ನಡೆಯಿತು.

ಬೆಳ್ತಂಗಡಿ ಕೃಷಿ ಇಲಾಖೆಯ ನಿರ್ದೇಶಕರಾದ ಎಮ್. ವೀರಭದ್ರಪ್ಪ,.ಕಳಿಯ ಕೃ. ಪ.ಸ.ಸಂಘದ ಅಧ್ಯಕ್ಷ ವಸಂತ ಮಜಲು, ನಿರೂಪಣಾ ರತ್ನ ರಾಜ್ಯ ಪ್ರಶಸ್ತಿ ಪಡೆದ ಗೇರುಕಟ್ಟೆ ಸರಕಾರಿ ಫ್ರೌಡ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ಕೊಕ್ರಾಡಿ, ಅತ್ಯುತ್ತಮ ಗ್ರಾಮ ಅಡಳಿತ ಅಧಿಕಾರಿ ಪ್ರಶಸ್ತಿ ಪಡೆದ ನಿಡ್ಲೆ ಗ್ರಾಮ ಲೆಕ್ಕ ಅಧಿಕಾರಿ ಪ್ರಥ್ವಿರಾಜ್ ಶೆಟ್ಟಿ, ಬೆಳಗಾವಿ ಜಿಲ್ಲೆಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್‌, ಕಳಿಯ ಗ್ರಾಮ ಪಂಚಾಯತ್ ಪ್ರಭಾರ ಅಭಿವೃದ್ಧಿ ಅಧಿಕಾರಿ ಕುಂಞ ಕೆ., ಪಂಚಾಯತ್ ಮಾಜಿ ಸದಸ್ಯರಾದ ತುಕಾರಾಂ ಪೂಜಾರಿ ಗೇರುಕಟ್ಟೆ ವಾರಿಜ , ಕೇಶವ ಪೂಜಾರಿ ನಾಳ, ಪ್ರದೀಪ್ ಕುಮಾರ್ ಪೆರಾಜೆ, ಶರತ್ ಕುಮಾರ್ ಶೆಟ್ಟಿ, ಕಳಿಯ ಗ್ರಾಮ ಪಂಚಾಯತ್ ಸದಸ್ಯರಾದ ಸುಧಾಕರ ಮಜಲು, ವಿಜಯ ಕುಮಾರ್ ಕೆ., ಲತೀಫ್ ಪರಿಮ,ಹರೀಶ್ ಕುಮಾರ್ ಬಿ, ಉಪಾಧ್ಯಕ್ಷೆ ಇಂದಿರಾ ಬಿ ಶೆಟ್ಟಿ., ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ಸುಭಾಷಿಣಿ ಕೆ. ಮಾಜಿ ಉಪಾಧ್ಯಕ್ಷೆ ,ಹಾಲಿ ಸದಸ್ಯೆ ಕುಸುಮ ಎನ್.ಬಂಗೇರ, ಮೋಹಿನಿ, ಮರೀಟಾ ಪಿಂಟೊ, ಶ್ವೇತಾ ಶ್ರೀನಿವಾಸ್, ಪುಷ್ಫ ನಾಳ, ಶಕುಂತಲಾ, ಕಳಿಯ ಪ್ರಾಥಮಿಕ ಉಪ ಆರೋಗ್ಯ ಕೇಂದ್ರ ಸಿ.ಹೆಚ್.ಒ. ಡಾ.ನಾಗರಾಜ್, ಗೇರುಕಟ್ಟೆ ಹಾ.ಉ.ಸಂಘದ ಅಧ್ಯಕ್ಷ ಜನಾರ್ದನ ಗೌಡ ಕೆ., ಕಳಿಯ ಸಿ.ಎ.ಬ್ಯಾಂಕ್ ನಿರ್ದೇಶಕರಾದ ಶೇಖರ ನಾಯ್ಕ, ಬಾಲಕೃಷ್ಣ ಬಿರ್ಮೋಟ್ಟು, ಕಳಿಯ ಬಿಜೆಪಿ ಪಕ್ಷದ ಪ್ರಮುಖರಾದ ನಂದೀಶ್ ಶೆಟ್ಟಿ, ಕರುಣಾಕರ ಶೆಟ್ಟಿ, ಕೆ.ಉಪಸ್ಥಿತರಿದ್ದರು. ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.

ಸಹಕಾರ ಭಾರತೀ ಸಂಘದ ಜಿಲ್ಲಾ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ ಸನ್ಮಾನ ಸ್ವೀಕರಿಸಿ, ಕಾರ್ಯಕ್ರಮ ನಿರೂಪಿಸಿದರು. ಗ್ರಾಮಸ್ಟರು ಉಪಸ್ಥಿತರಿದ್ದರು.

Related posts

ಅಂಡಿಂಜೆ ಕಾರ್ಯಕ್ಷೇತ್ರದ ಜ್ಞಾನವಿಕಾಸ ಕೇಂದ್ರದ ಸಭೆ: ಸಿರಿ ಧಾನ್ಯಗಳ ಬಳಕೆ ಹಾಗೂ ಆಷಾಢದಲ್ಲಿ ಒಂದು ದಿನ ಕಾರ್ಯಕ್ರಮ

Suddi Udaya

ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ರಿಂದ ಮತದಾನ

Suddi Udaya

ಕಳಿಯ ಗ್ರಾಮದ ವಾರ್ಡ್ ಗಳಲ್ಲಿ ಅಗತ್ಯವಿದ್ದ ಸ್ಥಳಗಳಲ್ಲಿ ಗ್ರಾಮ ಪಂಚಾಯತ್ ನ 15ನೇ ಹಣಕಾಸು ಯೋಜನೆಯಲ್ಲಿ ಸೋಲಾರ್ ದೀಪ ಅಳವಡಿಕೆ

Suddi Udaya

ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿಶೇಷ ಕಾರ್ಯಾಗಾರ

Suddi Udaya

ಬಡಗಕಾರಂದೂರು ಸ.ಹಿ.ಪ್ರಾ, ಶಾಲೆಯಲ್ಲಿ ಗಿಡ ನಾಟಿ ಕಾರ್ಯಕ್ರಮ

Suddi Udaya

ನೆರಿಯ : ಸ್ಯಾನಿಟೈಸರ್ ಸೇವಿಸಿ ಹಾಸ್ಟೆಲ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ

Suddi Udaya
error: Content is protected !!