23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಬೆಳ್ತಂಗಡಿ

ಅಳದಂಗಡಿ: ಸತ್ಯದೇವತೆ ಎಂಟರ್ ಪ್ರೈಸಸ್ ಶುಭಾರಂಭ

ಅಳದಂಗಡಿ: ಶ್ರೀ ಸೋಮನಾಥೇಶ್ವರೀ ದೇವಸ್ಥಾನದ ಹತ್ತಿರ ಪಂಚಮಿ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಪ್ರಾರಂಭಿಸಿದ ಸತ್ಯದೇವತೆ ಎಂಟರ್ ಪ್ರೈಸಸ್ ಇದರ ಶುಭಾರಂಭವು ಇತ್ತೀಚೆಗೆ ನಡೆಯಿತು.

ನೂತನ ಸಂಸ್ಥೆಯನ್ನು ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲ ದೀಪ ಪ್ರಜ್ವಲಿಸಿ ಸಂಸ್ಥೆಯು ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಅಳದಂಗಡಿ ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗೀಲಬೈಲು, ಪಂಚಮಿ ಕಾಂಪ್ಲೆಕ್ಸ್ ಮಾಲಕ ಪ್ರಸನ್ನ ಮಯ್ಯ, ಮಾಲಕರ ಮಾತೃಶ್ರೀ ಪದ್ಮಾವತಿ, ಯುವ ಉದ್ಯಮಿ ಪ್ರಶಾಂತ್-ಪ್ರೀಯಾ, ರಾಜೇಶ್-ರೂಪಾ, ಸುನೀಲ್ ಕಾಪಿನಡ್ಕ, ಆನಂದ ಪೂಜಾರಿ ಕಾಪಿನಡ್ಕ, ರತ್ನಾಕರ ಪೂಜಾರಿ, ಚಿತ್ತರಂಜನ್, ಪ್ರವೀಣ್ ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದು ಶುಭಕೋರಿದರು.

ನೂತನ ಸಂಸ್ಥೆಗೆ ಆಗಮಿಸಿದ ಅತಿಥಿಗಣ್ಯರನ್ನು ಸಂಸ್ಥೆಯ ಮಾಲಕರಾದ ಶ್ರೀಮತಿ ಸುಶ್ಮಿತಾ ಮತ್ತು ಜಗದೀಶ್ ಪೂಜಾರಿ ದಂಪತಿ, ಮಗು ಶ್ರೀಜಾ ಆತ್ಮೀಯವಾಗಿ ಸ್ವಾಗತಿಸಿದರು.

ಎಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್ ಮೆಟೀರಿಯಲ್ಸ್

ನಮ್ಮ‌ ಸಂಸ್ಥೆಯಲ್ಲಿ ಎಲೆಕ್ಟ್ರಿಕಲ್ಸ್ ಮತ್ತು ಪ್ಲಂಬಿಂಗ್ ಗೆ ಸಂಬಂಧಪಟ್ಟ ಎಲ್ಲ ಉಪಕರಣಗಳು, ವಯರ್, ಸ್ವಿಚ್ ಬೋರ್ಡ್, ಎಲ್.ಇ.ಡಿ ಬಲ್ಬ್,ಪಿವಿಸಿ ಪೈಪ್, ಚೆಯರ್, ಐರನ್ ಬಾಕ್ಸ್, ಮಿಕ್ಸಿ, ಕೇಬಲ್, ಫ್ಯಾನ್, ಪೈಪ್, ನಳ್ಳಿ ಹಾಗೂ ಎಲ್ಲಾ ರೀತಿಯ ಸಾಮಾಗ್ರಿಗಳು ಲಭ್ಯವಿದೆ ಎಂದು ಸಂಸ್ಥೆಯ ಮಾಲಕ ಜಗದೀಶ್ ಪೂಜಾರಿ ಪೆರಾಜೆ ತಿಳಿಸಿದರು.

Related posts

ಉಜಿರೆ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಚಾರ್ಮಾಡಿ ಶಕ್ತಿಕೆಂದ್ರದಲ್ಲಿ ಯುವ ಚೌಪಲ್ ಕಾರ್ಯಕ್ರಮ

Suddi Udaya

ಆಟೋ ಚಾಲಕನಿಗೆ ಅಪರಿಚಿತ ತಂಡದಿಂದ ಹಲ್ಲೆ: ಠಾಣೆಗೆ ದೂರು

Suddi Udaya

ಪುತ್ತೂರು ವಿವೇಕಾನಂದ ಕಾಲೇಜಿನ ನವಯುಗ ಕಾರ್ಯಕ್ರಮ

Suddi Udaya

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ಬಟ್ಟೆಯ ಕಸೂತಿ ತಯಾರಿಕೆ ಸ್ವ ಉದ್ಯೋಗ ತರಬೇತಿ ಸಮಾರೋಪ

Suddi Udaya

ತರ್ಬೀಯತುಲ್ ಇಸ್ಲಾಂ ದಮ್ಮಾಂ ಕರ್ನಾಟಕ ಮದ್ರಸದ ಮಿಹ್ರಜಾನುಲ್ ಬಿದಾಯ ವರ್ಷಾರಂಭ ಅಧ್ಯಯನ ಶಿಬಿರ

Suddi Udaya

ಶ್ರೀ ಭಗವದ್ಗೀತಾ ಸ್ಪರ್ಧೆ : ಉಜಿರೆಯ ಎಸ್.ಡಿ.ಎಂ ಪ.ಪೂ ಕಾಲೇಜಿನ ವಿದ್ಯಾರ್ಥಿನಿ ಹಂಸಿನಿ ಭಿಡೆ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya
error: Content is protected !!