September 6, 2026
ಕೃಷಿಗ್ರಾಮಾಂತರ ಸುದ್ದಿಚಿತ್ರ ವರದಿ

ತೋಟತ್ತಾಡಿ : ಯಾಂತ್ರಿಕೃತ ಭತ್ತದ ಬೇಸಾಯ “ಯಂತ್ರಶ್ರೀ” ತರಬೇತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ)ಬೆಳ್ತಂಗಡಿ ತಾಲೂಕಿನ ವತಿಯಿಂದ ಮುದರ ಕುಂಬಾರರ ಮನೆಯಲ್ಲಿ ಯಂತ್ರಶ್ರೀ ಬಗ್ಗೆ ತರಬೇತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.

ಯೋಜನೆಯ ತಾಲೂಕಿನ ಕೃಷಿ-ಅಧಿಕಾರಿಯಾದ ರಾಮ್ ಕುಮಾರ್ ರವರು ಸಾಮಾನ್ಯ ಪದ್ಧತಿ ಮತ್ತು ಯಾಂತ್ರಿಕೃತ ಪದ್ಧತಿಗೆ ಇರುವಂತಹ ವ್ಯತ್ಯಾಸ,ಉತ್ತಮ ಭತ್ತದ ಬೀಜದ ಆಯ್ಕೆ,ಬಿಜೋಪಚಾರ,ಸಸಿ ಮಡಿಗೆ ಮಣ್ಣಿನ ಆಯ್ಕೆ,ಸಸಿ ಮಡಿ ತಯಾರಿ,ನಾಟಿ ಗದ್ದೆಯ ತಯಾರಿ,ಯಂತ್ರದ ಮೂಲಕ ಭತ್ತದ ಸಸಿಯ ನಾಟಿ,ಖರ್ಚು ಮತ್ತು ಆದಾಯದ ಬಗ್ಗೆ ರೈತರೊಂದಿಗೆ ಸಂವಾದದ ಮೂಲಕ ಸಂಪೂರ್ಣವಾದ ಮಾಹಿತಿಯನ್ನು ಪ್ರಾತ್ಯಕ್ಷಿಕೆಯ ಮೂಲಕ ನೀಡಿದರು.

ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ, ಮುದರ ಕುಂಬಾರ ಮತ್ತು ಮೇಲ್ವಿಚಾರಕರಾದ ರಾಜೇಶ್, ಸೇವಾ-ಪ್ರತಿನಿಧಿ ಹಾಗೂ ಭತ್ತ ಕೃಷಿ ಅನುಷ್ಠಾನ ಮಾಡುವ ರೈತರು ಉಪಸ್ಥಿತರಿದ್ದರು. ಯಾಂತ್ರಿಕೃತ ಭತ್ತದ ಬೇಸಾಯ ಮಾಡುವಂತೆ ಆಸಕ್ತ ರೈತರು ಉಪಸ್ಥಿತಿ ಇದ್ದು ಸಂವಾದದ ಮೂಲಕ ಮಾಹಿತಿಯನ್ನು ಪಡೆದುಕೊಂಡರು.

Related posts

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಸಭೆ

Suddi Udaya

ಉಜಿರೆ : ಸಿದ್ಧವನ ಗುರುಕುಲದಲ್ಲಿ “ಸುಧನ್ವ ಮೋಕ್ಷ” ಯಕ್ಷಗಾನ ಪ್ರದರ್ಶನ

Suddi Udaya

ಲಾಯಿಲ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಮೂರ್ಜೆ ವಿವೇಕಾನಂದ ಪ್ರಭು

Suddi Udaya

ಮೇ 25: ಧರ್ಮಸ್ಥಳದಲ್ಲಿ “ಹತ್ತನಾವಧಿ” ಉತ್ಸವ

Suddi Udaya

ಪ್ರಸಿದ್ಧ ಕಾದಂಬರಿಕಾರ ಕೆ ಟಿ ಗಟ್ಟಿಯವರ ನಿಧನಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ ಯದುಪತಿ ಗೌಡರವರಿಂದ ಸಂತಾಪ

Suddi Udaya

ಸರ್ವರನ್ನೂ ಹಾಗೂ ಸರ್ವ ಕ್ಷೇತ್ರಗಳನ್ನೂ ಒಳಗೊಂಡ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ ಬಜೆಟ್ : ರಕ್ಷಿತ್ ಶಿವರಾಂ

Suddi Udaya
error: Content is protected !!