29.4 C
ಪುತ್ತೂರು, ಬೆಳ್ತಂಗಡಿ
September 21, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಘಟಕದ ಸದಸ್ಯರುಗಳಿಗೆ ತರಬೇತಿ ಕಾರ್ಯಾಗಾರ

ಬೆಳ್ತಂಗಡಿ : ಜೆಸಿಐ ತರಬೇತುದಾರನ್ನು ಸೃಷ್ಟಿಸುತ್ತದೆ ಎಂಬ ಮಾತಿಗೆ ಪೂರಕವಾಗಿ ಘಟಕದ ಸದಸ್ಯರುಗಳಿಗೆ ತಂಡ ನಿರ್ವಹಣೆಯ ಬಗ್ಗೆ ತರಬೇತಿ ಕಾರ್ಯಾಗಾರವನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀ ಘಟಕದಲ್ಲಿ ಹಮ್ಮಿಕೊಳ್ಳಲಾಯಿತು.

ಮೂಡುಬಿದಿರೆ ಜೆಸಿಐನ ತರಬೇತುದಾರರಾದ ಜೆಸಿ ಚೇತನ್ ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಪ್ರತಿಭೆಗಳಿಗೆ ಅವಕಾಶ ನೀಡುವಲ್ಲಿ ಸದಾ ಹೆಸರುವಾಸಿಯಾಗಿರುವ ಜೆಸಿಐ ಬೆಳ್ತಂಗಡಿಯು ಮಡಿಕೇರಿಯ ಕು.ರಶ್ಮಿ ಇವರ ಕವನ ವಚನಗಳಿಗೆ ವೇದಿಕೆ ಕಲ್ಪಿಸಿ ಕೊಟ್ಟಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷರಾದ ಶಂಕರ್ ರಾವ್ ವಹಿಸಿದ್ದರು.
ವೇದಿಕೆಯಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ಪ್ರಸಾದ್ ಬಿ. ಎಸ್, ಜೊತೆ ಕಾರ್ಯದರ್ಶಿ ಸೃಜನ್ ಆರ್ ರೈ, ಜೂನಿಯರ್ ಜೆಸಿ ಅಧ್ಯಕ್ಷ ರಾಮಕೃಷ್ಣ ಶರ್ಮಾ ಉಪಸ್ಥಿತರಿದ್ದರು.

ಕಾರ್ಯಾಗಾರದಲ್ಲಿ ಘಟಕದ ಉಪಾಧ್ಯಕ್ಷರುಗಳಾದ ರಂಜಿತ್ ಹೆಚ್.ಡಿ, ಹೇಮಾವತಿ ಮತ್ತು ಪ್ರೀತಮ್ ಶೆಟ್ಟಿ, ಪೂರ್ವಾಧ್ಯಕ್ಷರಾದ ನಾರಾಯಣ್ ಶೆಟ್ಟಿ, ಸದಸ್ಯರುಗಳಾದ ವಿನಾಯಕ್ ಪ್ರಸಾದ್, ಶೈಲೇಶ್, ಸ್ಮಿತೇಶ್ ಎಸ್ ಬಾರ್ಯ ಪಾಲ್ಗೊಂಡಿದ್ದರು.

Related posts

ಅರಣ್ಯ ಇಲಾಖೆ ಬುಡಕಟ್ಟು ಸಮುದಾಯದ ಜೊತೆಗೆ ಸರ್ಕಾರವನ್ನು ಕೂಡ ವಂಚಿಸುತ್ತಿದೆ : ಹರೀಶ್ ಎಳನೀರ್

Suddi Udaya

ಕೊಕ್ಕಡ ಅಮೃತ ಗ್ರಾ.ಪಂ. ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

Suddi Udaya

ಎಸ್‌ಡಿಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮೂರನೇ ಅಂತರಾಷ್ಟ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾಸಮ್ಮೇಳನ ಉದ್ಘಾಟನೆ

Suddi Udaya

ಅವೈಜ್ಞಾನಿಕ ಹಾಗೂ ಜನಹಿತಪರವಲ್ಲದ ಕಸ್ತೂರಿರಂಗನ್ ವರದಿ ತಡೆಹಿಡಿದು ವಜಾಮಾಡುವ ತನಕ ಹೋರಾಟವನ್ನು ಮುನ್ನಡೆಸೋಣ : ಫಾ| ಸುನಿಲ್ ಐಸಕ್ ಬೆಂಬಲ

Suddi Udaya

ಫೆ.28: ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಸೇವಾ ನಿವೃತ್ತಿ

Suddi Udaya

ಎಂ.ಡಿ.ಎಸ್ ಪರೀಕ್ಷೆ: ರಾಜ್ಯಮಟ್ಟದಲ್ಲಿ ವೇಣೂರಿನ ಡಾ. ದೀಕ್ಷಾ ಅಶ್ವಿತ್‌ ಕುಲಾಲ್ ರವರಿಗೆ 5ನೇ ರ್‍ಯಾಂಕ್

Suddi Udaya
error: Content is protected !!