September 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಧರ್ಮಸ್ಥಳ: ಯುಗಾದಿ ಬಳಗದ ಸ್ನೇಹ ಪರ್ವ-2 ಕಾರ್ಯಕ್ರಮ

ಧರ್ಮಸ್ಥಳ : ಫೇಸ್ಬುಕ್ ಮುಖಪುಟದ ಹೆಸರಾಂತ ಸಾಹಿತ್ಯ ಬಳಗಗಳಲ್ಲಿ ಒಂದಾದ ಯುಗಾದಿ ಬಳಗದ ಸ್ನೇಹ ಪರ್ವ -2 ಕಾರ್ಯಕ್ರಮ ಎ.26ರಂದು ಧರ್ಮಸ್ಥಳ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ ಭುಜಬಲಿ ಧರ್ಮಸ್ಥಳ ವಹಿಸಿದ್ದರು. ಉದ್ಘಾಟನೆಯನ್ನು ಯುಗಾದಿ ಬಳಗದ ವ್ಯವಸ್ಥಾಪಕರು ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಕೊಪ್ಪದ ಶಶಿಧರ್ ಎಲ್ಎಸ್ ಕೊಪ್ಪ, ತೀರ್ಥಹಳ್ಳಿಯ ಸತ್ಯಶೋಧ ಪತ್ರಿಕೆ ಸಂಪಾದಕ ಅರುಣ್ ಮಂಜುನಾಥ್, ಬೆಂಗಳೂರಿನ ಮಂಜುಳಾ ಪ್ರಸಾದ್ ಹಾಗೂ ರಾಜೇಶ್ವರಿ ಉಮೇಶ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಯುಗಾದಿ ಬಳಗದ ಹಿರಿಯರಿಗೆ ಯುಗಾದಿ ಮಾಣಿಕ್ಯ ಹಾಗೂ ಸಕ್ರಿಯ ಸದಸ್ಯರಿಗೆ ಯುಗಾದಿ ಐಸಿರಿ ಮತ್ತು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಸದಸ್ಯರಿಗೆ ಯುಗಾದಿ ಸುಜ್ಞಾನ ಸಿರಿ ಮತ್ತು ಪ್ರತಿಭಾ ಸಿರಿ ಗೌರವವನ್ನು ನೀಡಲಾಯಿತು.

ಯಲ್ಲಾಪುರದ ಶೈಲಾ ಭಟ್ ಸ್ವಾಗತಿಸಿ, ಹೊನ್ನಾವರದ ಶ್ರೀನಾಥ್ ಪಿ. ಎಸ್ ಪ್ರಸ್ತಾವಿಸಿದರು. ಬೆಂಗಳೂರಿನ ಶೀಲತಾ ಭಾರ್ಗವ್ ಮತ್ತು ಉಜಿರೆಯ ಆಶಾ ಅಡೂರ್ ಕಾರ್ಯಕ್ರಮ ನಿರೂಪಿಸಿದರು. ಬೆಂಗಳೂರಿನ ಸುಜಾತ ಭಟ್ ವಂದಿಸಿದರು. ಅಕ್ಷತಾ ಅಡೂರ್ ಪ್ರಾರ್ಥನೆ ಹಾಡಿದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗದ ಸದಸ್ಯರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಮಡಿಕೇರಿಯ ವೀಣಾ ಉಮೇಶ್, ಆಮಂತ್ರಣದ ವಿಜಯಕುಮಾರ್ ಜೈನ್ ಹಾಗೂ ಅರುಣ್ ಜೈನ್ ರವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದ ವಿವಿಧ ಕಡೆಯಿಂದ ಯುಗಾದಿ ಬಳಗದ ಸದಸ್ಯರು ಆಗಮಿಸಿ ಸ್ನೇಹ ಪರ್ವ -2 ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Related posts

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಹೇಂದ್ರ ಕಂಪನಿಯ ಹೊಸ ಮಾದರಿಯ ಕಾರು ಕೊಡುಗೆ

Suddi Udaya

ಉಜಿರೆ: ರುಡ್ ಸೆಟ್ ಸಮೀಪ ರಸ್ತೆಗೆ ಬಿದ್ದ ಮರ: ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ತೆರವು ಕಾರ್ಯ

Suddi Udaya

ಮಾ.31ರೊಳಗೆ ಶಾಲಾ ಹಳೇ ವಿದ್ಯಾರ್ಥಿಗಳ ಸಂಘ ರಚಿಸುವಂತೆ ಶಿಕ್ಷಣ ಇಲಾಖೆ ಸೂಚನೆ

Suddi Udaya

ಸೌಜನ್ಯ ಪ್ರಕರಣ : ನಡ ಮತ್ತು ಕನ್ಯಾಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮನವಿ

Suddi Udaya

ಬೆಳಾಲು ಪೆರಿಯಡ್ಕ ಶಾಲಾ ಅಭಿವೃದ್ದಿಗೆ ಸಕಲ ಸೌಲಭ್ಯಗಳನ್ನು ಒದಗಿಸಿದ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನ ಸಂಚಾಲಕ ಮೋಹನ್ ಕುಮಾರ್ ರವರಿಗೆ ಶಾಲೆಯ ವತಿಯಿಂದ ಅಭಿನಂದನೆ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

Suddi Udaya
error: Content is protected !!