30 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶ್ರೀ ಕ್ಷೇ.ಧ.ಗ್ರಾ. ಯೋಜನೆ ಕಣಿಯೂರು ವಲಯದ ನೂತನ ಅಧ್ಯಕ್ಷರಾಗಿ ಪ್ರಫುಲ್ಲಚಂದ್ರ ಆಯ್ಕೆ

ಕರಾಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ಗುರುವಾಯನಕೆರೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಜನಜಾಗೃತಿ ವೇದಿಕೆ ಕಣಿಯೂರು ವಲಯದ ನೂತನ ವಲಯ ಅಧ್ಯಕ್ಷರ ಆಯ್ಕೆ ಸಭೆಯು ಕರಾಯ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಎ.3 ರಂದು ನಡೆಯಿತು.

ಗುರುವಾಯನಕೆರೆ ಯೋಜನಾಧಿಕಾರಿ ಯಶವಂತ್ ರವರು ಜನಜಾಗೃತಿ ವೇದಿಕೆಯ ಹುಟ್ಟು ಬೆಳವಣಿಗೆ ನಡೆದು ಬಂದ ದಾರಿ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿದರು. ದ. ಕ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ರವರು ಜನ ಜಾಗೃತಿ ಗ್ರಾಮ ಸಮಿತಿಯ ಉದ್ದೇಶ, ನವಜೀವನ ಸಮಿತಿಯ ಬಲವರ್ಧನೆಯ ಬಗ್ಗೆ ಮಾಹಿತಿ ನೀಡಿದರು.

ಕಣಿಯೂರು ವಲಯ ಜನಜಾಗೃತಿ ವೇದಿಕೆಯ ನೂತನ ಅಧ್ಯಕ್ಷರಾಗಿ ಪ್ರಪುಲ್ಲಚಂದ್ರ ಅಡ್ಯoತಾಯ ರವರನ್ನು ಆಯ್ಕೆ ಮಾಡಿ ಅಧಿಕಾರ ಹಸ್ತಾಂತರ ಮಾಡಲಾಯಿತು.

ಈ ಸಭೆಯಲ್ಲಿ ವಲಯಾಧ್ಯಕ್ಷ ರುಕ್ಮಯ್ಯ ಪೂಜಾರಿ, ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷೆ ಶಾರದಾ ಆರ್ ರೈ, ಮತ್ತು ಸದಸ್ಯರು, ವಲಯ ಒಕ್ಕೂಟದ ಅಧ್ಯಕ್ಷ ರಮಾನಂದ ಪೂಜಾರಿ, ಗ್ರಾಮ ಸಮಿತಿ ನವಜೀವನ ಸಮಿತಿ ಅಧ್ಯಕ್ಷರು ಹಾಗೂ ಒಕ್ಕೂಟದ ಅಧ್ಯಕ್ಷರು, ವಲಯದ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.

ಸೇವಾಪ್ರತಿನಿಧಿ ಸೀತಾರಾಮ ಆಳ್ವ ರವರು ಸ್ವಾಗತಿಸಿ, ವಲಯ ಮೇಲ್ವಿಚಾರಕಿ ಪ್ರೇಮ ವಂದಿಸಿದರು.

Related posts

ಮದ್ದಡ್ಕ: ಕಿನ್ನಿಗೋಳಿ ಎಂಬಲ್ಲಿ ಎರಡು ಕಾರುಗಳ ನಡುವೆ ಡಿಕ್ಕಿ

Suddi Udaya

ನಡ ಶಾಲಾ ಶತಮಾನೋತ್ಸವ ಸಮಾರೋಪ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ರೆಖ್ಯ ಅಂಗನವಾಡಿಯಲ್ಲಿ ಹಾಳಾದ ಮೊಟ್ಟೆ ವಿತರಣೆ: ಗ್ರಾಮಸ್ಥರ ಅಕ್ರೋಶ

Suddi Udaya

ಉಜಿರೆಯ ಪ್ರಣಮ್ಯ ಎಂ.ಕೆ. ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ

Suddi Udaya

ನಾವೂರು: ಡಾ| ವೀಣಾ ಬನ್ನಂಜೆಯವರ ಏಳನೇ ದಿನದ ಶ್ರೀ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆ: ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ ಭಾಗಿ

Suddi Udaya

ನಿಡ್ಲೆ ಗ್ರಾಮದ ಕಾಂಗ್ರೆಸ್ ಬೆಂಬಲಿಗರು ಹರೀಶ್ ಪೂಂಜ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ

Suddi Udaya
error: Content is protected !!