ಬೆಳ್ತಂಗಡಿಯಲ್ಲಿ ಬಿಸಿಲ ಬೇಗೆಗೆ ತಂಪು ಮಜ್ಜಿಗೆ ಹಂಚಿ ಬಾಯಾರಿಕೆ ತಣಿಸಿದ ‘ರೆಡ್ ಕ್ರಾಸ್’ ತಂಡ

Suddi Udaya

ಬೆಳ್ತಂಗಡಿ : ನೆತ್ತಿ ಸುಡುವ ಬಿಸಿಲಿನ ಬೇಗೆಗೆ ಬಾಯಾರಿ ಬರುವ ಸಾರ್ವಜನಿಕರಿಗೆ ರೆಡ್ ಕ್ರಾಸ್ ಸಂಸ್ಥೆಯ ಪ್ರತಿನಿಧಿಗಳ ತಂಡ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಎ.7 ರಂದು ಉಚಿತ ಮಜ್ಜಿಗೆ ವಿತರಿಸುವ ಮೂಲಕ ನಾಗರಿಕರ ಶ್ಲಾಘನೆಗೆ ಪಾತ್ರವಾಗಿದೆ.

ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಶುಚಿ ರುಚಿಯಾದ ಮಜ್ಜಿಗೆ ನೀಡಿ ನಾಗರಿಕರ ಗಮನ ಸೆಳೆದಿದೆ.ನೆತ್ತಿ ಸುಡುವ ಉರಿ ಬಿಸಿಲಿಗೆ ಬಿಸಿಗಾಳಿ ಜೊತೆಗೆ ಭೂಮಿಯೇ ಧಗಧಗಿಸುವ ರೀತಿಯಲ್ಲಿ ಬರಿಗಾಲಲ್ಲಿ ನಡೆದಾಡಲಾಗದ ಪರಿಸ್ಥಿತಿ ಇರುವಾಗ ರೆಡ್ ಕ್ರಾಸ್ ಸಂಸ್ಥೆಯ ತಂಡ ಪೇಟೆಗೆ ಬಂದವರ ಬಾಯಾರಿಕೆ ತಣಿಸುವ ಕಾಳಜಿಯೊಂದಿಗೆ ಲೋಟದಲ್ಲಿ ತಂಪು ಮಜ್ಜಿಗೆ ಹಂಚುವ ಸಾಂಕೇತಿಕವಾದ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭ ರೆಡ್‌ ಕ್ರಾಸ್ ಸಂಸ್ಥೆ ಅಧ್ಯಕ್ಷ ಹರಿಪ್ರಸಾದ್, ಕಾರ್ಯದರ್ಶಿ ಯಶವಂತ ಪಟವರ್ಧನ್, ಸದಸ್ಯರಾದ ಸುಕನ್ಯಾ, ಪರಿಮಳಾ, ಸುಜಿತ್ ಪುಟಾಣಿ ಆರುಷಿ ಇದ್ದರು.

Leave a Comment

error: Content is protected !!