24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಬಳಂಜ: ಪೆರಾಜೆ ಫಲ್ಗುಣಿ ನದಿಯಲ್ಲಿ ಮೀನುಗಳ ಮಾರಣ ಹೋಮ

ಬಳಂಜ: ಬಿಸಿಲ ಬೇಗೆಯಿಂದ ನದಿಗಳೆಲ್ಲಾ ನೀರಿಲ್ಲದೆ ಬತ್ತಿ ಹೋಗುತ್ತಿದ್ದು ಕಾಪಿನಡ್ಕ ಫಲ್ಗುಣಿ ನದಿಯೂ ನೀರಿಲ್ಲದೆ ಸೊರಗಿ ಹೋಗಿದೆ. ಇದರ ನಡುವೆ ನದಿಯ ಕೆಲವು ಗುಂಡಿಗಳಲ್ಲಿ ಅಲ್ಪ ಸ್ವಲ್ಪ ನೀರು ಇದ್ದು ಸಣ್ಣ ಪುಟ್ಟ ಮೀನುಗಳು ಜೀವ ರಕ್ಷಣೆಗಾಗಿ ಈ ನೀರಿನಲ್ಲಿ ಒದ್ದಾಡುತ್ತಿವೆ. ಆದರೆ ಇದನ್ನೇ ದುರುಪಯೋಗ ಪಡಿಸಿಕೊಂಡ ಕೆಲವು ದುಷ್ಕರ್ಮಿಗಳು ಬಳಂಜ ಗ್ರಾಮದ ಪೆರಾಜೆ ಬಳಿ ಹಾದು ಹೋಗುವ ಫಲ್ಗುಣಿ ನದಿಗೆ ವಿಷ ಮಿಶ್ರಿತ ಆಹಾರವನ್ನು ಹಾಕಿ ಮೀನನ್ನು ಹಿಡಿಯುತ್ತಿದ್ದು ಇದರಿಂದಾಗಿ ಸಾವಿರಾರು ಮೀನುಗಳು ನದಿ ಬದಿಯಲ್ಲಿ ಸತ್ತು ಬಿದ್ದಿವೆ. ಕೆಲವು ಮೀನುಗಳು ಅರೆ ಪ್ರಜ್ಞಾವಸ್ಥೆಯಲ್ಲಿದ್ದು ಬಿಸಿಯಾದ ನೀರು ಮತ್ತು ಆಮ್ಲಜನಕದ ಕೊರತೆಯಿಂದ ಜೀವ ಉಳಿಸಿಕೊಳ್ಳಲು ಒದ್ದಾಡುತ್ತಿವೆ.

.ಇಂದು ಫಲ್ಗುಣಿ ನದಿ ಕಿನಾರೆಯಲ್ಲಿ ಒಂದು ಸುತ್ತು ಹೊಡೆದಾಗ ಮೀನುಗಳ ಮಾರಣಹೋಮ ಕಣ್ಣಿಗೆ ಬಿತ್ತು. ನೋಡುವಾಗ ಮನಸ್ಸು ಕರಗಿಬಿಡುತ್ತದೆ. ಸರಿಯಾಗಿ ಮಳೆ ಬಾರದೆ ಕುಡಿಯಲು ನೀರು ಸಹ ಸಿಗದಿರುವ ಪರಿಸ್ಥಿತಿಯಲ್ಲಿ ,ದನ ಕರುಗಳು, ಪ್ರಾಣಿ ಪಕ್ಷಿಗಳು ನೀರನ್ನು ಹುಡುಕಿಕೊಂಡು ನದಿ ಕಿನಾರೆಗೆ ಬಂದು ನೀರನ್ನು ಕುಡಿಯುತ್ತವೆ. ಆದ್ದರಿಂದ ನದಿಗೆ ವಿಷ ಹಾಕಿ ಮೀನು ಹಿಡಿಯುವ ಕೆಲಸವನ್ನು ಪ್ರಜ್ಞಾವಂತ ನಾಗರಿಕರು ತಕ್ಷಣ ನಿಲ್ಲಿಸಬೇಕು.


ಮಾನವರ ಅನಾಗರಿಕ ವರ್ತನೆಯಿಂದ ನದಿ ನೀರುಗಳು ಕಲುಷಿತಗೊಂಡು ನದಿ ನೀರಿನ ಫಲವತ್ತತೆಗೆ ಕಾರಣವಾಗಿರುವ ಮೀನುಗಳ ಸಂತತಿ ನಾಶವಾದರೆ ಪ್ರಕೃತಿಯ ನಡುವೆ ವ್ಯತ್ಯಾಸಗಳು ಸಂಭವಿಸುತ್ತದೆ. ಗ್ರಾಮ ಪಂಚಾಯತ್ ನವರು ಸಹ ಸುತ್ತಮುತ್ತಲಿನ ನದಿಗಳ ಬಗ್ಗೆ ಗಮನಹರಿಸಿ ಮೀನುಗಳ ರಕ್ಷಣೆಯನ್ನು ಮಾಡುವ ಅಗತ್ಯವಿದೆ ಎಂದು ನಾಗರಿಕರ ಪರವಾಗಿ ಸದಾನಂದ ಸಾಲಿಯಾನ್ ಬಳಂಜ ಒತ್ತಾಯಿಸಿದ್ದಾರೆ.

Related posts

ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರ ಆಪ್ತ ಕಾರ್ಯದರ್ಶಿಯಾಗಿ ಮಂಜುನಾಥ ಎಂ. ಮರುನೇಮಕ

Suddi Udaya

ಕೊಕ್ರಾಡಿ : ಕೈತ್ರೋಡಿ ನಿವಾಸಿ ವಜ್ರ ಕುಮಾರ್ ಜೈನ್ ನಿಧನ

Suddi Udaya

ಅಳದಂಗಡಿ: ತಾಲೂಕು ಮಟ್ಟದ ಪ್ರಾಥಮಿಕ ಶಾಲೆಗಳ ಬಾಲಕ -ಬಾಲಕಿಯರ ಖೋ -ಖೋ ಪಂದ್ಯಾಟ ಉದ್ಘಾಟನೆ

Suddi Udaya

ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದ ನಿರ್ದೇಶಕ ಸ್ಥಾನದ ಉಪಚುನಾವಣೆಗೆ ಮಾಜಿ ಸೈನಿಕ ತಂಗಚ್ಚನ್ ಅವಿರೋಧ ಆಯ್ಕೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಜನ ಸಹಭಾಗಿತ್ವದಲ್ಲಿ ಮಕರ ಸಂಕ್ರಾಂತಿ ಸಂದರ್ಭ ರಾಜ್ಯಾದ್ಯಂತ 16902 ಶ್ರದ್ದಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ

Suddi Udaya

ಕೋಟದಲ್ಲಿ ಗ್ರಾ.ಪಂ. ಸದಸ್ಯರಿಗೆ ಕ್ರೀಡಾಕೂಟ ಮಚ್ಚಿನ ಗ್ರಾ.ಪಂ. ಗೆ ದ್ವಿತೀಯ ಪ್ರಶಸ್ತಿ

Suddi Udaya
error: Content is protected !!