September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಬಳಂಜ: ಪೆರಾಜೆ ಫಲ್ಗುಣಿ ನದಿಯಲ್ಲಿ ಮೀನುಗಳ ಮಾರಣ ಹೋಮ

ಬಳಂಜ: ಬಿಸಿಲ ಬೇಗೆಯಿಂದ ನದಿಗಳೆಲ್ಲಾ ನೀರಿಲ್ಲದೆ ಬತ್ತಿ ಹೋಗುತ್ತಿದ್ದು ಕಾಪಿನಡ್ಕ ಫಲ್ಗುಣಿ ನದಿಯೂ ನೀರಿಲ್ಲದೆ ಸೊರಗಿ ಹೋಗಿದೆ. ಇದರ ನಡುವೆ ನದಿಯ ಕೆಲವು ಗುಂಡಿಗಳಲ್ಲಿ ಅಲ್ಪ ಸ್ವಲ್ಪ ನೀರು ಇದ್ದು ಸಣ್ಣ ಪುಟ್ಟ ಮೀನುಗಳು ಜೀವ ರಕ್ಷಣೆಗಾಗಿ ಈ ನೀರಿನಲ್ಲಿ ಒದ್ದಾಡುತ್ತಿವೆ. ಆದರೆ ಇದನ್ನೇ ದುರುಪಯೋಗ ಪಡಿಸಿಕೊಂಡ ಕೆಲವು ದುಷ್ಕರ್ಮಿಗಳು ಬಳಂಜ ಗ್ರಾಮದ ಪೆರಾಜೆ ಬಳಿ ಹಾದು ಹೋಗುವ ಫಲ್ಗುಣಿ ನದಿಗೆ ವಿಷ ಮಿಶ್ರಿತ ಆಹಾರವನ್ನು ಹಾಕಿ ಮೀನನ್ನು ಹಿಡಿಯುತ್ತಿದ್ದು ಇದರಿಂದಾಗಿ ಸಾವಿರಾರು ಮೀನುಗಳು ನದಿ ಬದಿಯಲ್ಲಿ ಸತ್ತು ಬಿದ್ದಿವೆ. ಕೆಲವು ಮೀನುಗಳು ಅರೆ ಪ್ರಜ್ಞಾವಸ್ಥೆಯಲ್ಲಿದ್ದು ಬಿಸಿಯಾದ ನೀರು ಮತ್ತು ಆಮ್ಲಜನಕದ ಕೊರತೆಯಿಂದ ಜೀವ ಉಳಿಸಿಕೊಳ್ಳಲು ಒದ್ದಾಡುತ್ತಿವೆ.

.ಇಂದು ಫಲ್ಗುಣಿ ನದಿ ಕಿನಾರೆಯಲ್ಲಿ ಒಂದು ಸುತ್ತು ಹೊಡೆದಾಗ ಮೀನುಗಳ ಮಾರಣಹೋಮ ಕಣ್ಣಿಗೆ ಬಿತ್ತು. ನೋಡುವಾಗ ಮನಸ್ಸು ಕರಗಿಬಿಡುತ್ತದೆ. ಸರಿಯಾಗಿ ಮಳೆ ಬಾರದೆ ಕುಡಿಯಲು ನೀರು ಸಹ ಸಿಗದಿರುವ ಪರಿಸ್ಥಿತಿಯಲ್ಲಿ ,ದನ ಕರುಗಳು, ಪ್ರಾಣಿ ಪಕ್ಷಿಗಳು ನೀರನ್ನು ಹುಡುಕಿಕೊಂಡು ನದಿ ಕಿನಾರೆಗೆ ಬಂದು ನೀರನ್ನು ಕುಡಿಯುತ್ತವೆ. ಆದ್ದರಿಂದ ನದಿಗೆ ವಿಷ ಹಾಕಿ ಮೀನು ಹಿಡಿಯುವ ಕೆಲಸವನ್ನು ಪ್ರಜ್ಞಾವಂತ ನಾಗರಿಕರು ತಕ್ಷಣ ನಿಲ್ಲಿಸಬೇಕು.


ಮಾನವರ ಅನಾಗರಿಕ ವರ್ತನೆಯಿಂದ ನದಿ ನೀರುಗಳು ಕಲುಷಿತಗೊಂಡು ನದಿ ನೀರಿನ ಫಲವತ್ತತೆಗೆ ಕಾರಣವಾಗಿರುವ ಮೀನುಗಳ ಸಂತತಿ ನಾಶವಾದರೆ ಪ್ರಕೃತಿಯ ನಡುವೆ ವ್ಯತ್ಯಾಸಗಳು ಸಂಭವಿಸುತ್ತದೆ. ಗ್ರಾಮ ಪಂಚಾಯತ್ ನವರು ಸಹ ಸುತ್ತಮುತ್ತಲಿನ ನದಿಗಳ ಬಗ್ಗೆ ಗಮನಹರಿಸಿ ಮೀನುಗಳ ರಕ್ಷಣೆಯನ್ನು ಮಾಡುವ ಅಗತ್ಯವಿದೆ ಎಂದು ನಾಗರಿಕರ ಪರವಾಗಿ ಸದಾನಂದ ಸಾಲಿಯಾನ್ ಬಳಂಜ ಒತ್ತಾಯಿಸಿದ್ದಾರೆ.

Related posts

ಉಜ್ವಲ ಯೋಜನೆಯ ಮಹಿಳೆಯರ ಮೇಲೂ, “ಬೆಲೆ ಏರಿಕೆಯ ಬರೆ ಎಳೆದ” ಕೇಂದ್ರ ಸರ್ಕಾರ: ರಕ್ಷಿತ್ ಶಿವರಾಂ

Suddi Udaya

ಮುಂಡಾಜೆ: ಕೃಷಿಕ ಸದಾಶಿವ ನೇಕಾರ ನಿಧನ

Suddi Udaya

ಶಿಕ್ಷಕ ದಿನಾಚರಣೆಯ ಸಂದರ್ಭದಲ್ಲಿ ಕುಂದಾಪುರದ ಪ.ಪೂ. ಕಾಲೇಜಿನ ಪ್ರಾಚಾರ್ಯ ರಾಮಕೃಷ್ಣ ಅವರ ಆಯ್ಕೆಯನ್ನು ತಡೆ ಹಿಡಿದದ್ದು ಶಿಕ್ಷಕ ಸಮುದಾಯಕ್ಕೆ ಮಾಡಿದ ಅವಮಾನ: ಪ್ರತಾಪಸಿಂಹ ನಾಯಕ್

Suddi Udaya

ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯವರಿಗೆ ಗನ್ ಮ್ಯಾನ್ ನೀಡಲು ಮುಂದಾದ ಸರಕಾರ

Suddi Udaya

ರಕ್ತೇಶ್ವರಿ ಪದವು ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಪೋಷಣಾ ಅಭಿಯಾನ

Suddi Udaya

ಮಲ್ನಾಡ್ ಐಕಾನ್ ಅಶ್ವತ್ಥ್ ಎಸ್.ಎಲ್. ಅವರಿಗೆ ಒಕ್ಕಲಿಗ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನ

Suddi Udaya
error: Content is protected !!