September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಸಯನ್ಸ್ ಪ್ರಾಜೆಕ್ಟ್ ಡಿಸೈನರ್ ಪ್ರವೀಣ್ ಭಟ್ ರವರಿಗೆ “ಡಾ.ಯಂ ವಿಶ್ವೇಶ್ವರಯ್ಯ ತಾಂತ್ರಿಕ ಪ್ರಶಸ್ತಿ”

ಬೆಳ್ತಂಗಡಿ: ವಿಜ್ಞಾನ ,ತಂತ್ರಜ್ಞಾನ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ನೀಡಿರುವ ಗಣನೀಯ ಸೇವೆಗಾಗಿ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ಬೆಂಗಳೂರು, ನೀಡುವ 2023 ನೇ ಸಾಲಿನ ರಾಜ್ಯ ಮಟ್ಟದ ” ಡಾ.ಯಂ ವಿಶ್ವೇಶ್ವರಯ್ಯ ತಾಂತ್ರಿಕ” ಪ್ರಶಸ್ತಿಯನ್ನು ಪ್ರವೀಣ್ ಭಟ್ ಇವರು ಬೆಂಗಳೂರಿನಲ್ಲಿ ಸ್ವೀಕರಿಸಿದರು.

ಕಲಾ, ವಾಣಿಜ್ಯ, ತಾಂತ್ರಿಕ ಮತ್ತು ವಿಜ್ಞಾನ ವಿಷಯಗಳಲ್ಲಿ ಶಿಕ್ಷಣ ಪಡೆದ ಬಹುಮುಖ ಪ್ರತಿಭೆಯಾಗಿರುವ ಇವರು ಕಳೆದ 25 ವರ್ಷಕ್ಕೂ ಶೈಕ್ಷಣಿಕ ಸುದೀರ್ಘ ಅವಧಿಯಲ್ಲಿ ವೃತ್ತಿಪರ ಕೌಶಲಾಭಿವೃದ್ದಿ ಉಪನ್ಯಾಸಕರಾಗಿ, ಶೈಕ್ಷಣಿಕ, ಕಲಾ, ವೈಜ್ಞಾನಿಕ ಹಾಗೂ ತಾಂತ್ರಿಕ ಕ್ಷೇತ್ರದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳ 1500ಕ್ಕೂ ಅಧಿಕ ಜಿಲ್ಲಾ ರಾಜ್ಯ ಮತ್ತು ರಾಷ್ಟ್ರ ಮಟ್ಟದ ವೈಜ್ಞಾನಿಕ ಮಾದರಿಗಳಿಗೆ ಮಾರ್ಗದರ್ಶಕರಾಗಿದ್ದರು. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿರುವ, ಅಕ್ಕಮಹಾದೇವಿ ಸಭಾಂಗಣದಲ್ಲಿ ಏ 9 ರಂದು ನಡೆದ ಕರ್ನಾಟಕ ವೈಭವ ಕಾರ್ಯಕ್ರಮದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಸಾಹಿತಿಗಳ , ಗಣ್ಯರ ಉಪಸ್ಥಿತಿ ಯಲ್ಲಿ ಪ್ರಶಸ್ತಿ ಸ್ವೀಕರಿಸಿದರು.

Related posts

ತೆಕ್ಕಾರಿನ ಯುವಕನನ್ನು ಕೆದಿಲದಲ್ಲಿ ಅಪಹರಿಸಿ ಹಲ್ಲೆ ಆರೋಪ-ಪ್ರಕರಣ ದಾಖಲು

Suddi Udaya

ವೇಣೂರು ವಿ.ಹಿಂ.ಪ. ಬಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನ ಮತ್ತು ಪಂಜಿನ ಮೆರವಣಿಗೆ

Suddi Udaya

ಬೆಳ್ತಂಗಡಿಯ ನ್ಯಾಯಾಲಯ ಮತ್ತು ವಕೀಲರ ಸಂಘಕ್ಕೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಬಸವರಾಜ್ ಭೇಟಿ

Suddi Udaya

ಮುಂಡಾಜೆ ಕುಂಟಾಲಪಲ್ಕೆ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರಿಂದ ಬೆನಕ ಆಸ್ಪತ್ರೆಯ ವಿಸ್ತೃತ ಕಟ್ಟಡದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ

Suddi Udaya

ಉಜಿರೆ : ಎಸ್ ಡಿ ಎಂ ಪಿ ಯು ಕಾಲೇಜಿನಲ್ಲಿ ಸದ್ಭಾವನಾ ದಿನ

Suddi Udaya
error: Content is protected !!