30 C
ಪುತ್ತೂರು, ಬೆಳ್ತಂಗಡಿ
March 6, 2026
ಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿ

ನಾರಾವಿ ಸಂತ ಅಂತೋನಿ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ

ಕಾಶಿಪಟ್ಣ : ಎನ್.ಎಸ್.ಎಸ್ ಶಿಬಿರವು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಸ್ವಚ್ಛತೆ ಭಾಂದವ್ಯ ಸಮಯ ಪರಿಪಾಲನೆ ಮುಂತಾದ ಗುಣಗಳನ್ನು ಅಭಿವೃದ್ಧಿ ಪಡಿಸುತ್ತದೆ. ಇಂಥಹ ಗುಣಗಳು ಒಬ್ಬ ವ್ಯಕ್ತಿಯನ್ನು ಸಮಾಜದಲ್ಲಿ ಉತ್ತಮ ನಾಗರಿಕನಾಗುವಂತೆ ಮಾಡಲು ಒಂದು ದಾರಿಯಾಗಿದೆ. ವಿದ್ಯಾರ್ಥಿಗಳ ಪ್ರತಿಭೆಗಳ ಅನಾವರಣಕ್ಕೆ ಎನ್‌.ಎಸ್‌.ಎಸ್ ಒಂದು ಉತ್ತಮ ವೇದಿಕೆ ಎಂದು ಯು. ನಾರಾಯಣ ಭಟ್ ಕೆಲ್ಲಗುತ್ತು ಅವರು ಹೇಳಿದರು.

ಇವರು ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಕೇಳದಪೇಟೆ ಕಾಶಿಪಟ್ಣ ಇಲ್ಲಿ ನಡೆಯುತ್ತಿರುವ ಸಂತ ಅಂತೋನಿ ಪದವಿ ಕಾಲೇಜು ನಾರಾವಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ 2022-23 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂತ ಅಂತೋನಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ವಂ ಡಾ. ಅಲ್ವಿನ್ ಸರಾವೋ ಶಿಬಿರದ ಯಶಸ್ಸಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ದ.ಕ.ಜಿ, ಪಂ ಹಿರಿಯ ಪ್ರಾಥಮಿಕ ಶಾಲೆ ಕೇಳದಪೇಟೆಯ ಮುಖ್ಯೋಪಾಧ್ಯಾಯ ಪ್ರಶಾಂತ್ ಎ ಮಾತನಾಡಿ “ಮಕ್ಕಳಿಗೆ ಭೌತಿಕ ಕಲಿಕೆಯ ಜೊತೆಗೆ ಪ್ರಾಯೋಗಿಕ ಕಲಿಕೆಯು ಆತೀಮುಖ್ಯ” ಎಂದರು.

ವೇದಿಕೆಯಲ್ಲಿ ದ.ಕ.ಜಿ. ಈ ಹಿರಿಯ ಪ್ರಾಥಮಿಕ ಶಾಲೆ ಕೇಳದಪೇಟೆ ಇಲ್ಲಿನ ಎಸ್.ಡಿ.ಎಂ.ಸಿ ಅಧ್ಯಕ್ಷ ಪ್ರಕಾಶ್ ಮಜಲಡ್ಕ, ಹರೀಶ್ ಗೊಲ್ಲ ಕುಕ್ಕಾಜೆ, ಸುಭಾಶ್ ಶೆಟ್ಟಿ, ಉಪಸ್ಥಿತರಿದ್ದರು.

ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ದಿನೇಶ್ ಬಿ.ಕೆ ಸ್ವಾಗತಿಸಿದರು. ಸಹಶಿಬಿರಾಧಿಕಾರಿ ಅವಿನಾಶ್ ಲೋಬೋ ಎಲ್ಲರಿಗೂ ಧನ್ಯವಾದವಿತ್ತರು. ಉಪನ್ಯಾಸಕರಾದ ಸಂತೋಷ್‌ ಕಾರ್ಯಕ್ರಮವನ್ನು ನಿರೂಪಿಸಿದರು. ನಿಕಟಪೂರ್ವ ಯೋಜನಾಧಿಕಾರಿ ಅವಿಲ್ ಮೋರಾಸ್, ಉಪನ್ಯಾಸಕ ಪ್ರದೀಪ್ ಬಿ.. ಕುಮಾರಿ ಆಶ್ವಿತಾ ಸೆರಾವೋ ಹಾಗೂ ಎನ್.ಎಸ್.ಎಸ್‌ ಕಾರ್ಯದರ್ಶಿ ಸುಹಾಸ್ ಹೆಗ್ಡೆ, ಕುಮಾರಿ ನವ್ಯಶ್ರೀ ಸಹಕರಿಸಿದರು.

Related posts

ಬೆಳ್ತಂಗಡಿ ಶ್ರೀದುರ್ಗಾ ಟೆಕ್ಸ್‌ಟೈಲ್ಸ್ ಮತ್ತು ರೆಡಿಮೇಡ್ಸ್ ಸಂಸ್ಥೆಯಲ್ಲಿ ಮನ್ಸೂನ್ ಆಫರ್ ವಿಶೇಷ ಡಿಸ್ಕೌಂಟ್ ಸೇಲ್

Suddi Udaya

ಕನ್ಯಾಡಿ : ಶ್ರೀ ರಾಮ ಕ್ಷೇತ್ರದ ಗುರುದೇವ ಮಠದಲ್ಲಿ ಆಯುಧ ಪೂಜೆ

Suddi Udaya

ಮಚ್ಚಿನ: ಪಾಲಡ್ಕದಲ್ಲಿ ನೂತನ ಅಂಗನವಾಡಿ ಕೇಂದ್ರದ ಲೋಕಾರ್ಪಣೆ

Suddi Udaya

ಪುದುವೆಟ್ಟು: ಶ್ರೀ ಧ. ಮಂ. ಅ. ಹಿ. ಪ್ರಾ. ಶಾಲೆಯಲ್ಲಿ ವಲಯ ಮಟ್ಟದ ಖೋ ಖೋ ಪಂದ್ಯಾಟದ ಸಮಾರೋಪ ಸಮಾರಂಭ

Suddi Udaya

ಕು. ಸೌಜನ್ಯಳ ಕೊಲೆ ಪ್ರಕರಣ: ಆರೋಪಿಗಳ ಪತ್ತೆಗಾಗಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

Suddi Udaya

ಎಂ.ಡಿ.ಎಸ್ ಪರೀಕ್ಷೆ: ರಾಜ್ಯಮಟ್ಟದಲ್ಲಿ ವೇಣೂರಿನ ಡಾ. ದೀಕ್ಷಾ ಅಶ್ವಿತ್‌ ಕುಲಾಲ್ ರವರಿಗೆ 5ನೇ ರ್‍ಯಾಂಕ್

Suddi Udaya
error: Content is protected !!