September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಚ್ಚಿನ: ಪಾಲಡ್ಕದಲ್ಲಿ ನೂತನ ಅಂಗನವಾಡಿ ಕೇಂದ್ರದ ಲೋಕಾರ್ಪಣೆ

ಮಚ್ಚಿನ : ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಝರ್ಸ್ ಲಿಮಿಟೆಡ್ ಪಣಂಬೂರು, ಮಂಗಳೂರು ಇದರ ಸಿ ಎಸ್ ಆರ್ ಆಕ್ಟಿವಿಟಿ 2024- 25 ರ ಮಂಗಳ ಅಕ್ಷರ ಮಿತ್ರ ಅಂಗನವಾಡಿ ನಿರ್ಮಾಣ ಯೋಜನೆ ಅಡಿಯಲ್ಲಿ ರೂ. 29 ಲಕ್ಷ ಅನುದಾನದಲ್ಲಿ ಮಚ್ಚಿನ ಗ್ರಾಮದ ಪಾಲಡ್ಕ ಇಲ್ಲಿ ನಿರ್ಮಿಸಲಾದ ನೂತನ ಅಂಗನವಾಡಿ ಕೇಂದ್ರದ ಲೋಕಾರ್ಪಣಾ ಕಾರ್ಯಕ್ರಮ ಜೂ 22 ರಂದು ನೆರವೇರಿತು.

ಎಂಸಿಎಫ್ ನ ಮುಖ್ಯ ಉತ್ಪಾದನಾಧಿಕಾರಿ ಎಸ್. ಗಿರೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಇವರು ನೂತನ ಅಂಗನವಾಡಿ ಕೇಂದ್ರವನ್ನು ಲೋಕಾರ್ಪಣೆಗೈದು ಶುಭ ಹಾರೈಸಿದರು. ಆಟದ ಮೈದಾನದ ಉದ್ಘಾಟನೆಯನ್ನು ಮಚ್ಚಿನ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಮತಿ ರುಕ್ಮಿಣಿಯವರು ನೆರವೇರಿಸಿದರು.

ಸಭಾ ಕಾರ್ಯಕ್ರಮವನ್ನು ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ ಅನುವಂಶಿಯ ಆಡಳಿತ ಮೊಕ್ತೇಸರು ಡಾ| ಹರ್ಷ ಸಂಪಿಗೆತ್ತಾಯ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಗ್ರಾಮೀಣ ಪ್ರದೇಶದ ಬಲ ವರ್ಧನೆಗೆ ಶ್ರಮಿಸುತ್ತಿರುವ ಎಂ.ಸಿ.ಎಫ್ ನ ಕಾರ್ಯಗಳನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷೆ ಶ್ರೀಮತಿ ಸೋಮಾವತಿ ಸದಸ್ಯರುಗಳಾದ ಚೇತನ್ ಪಲ್ಲತಲ, ಶ್ರೀಮತಿ ತಾರಾ, ಶ್ರೀಮತಿ ಡೀಕಮ್ಮ, ಎಂಸಿಎಫ್ ನ ಅಧಿಕಾರಿಗಳಾದ ಚೇತನ್ ಮೆಂಡೋನ್ಸ, ಡಾ.ಯೋಗಿಶ್, ದೀಕ್ಷಿತ್ ಶೆಟ್ಟಿ, ವಿವೇಕ್ ಕೋಟ್ಯಾನ್, ದಿವಾಕರ್ ಶೆಟ್ಟಿ ಕಂಗೆತ್ತಿಲು ಮನೆ ಎಸ್ಡಿಎಂಸಿ ಅಧ್ಯಕ್ಷರು ಕೆಪಿಎಸ್ಸಿ ಪುಂಜಾಲಕಟ್ಟೆ , ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳುಉಪಸ್ಥಿತರಿದ್ದರು.

ಮಚ್ಚಿನ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಹಾಲಿ ಸದಸ್ಯ ಚಂದ್ರಕಾಂತ ನಿಡ್ಡಾಜೆಯವರು ಸ್ವಾಗತಿಸಿ , ಮುಖ್ಯ ಶಿಕ್ಷಕಿಯವರಾದ ಶ್ರೀಮತಿ ವೇದಾವತಿ ಧನ್ಯವಾದಗೈದರು. ಪುಷ್ಪಾವತಿ ಮತ್ತು ಚೇತನ್ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಎಂ ಸಿ ಎಫ್ ಸಂಸ್ಥೆಯಿಂದ ಅನುದಾನ ಒದಗಿಸಿಕೊಟ್ಟ ಮುಖ್ಯ ಉತ್ಪಾದನಾಧಿಕಾರಿ ಗಿರೀಶ್ , ಮಚ್ಚಿನ ಗ್ರಾಮಕ್ಕೆ ಸುಮಾರು 22 ಕೋಟಿಯಷ್ಟು ಅನುದಾನ ಒದಗಿಸಿಕೊಟ್ಟು ಮಚ್ಚಿನ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಕಾರಣಿಕರ್ತರಾದ ಶಾಸಕ ಹರೀಶ್ ಪೂಂಜ ಇವರನ್ನು ಸನ್ಮಾನಿಸಲಾಯಿತು.

ಅಂಗನವಾಡಿಯಲ್ಲಿ ಸುಮಾರು 26 ವರ್ಷಗಳ ಕಾಲ ಸಹಾಯಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಶ್ರೀಮತಿ ಶಾರದಾ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅನುದಾನ ಒದಗಿಸುವಲ್ಲಿ ಸಹಕರಿಸಿದ ಎಂಸಿಎಫ್ ನ ಎಲ್ಲಾ ಸಿಬ್ಬಂದಿ ವರ್ಗದವರಿಗೆ, ನೂತನ ಅಂಗನವಾಡಿ ಕೇಂದ್ರವನ್ನು ಅತ್ಯುತ್ತಮವಾಗಿ ನಿರ್ಮಾಣ ಮಾಡಿಕೊಟ್ಟ ಗುತ್ತಿಗೆದಾರರಾದ ದಯಾನಂದ್ ಮಂಗಳೂರು, ಮತ್ತು ಎಲೆಕ್ಟ್ರಿಕಲ್ ಕಾಂಟ್ರಾಕ್ಟರ್ ಸೀಮ್ ಮ್ಯಾಕ್ಸಿಮ್ ಕ್ರಾಸ್ತಾ ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಎಂ.ಸಿ.ಎಫ್ ನಿಂದ ಅಂಗನವಾಡಿ ಕಟ್ಟಡಕ್ಕೆ ಅನುದಾನ ಬರುವಲ್ಲಿ ಶ್ರಮಿಸಿದ ಚಂದ್ರಕಾಂತ್ ನಿಡ್ಡಾಜೆಯವರ ಪ್ರಯತ್ನವನ್ನು ಸ್ಮರಿಸಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

Related posts

ಧರ್ಮಸ್ಥಳ: ನೇರ್ತನೆ ನಿವಾಸಿ ಉದ್ಯಮಿ ಆ್ಯಂಟನಿ ಎ.ಜೆ ನಿಧನ

Suddi Udaya

ಮೂಡುಕೋಡಿ ‘ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಮಾದರಿ ಕಾರ್ಯ

Suddi Udaya

ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರು

Suddi Udaya

ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನಕ್ಕೆ ರಕ್ಷಿತ್ ಶಿವರಾಂ ಭೇಟಿ

Suddi Udaya

ಮುಂಡಾಜೆ ಬಂಟರ ಗ್ರಾಮ ಸಮಿತಿಯಿಂದ ಆಟಿದ ಕೂಟ

Suddi Udaya

ಹಿರಿಯ ಸಹಕಾರಿ, ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘದ ಸ್ಥಾಪಕ ಅಧ್ಯಕ್ಷ ತಣ್ಣೀರುಪಂತ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನಿರಂಜನ್ ಬಾವಂತಬೆಟ್ಟುರವರಿಗೆ ‘ಸಹಕಾರಿ ರತ್ನ ಪ್ರಶಸ್ತಿ’

Suddi Udaya
error: Content is protected !!