ವೇಣೂರು: ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ದೇವರ ಸನ್ನಿಧಿಯಲ್ಲಿ ದೃಢಕಲಶ, ಉತ್ಸವ ಮತ್ತು ಮಹಾರಂಗಪೂಜೆಯು ಜರುಗಿತು.
ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ವಾಸ್ತುಪೂಜೆ, ವಾಸ್ತುಬಲಿ, ವಾಸ್ತುಹೋಮ, ರಾಕ್ಷೆಘ್ನಹೋಮ, ಸಪ್ತಶುದ್ಧಿ, ಪ್ರಸಾದಶುದ್ಧಿ, ಪರಿವಾರ ದೇವತಾ ಸಹಿತ ಕಲಶಾದಿವಾಸ, ಪ್ರಧಾನ ಹೋಮ, ಪ್ರಾಕಾರ ಬಲಿ ಮಹಾಪೂಜೆ, ಪ್ರಸಾದ ವಿತರಣೆ,ಗಣಪತಿ ಹೋಮ, ಪರಿವಾರ ದೇವತಾ ಸಹಿತ ಶ್ರೀ ಮಹಾಲಿಂಗೇಶ್ವರ ದೇವರಿಗೆ 48 ಕಲಶಸಹಿತ ದೃಢಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ಮಹಾರಂಗಪೂಜೆ, ಮಹೋತ್ಸವ, ಪ್ರಸಾದ ವಿತರಣೆ ನಡೆಯಿತು. ಹಾಗೂ ಸಂಪ್ರೋಕ್ಷಣೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲರು,ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಯನ್ ಪುರುಷೋತ್ತಮ ರಾವ್,ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಟಿ ವಿಷ್ಣುಮೂರ್ತಿ ಭಟ್,ಕೆ.ಭಾಸ್ಕರ ಪೈ,ಅಣ್ಣು ಮೂಲ್ಯ, ಸತೀಶ್ ಕೇರಿಯಾರ್,ಕಾರ್ತಿಕ್ ಅಮೈ,ಪ್ರಶಾಂತ್ ಹೆಗ್ಡೆ,ಯಶೋಧ ಹೆಗ್ಡೆ,ಚಂಪಾ ಹಾಗೂ ಜೀರ್ಣೋದ್ಧಾರ ಸಮಿತಿ,ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.