39.6 C
ಪುತ್ತೂರು, ಬೆಳ್ತಂಗಡಿ
March 31, 2025
ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆಜಿಲ್ಲಾ ಸುದ್ದಿ

ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರಿಂದ ಬೆಳ್ತಂಗಡಿ ಕ್ಷೇತ್ರದ 81 ಗ್ರಾಮಗಳಿಗೆ ಭೇಟಿ

ಬೆಳ್ತಂಗಡಿ: ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಹರೀಶ್ ಪೂಂಜಾ ಅವರು ತಾಲ್ಲೂಕಿನಾದ್ಯಾಂತ ಸಂಘಟನಾತ್ಮಕ ಪ್ರವಾಸಕೈಗೊಂಡಿದ್ದು, ಬಿಜೆಪಿ ಮಂಡಲಪದಾಧಿಕಾರಿಗಳೊಂದಿಗೆ ಎ. 12 ರಿಂದ ಎ.15 ರವರೆಗೆ ಕ್ಷೇತ್ರದ ಎಲ್ಲಾ 81 ಗ್ರಾಮಗಳಿಗೆ ಭೇಟಿ ನೀಡಿದ್ದಾರೆ.

ನಾರಾವಿಶ್ರೀಸೂರ್ಯನಾರಾಯಣ ದೇವರಿಗೆ ಕೈಮುಗಿದು ತೀರ್ಥ ಪ್ರಸಾದ ಸ್ವೀಕರಿಸಿ ನಾರಾವಿ ಶಕ್ತಿ ಕೇಂದ್ರದಿಂದಲೇ ಪ್ರವಾಸ ಆರಂಭಿಸಿ, ಕುತ್ಲೂರು, ಕೊಕ್ರಾಡಿ, ಅಂಡಿಂಜೆ, ಸಾವ್ಯ ಪೆರಾಡಿ, ಮರೋಡಿ, ಕಾಶಿಪಟ್ಟ ಬಡಕೋಡಿ, ಹೊಸಂಗಡಿ, ಆರಂಬೋಡಿ, ವೇಣೂರು, ಕರಿಮಣೇಲು,ಮೂಡುಕೋಡಿ, ಕುಕ್ಕೇಡಿ ನಿಟ್ಟಡೆ, ಗರ್ಡಾಡಿ, ಪಿಲ್ಯ, ಕುದ್ಯಾಡಿ, ನಾವರ, ಪಡಂಗಡಿ, ನಾಲ್ಕೂರು,ಬಜಿರೆ, ತೆಂಕಕಾರಂದೂರು,ಬಡಗಕಾರಂದೂರು ಶಕ್ತಿ ಕೇಂದ್ರಗಳ ಸಭೆನಡೆಸಿದರು.

ಎ.13ರಂದು ಶಿಬಾಜೆ ಅರಸಿನಮಕ್ಕಿ, ಶಿಶಿಲ ರೆಖ್ಯಾ ಪಟ್ರಮೆ, ಕೊಕ್ಕಡ, ಕಳೆಂಜ, ನಿಡ್ಲೆ, ಪುದುವೆಟ್ಟು ನೆರಿಯ,ಚಿಬಿದ್ರೆ ತೊಟತ್ತಾಡಿ,ಚಾರ್ಮಾಡಿ, ಮುಂಡಾಜೆ,ಉಜಿರೆ, ಕಲ್ಮಂಜ, ಕಡಿರುದ್ಯಾವರ, ಮಿತ್ತಬಾಗಿಲು, ಮಲವಂತಿಗೆ,ಇಂದಬೆಟ್ಟು, ನಾವೂರು ಶಕ್ತಿ ಕೇಂದ್ರಗಳ ಸಭೆ ನಡೆಸಿದರು.
ಎ.14ರಂದು ಸೋಣಂದೂರು,ಮಾಲಾಡಿ, ಕುಕ್ಕಳ,ನಡ, ಧರ್ಮಸ್ಥಳ, ನಡ, ಕನ್ಯಾಡಿ , ಲಾಯಿಲ, ಕೊಯ್ಯೂರು,ಬೆಳಾಲು,ಪಾರೆಂಕಿ, ಮಚ್ಚಿನ, ತಣ್ಣೀರುಪಂಥ, ಪುತ್ತಿಲ,ಬಾರ್ಯ,ತೆಕ್ಕಾರು, ಇಳಂತಿಲ, ಮೊಗ್ರು, ಬಂದಾರು, ಉರುವಾಲು ಕಣಿಯೂರು, ನ್ಯಾಯತರ್ವು ಕಳಿಯ ಓಡಿಲ್ಲಾಳ, ಕುವೆಟ್ಟು ಮೇಲಂತಬೆಟ್ಟು ಸವಣಾಲು,ರ್ಶಿಲು, ಕರಂಬಾರು ಸುಬ್ಬೇರಿನೊಗು ಮುಂಡೂರು ಶಕ್ತಿ ಕೇಂದ್ರಗಳ ಸಭೆ ನಡೆಸಿದರು.

ಇಂದು ಎ. 15ರಂದು ಬೆಳ್ತಂಗಡಿನಗರಶಕ್ತಿಕೇಂದ್ರದ ಸಭೆನಡೆಸುವ ಮೂಲಕ ಅಭ್ಯರ್ಥಿ ಘೋಷಣೆಯಾದ ಕೇವಲ‌ 4 ದಿನದಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮಗಳನ್ನು ಸಂಪರ್ಕಿಸಿದಂತಾಗಿದೆ. 4ದಿನಗಳ ಅಂತರದಲ್ಲಿ ಬೆಳ್ತಂಗಡಿ ಕ್ಷೇತ್ರದ ಮೂಲೆಮೂಲೆಗಳನ್ನೂ ತಲುಪಿದ್ದು ಮಾತ್ರವಲ್ಲದೆ ಸಭೆ ನಡೆಸಿ ಪಕ್ಷದ ಚಟುವಟಿಕೆಗಳಿಗೆ ವೇಗ ತುಂಬಿದ್ದೂ ಕೂಡಾ ವಿಶೇಷ ಬೆಳಗ್ಗೆ 7ಗಂಟೆಯಿಂದ ಆರಂಭಿಸಿತಡರಾತ್ರಿ 11ರವರೆಗೆ ಗ್ರಾಮಸಂಪರ್ಕ ಮಾಡುವ ಮೂಲಕ ಬಿರುಸಿನ ಪ್ರಚಾರ ಮಾಡಿದರು.

ಶಕ್ತಿಕೇಂದ್ರಗಳ ಪ್ರವಾಸದಲ್ಲಿ ಪಕ್ಷವನ್ನು ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು.ಪ್ರವಾಸದಾದ್ಯಂತ ಅನ್ಯ ಪಕ್ಷಗಳ ಅನೇಕ ಕಾರ್ಯಕರ್ತರು,ನಾಯಕರು ಶಾಸಕ ಹರೀಶ್ ಪೂಂಜಅವರು ನಡೆಸಿದ ಅಭಿವೃದ್ಧಿ ಕಾರ್ಯಗಳನ್ನು ಮೆಟ್ಟಿ ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಬಿಜೆಪಿಗೆ ಸೇರ್ಪಡೆಗೊಂಡರು. ಬಡಕೋಡಿ‌ ಗ್ರಾಮದ ರವಿನಾಯ್ಕ, ಮೂಡುಕೋಡಿ ಗ್ರಾಮದ ಜಯರಾಮ್,ಸುಧಾಕರ್ ಅವರನ್ನು ಹರೀಶ್ ಪೂಂಜಾ ಅವರು ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಅವರೊಂದಿಗೆ ಪಕ್ಷಕ್ಕೆ ಬರಮಾಡಿಕೊಂಡರು.

ಶಕ್ತಿ ಕೇಂದ್ರಗಳ ಸಭೆಯಲ್ಲಿ ಬೆಳ್ತಂಗಡಿ ಮಂಡಲ ಅಧ್ಯಕ್ಷರಾದ ಜಯಂತ್ ಕೋಟ್ಯಾನ್, ಬಿಜೆಪಿ ದಕಜಿಲ್ಲಾ ಉಪಾಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ,ಕೊರಗಪ್ಪನಾಯ್ಕ, ಜಿಲ್ಲಾ ಎಸ್.ಟಿ ಮೋರ್ಚಾ ಅಧ್ಯಕ್ಷರಾದ ಚಿನ್ನಕೇಶವ,ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾದ ಜೋಯಿಲ್‌ಮೆಂಡೋನ್ಸ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದಶ್ರೀನಿವಾಸ್ ರಾವ್, ಗಣೇಶ್ ನಾವೂರು, ಉಪಾಧ್ಯಕ್ಷರಾದ ಸೀತಾರಾಮ್ ಬೆಳಾಲು ಕೊರಗಪ್ಪಗೌಡ ಹಾಗೂ ಪಕ್ಷರ ಮಹಾಶಕ್ತಿ ಕೇಂದ್ರ ಶಕ್ತಿ ಕೇಂದ್ರ ಬೂತ್ ಮಟ್ಟದ ಪದಾಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಸುಲ್ಕೇರಿ ಶ್ರೀ ನೇಮಿನಾಥ ಸ್ವಾಮಿ ಬಸದಿಯ ಜೀರ್ಣೋದ್ದಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ.10 ಲಕ್ಷ ದೇಣಿಗೆ

Suddi Udaya

ಹೊಸಪಟ್ಣ: ಸಾಮೂಹಿಕ ಸತ್ಯನಾರಾಯಣ ಪೂಜೆ, ಧಾರ್ಮಿಕಸಭೆ

Suddi Udaya

ಬೆಳ್ತಂಗಡಿ ಶ್ರಮಿಕ ಕಚೇರಿಗೆ ಸ್ಪೈಡರ್ ಮ್ಯಾನ್ ಜ್ಯೋತಿರಾಜ್ ಭೇಟಿ: ಶಾಸಕ ಹರೀಶ್ ಪೂಂಜರಿಂದ ಸನ್ಮಾನ

Suddi Udaya

ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ರವರನ್ನು ಭೇಟಿಯಾದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು

Suddi Udaya

ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್‌ ರವರನ್ನು ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ನೇಮಕ

Suddi Udaya

ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ‘ಯಕ್ಷ ಶಿಕ್ಷಣ’ ಕಾರ್ಯಕ್ರಮ ಉದ್ಘಾಟನೆ

Suddi Udaya
error: Content is protected !!