26.3 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆಜಿಲ್ಲಾ ಸುದ್ದಿತಾಲೂಕು ಸುದ್ದಿಬೆಳ್ತಂಗಡಿರಾಜಕೀಯ

ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮ್ ಅವರ ಚುನಾವಣಾ ಕಚೇರಿ ಉದ್ಘಾಟನೆ

ಬೆಳ್ತಂಗಡಿ: ಬೆಳ್ತಂಗಡಿ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ಮುಖ್ಯ ದ್ವಾರದ ಬಳಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮ್ ರವರ ಚುನಾವಣಾ ಕಚೇರಿಯ ಉದ್ಘಾಟನಾ ಕಾರ್ಯಕ್ರಮ ಎ.15ರಂದು ನಡೆಯಿತು.

ಕಚೇರಿಯನ್ನು ಮಾಜಿ ಶಾಸಕ ಕೆ. ವಸಂತ ಬಂಗೇರ ಉದ್ಘಾಟಿಸಿ ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವುದು ಗ್ಯಾರಂಟಿ ಎಂದರು.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮ್ ಮಾತನಾಡಿ ಇವತ್ತು ಚುನಾವಣಾ ಕಾರ್ಯಾಲಯ ಉದ್ಘಾಟಿಸಿದ್ದೇವೆ. ಮುಂದಿನ ದಿನ ಇದೇ ಕಚೇರಿಯಲ್ಲಿ ವಿಜಯೋತ್ಸವ ಆವರಿಸುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ನಗರ ಅಧ್ಯಕ್ಷ ಶೈಲೇಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ಗ್ರಾಮೀಣ ಅಧ್ಯಕ್ಷ ರಂಜನ್ ಜಿ ಗೌಡ ,ಪ್ರಚಾರ ಸಮಿತಿ ಸಂಯೋಜಕ ಭಗೀರಥ ಜಿ, ಪ್ರಮುಖರಾದ ಮನೋಹರ್ ಇಳಂತಿಲ, ಅಭಿನಂದನ್ ಹರೀಶ್ ಕುಮಾರ್, ಧರಣೇಂದ್ರ ಕುಮಾರ್, ಶೇಖರ್ ಕುಕ್ಕೇಡಿ, ಅಮಿತಾ ಪೂಜಾರಿ ,ವಿನ್ಸೆಂಟ್ ಡಿಸೋಜಾ, ಅಬ್ದುಲ್ ರಹಿಮಾನ್ ಪಡ್ಪು, ಬಿ.ಕೆ ವಸಂತ, ಇಸ್ಮಾಯಿಲ್ ಕೆ, ಉಷಾ ಶರತ್, ಪ್ರಶಾಂತ್ ವೇಗಸ್, ಜಗದೀಶ್ ಡಿ, ವಂದನಾ ಭಂಡಾರಿ,ಸತೀಶ್ ಕಾಶಿಪಟ್ಣ, ಬಿ.ಎಂ ಹಮೀದ್, ಪ್ರಶಾಂತ್ ಮಚ್ಚಿನ, ಅನೂಪ್ ಬಂಗೇರ, ರಫೀಕ್, ಮೋಹನ್ ಶೆಟ್ಟಿಗಾರ್, ಪದ್ಮನಾಭ ಸಾಲಿಯಾನ್, ಯಶೋಧ ಕುತ್ಲೂರು, ವಸಂತಿ ಸಿ ಪೂಜಾರಿ, ಅಶ್ವಥ್ ಕಲ್ಲಾಜೆ, ಸಾಹುಲ್ ಹಮೀದ್ ಮತ್ತು ಪಕ್ಷದ ನಾಯಕರುಗಳು, ಕಾರ್ಯಕರ್ತರು ಉಪಸ್ಥಿತರಿದ್ದರು ‌.

Related posts

ಬಂದಾರು : ಮೈರೋಳ್ತಡ್ಕ ಸ.ಉ.ಪ್ರಾ. ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

Suddi Udaya

ಉಜಿರೆ : ಮುದ್ರಣ ಯಂತ್ರದ ಉದ್ಘಾಟನೆ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಟಿ ಔಷಧಿಗಳ ಪ್ರಾತ್ಯಕ್ಷಿಕೆ

Suddi Udaya

ಕುತ್ಲೂರು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ತ್ರೈಮಾಸಿಕ ಸಭೆ ಹಾಗೂ ಮಂಜೂರಾತಿ ಪತ್ರ ವಿತರಣೆ

Suddi Udaya

ಹತ್ಯಡ್ಕ: ಬೂಡುಮುಗೇರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಮಹೋತ್ಸವ: ಮಹಾಪೂಜೆ, ದರ್ಶನ ಬಲಿ ನಂತರ ಬಟ್ಟಲು ಕಾಣಿಕೆ

Suddi Udaya

ಬಿಜೆಪಿ ಮಹಿಳಾ ಮೋರ್ಚಾದಿಂದ ಉಜಿರೆಯಲ್ಲಿ ದ್ವಿಚಕ್ರ ವಾಹನ ರ್‍ಯಾಲಿ :

Suddi Udaya
error: Content is protected !!