ನಾರಾವಿ: “ಕಲ್ಕುಡ ಮಹಿಮೆ” ತುಳು ಭಕ್ತಿ ಗೀತೆ ಬಿಡುಗಡೆ

Suddi Udaya

ನಾರಾವಿ : ಉಜಿರೆ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಟಿ. ಏನ್ ಕ್ರಿಯೇಷನ್ ರವರ  ವಜ್ರನಾಭ ಜೈನ್ ನಾರಾವಿ ನಿರ್ಮಾಣದ ಸುರೇಂದ್ರ ಜೈನ್ ನಾರಾವಿ ನಿರ್ದೇಶನದ ಕಲ್ಕುಡ ಮಹಿಮೆ ಎಂಬ ತುಳು ಭಕ್ತಿ ಗೀತೆ ಇತ್ತೀಚೆಗೆ ಅರಸಕಟ್ಟೆ ಕೊಲಾನಿ,ಕುತ್ಲೂರು ಶ್ರೀ ಕಲ್ಕುಡ, ಕಲ್ಲುರ್ಟಿ, ಪಂಜುರ್ಲಿ ದೈವಸ್ಥಾನದಲ್ಲಿ ಬಿಡುಗಡೆಗೊಂಡಿತ್ತು.

ಶ್ರೀ ಕಲ್ಕುಡ, ಕಲ್ಲುರ್ಟಿ, ಪಂಜುರ್ಲಿ ದೈವದ ಮಹಿಮೆಯನ್ನು ಸಾರುವ ದೃಶ್ಯದ ಮೂಲಕ ವಿಭಿನ್ನ ಶೈಲಿಯ ಭಕ್ತಿಗೀತೆಯನ್ನು  ವಜ್ರನಾಭ ಜೈನ್ ನಾರಾವಿ ಲೋಕಾರ್ಪಣೆಗೊಳಿಸಿದರು. ಈ ಭಕ್ತಿ ಗೀತೆಯ ಸಾಹಿತ್ಯ ಶ್ರೀ ಪಾರ್ಶ್ವನಾಥ  ಜೈನ್ ಕಕ್ಯಪದವು ಗಾಯನ ಮತ್ತು ವಿಡಿಯೋ ಚಿತ್ರೀಕರಣ ಗಣೇಶ್ ಹೆಗ್ಡೆ ಧನ್ವಿತಾ ಸ್ಟುಡಿಯೋ ನಾರಾವಿ ಪರಿಕಲ್ಪನೆ ಹರಿಶ್ಚಂದ್ರ ಪೂಜಾರಿ ನಾರಾವಿ ಸಂಕಲನ ರಕ್ಷಿತ್ ರೈ ತಾಂತ್ರಿಕ ಸಲಹೆ ಯಶವಂತ್ ಬೆಳ್ತಂಗಡಿ ಸಹಕರಿಸಿದ್ದಾರೆ. ಕ್ಷೇತ್ರದ ಅರ್ಚಕರಾದ ರಮೇಶ್ ಭಟ್ ಕೊಕ್ರಾಡಿ ಶುಭ ಹಾರೈಸಿದರು. ತಂಡದ ಸದಸ್ಯರಾದ ಸೂರಜ್ ಜೈನ್, ಶೀನ ಪೂಜಾರಿ, ಯೋಗೀಶ್ ಶೆಟ್ಟಿ ಹಾಗೂ ಭಕ್ತ ವೃಂದ ಉಪಸ್ಥಿತರಿದ್ದರು.

Leave a Comment

error: Content is protected !!